ನಿಮ್ಮ ಪ್ರಶ್ನೆ : ನಾನು ಸರ್ಕಾರಿ ನೌಕರನಾಗಿದ್ದೇನೆ. ನನ್ನ ಹೆಂಡತಿ ಕೂಡ ಸರ್ಕಾರದ ಸೇವೆಯಲ್ಲಿ “ಡಿʼʼ ಗುಂಪಿನ ನೌಕರಳಾಗಿದ್ದಾಳೆ. ಸದ್ಯ ಪ್ರೊಬೇಷನರಿಯ ಅವಧಿಯಲ್ಲಿದ್ದಾಳೆ. ನಾವು ರಿಜಿಸ್ಟರ್ ಮದುವೆಯಾಗಿದ್ದು, ಒಂದು ವರ್ಷದ ನಂತರ ಅವಳ ಸೇವಾ ಪುಸ್ತಕದಲ್ಲಿ ಮದುವೆ ಬಗ್ಗೆ ನಮೂದಿಸಬೇಕೆಂದಿದೆ. ಇದರಿಂದ ನನ್ನ ಪತ್ನಿಯ ಕೆಲಸಕ್ಕೆ ತೊಂದರೆಯಾಗುತ್ತದೆಯೇ?
ಶಿವಾನಂದ ಕತ್ತಿ | ಹಾವೇರಿ
ತಜ್ಞರು ನೀಡಿದ ಉತ್ತರ: ಕರ್ನಾಟಕ ಸರ್ಕಾರಿ ಸೇವಾ ನಿಯಮ ೩೦೨ರಂತೆ ಸರ್ಕಾರಿ ನೌಕರರು ವಿವಾಹವಾದ ನಂತರ ನಾಮ ನಿರ್ದೇಶನವನ್ನು ಅಗತ್ಯ ದಾಖಲೆಗಳೊಂದಿಗೆ ಮಾಡಬಹುದು. ಇದಕ್ಕೆ ನಿಯಮಾವಳಿಯಲ್ಲಿ ಯಾವುದೇ ಕಾಲಮಿತಿ ಇಲ್ಲದಿರುವುದರಿಂದ ನಿಮ್ಮ ಮದುವೆ ಮಾಹಿತಿಯನ್ನು ಸೇವಾ ಪುಸ್ತಕದಲ್ಲಿ ನಮೂದಿಸಲು ತೊಂದರೆಯಾಗುವುದಿಲ್ಲ. ಅಲ್ಲದೇ ನಿಮ್ಮ ಪತ್ನಿಯ ಕೆಲಸಕ್ಕೂ ಸಮಸ್ಯೆಯಾಗುವುದಿಲ್ಲ.
ನಿಮ್ಮ ಪ್ರಶ್ನೆ/ಸಮಸ್ಯೆಯನ್ನು ಕಳುಹಿಸಬೇಕಾದ ಇ-ಮೇಲ್ ವಿಳಾಸ: janasamparka@vistaranews.com
ತಜ್ಞರ ಪರಿಚಯ: ಸರ್ಕಾರಿ ನೌಕರರಿಗಿರುವ ಹಕ್ಕು, ಸೇವಾ ಕಾನೂನು, ನೀತಿಗಳ ಕುರಿತು ಆಳವಾಗಿ ಅಭ್ಯಾಸ ನಡೆಸಿರುವ ಲ. ರಾಘವೇಂದ್ರ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ನಿರಂತರವಾಗಿ ದನಿ ಎತ್ತುತ್ತಾ ಬಂದವರು.
ವಿಜ್ಞಾನ ಪದವಿಯೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ ಮತ್ತು ಶೀಘ್ರಲಿಪಿ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸೇವಾ ಕಾನೂನು, ಇಲಾಖಾ ಪರೀಕ್ಷೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸೇವಾ ಕಾನೂನು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದು, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇದನ್ನೂ ಓದಿ | ನೌಕರ ಮಿತ್ರ | ಸರ್ಕಾರಿ ನೌಕರನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬಹುದೇ?