ನಿಮ್ಮ ಪ್ರಶ್ನೆ : ನಾನು ಮಾಜಿ ಸೈನಿಕನಾಗಿದ್ದು, ದಿನಾಂಕ : 31.01.2014 ರಂದು ಪ್ರೌಢಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ್ದೇನೆ. ನನ್ನ ಜನ್ಮ ದಿನಾಂಕ: 03.05.1962 ಆಗಿದ್ದು, ನನಗೆ ಎರಡು ವರ್ಷ ಹೆಚ್ಚುವರಿ ಹಣ ಸೇವೆ ಲಭ್ಯವಾಗುವುದೇ? 2019ರ ಜನವರಿಯಲ್ಲಿ ಮೂಲ ವೇತನ ರೂ.52,650/- ಆಗಿದ್ದು, ನನಗೆ ಪಿಂಚಣಿ, ನಿವೃತ್ತಿ ಉಪದಾನ ಮತ್ತು ಕಮ್ಯೂಟೇಷನ್ ಎಷ್ಟು ದೊರಕ್ಕುತ್ತದೆ.
ಚಂದ್ರಶೇಖರ್ ರೆಡ್ಡಿ | ಬಳ್ಳಾರಿ
ತಜ್ಞರು ನೀಡಿದ ಉತ್ತರ: ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ನಿಯಮ 247(ಬಿ) ಪ್ರಕಾರ ಸೈನಿಕ ಪಿಂಚಣಿಗೆ ಬದಲು ರಾಜ್ಯ ಸರ್ಕಾರಕ್ಕೆ ಸಂಯ್ಯೋಜಿತ ಪಿಂಚಣಿಗಾಗಿ ಹಿಂದಿನ ಸೈನಿಕ ಸೇವೆಯನ್ನು ತೆಗೆದುಕೊಳ್ಳಲು ಅನುಮತಿಸಲಾ ಗಿಲ್ಲದಿದ್ದರೆ, ಗರಿಷ್ಠ ನಾಲ್ಕು ವರ್ಷಗಳಷ್ಟು ಅರ್ಹತಾದಾಯಕ ಸೇವೆಗೆ ಸೇರಿಸಲಾಗುತ್ತದೆ. ಆದ್ದರಿಂದ ದಿನಾಂಕ : 31.10.2022 ರಂದು ಒಟ್ಟು ಅರ್ಹ ಸೇವೆ 22 ವರ್ಷಗಳಾಗಿರುತ್ತವೆ. ಮತ್ತು ಅಂತಿಮ ಉಪಲಬ್ದಿ ರೂ.52,650/- ಆಗುವುದರಿಂದ ಲೆಕ್ಕಾಚಾರದ ರೀತಿ, ಪಿಂಚಣಿ ರೂ.20,182/-, ನಿವೃತ್ತಿಉಪದಾನ ರೂ.6,05,475/- ಹಾಗೂ ಕಮ್ಯೂಟೇಷನ್ ಮೊಬಲಗು ರೂ.9,52,590/- ಆಗುತ್ತದೆ.
ನಿಮ್ಮ ಪ್ರಶ್ನೆ/ಸಮಸ್ಯೆಯನ್ನು ಕಳುಹಿಸಬೇಕಾದ ಇ-ಮೇಲ್ ವಿಳಾಸ: janasamparka@vistaranews.com
ತಜ್ಞರ ಪರಿಚಯ: ಸರ್ಕಾರಿ ನೌಕರರಿಗಿರುವ ಹಕ್ಕು, ಸೇವಾ ಕಾನೂನು, ನೀತಿಗಳ ಕುರಿತು ಆಳವಾಗಿ ಅಭ್ಯಾಸ ನಡೆಸಿರುವ ಲ. ರಾಘವೇಂದ್ರ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ನಿರಂತರವಾಗಿ ದನಿ ಎತ್ತುತ್ತಾ ಬಂದವರು.
ವಿಜ್ಞಾನ ಪದವಿಯೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ ಮತ್ತು ಶೀಘ್ರಲಿಪಿ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸೇವಾ ಕಾನೂನು, ಇಲಾಖಾ ಪರೀಕ್ಷೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸೇವಾ ಕಾನೂನು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದು, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇದನ್ನೂ ಓದಿ | ನೌಕರ ಮಿತ್ರ | ಸರ್ಕಾರಿ ನೌಕರನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬಹುದೇ?