Site icon Vistara News

ನೌಕರ ಮಿತ್ರ | ನಾನು ವೈಯಕ್ತಿಕ ಕಾರಣಗಳಿಂದ ನಿವೃತ್ತಿ ಪಡೆದರೆ ಸಿಗುವ ನಿವೃತ್ತಿ ಸೌಲಭ್ಯಗಳೇನು?

pension money

ನಿಮ್ಮ ಪ್ರಶ್ನೆ : ನಾನು ಕರ್ನಾಟಕ ಲೋಕಸೇವಾ ಆಯೋಗದಿಂದ ಪ್ರಥಮ ದರ್ಜೆ ಸಹಾಯಕನಾಗಿ ಆಯ್ಕೆಗೊಂಡು ಪ್ರಸ್ತುತ ಸರ್ಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. 25 ವರ್ಷ ಸೇವೆ ಪೂರೈಸಿದ್ದು, ಈಗ ನನಗೆ 54 ವರ್ಷ ವಯಸ್ಸಾಗಿದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೇನೆ. ನಾನು ವೈಯಕ್ತಿಕ ಕಾರಣಗಳಿಗಾಗಿ ಸ್ವ ಇಚ್ಛೆ ನಿವೃತ್ತಿ ಪಡೆದಲ್ಲಿ ನನಗೆ ಸಿಗುವ ಅರ್ಹತಾದಾಯಕ ಸೇವೆ ಎಷ್ಟು? ಹಾಗೂ ಸಿಗುವ ನಿವೃತ್ತಿ ಸೌಲಭ್ಯಗಳು ಯಾವುವು?
ಸುರೇಶ್ ಎಂ. ಜುಮ್ಮನವರ್ | ಬಳ್ಳಾರಿ

ತಜ್ಞರು ನೀಡಿದ ಉತ್ತರ: ನೀವು ವೈಯಕ್ತಿಕ ಕಾರಣಗಳಿಂದ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285 (2) ರಂತೆ ಸ್ವ ಇಚ್ಛೆಯಿಂದ ನಿವೃತ್ತಿ ಪಡೆದರೆ ನೀವು 5 ವರ್ಷಗಳ ವರೆಗಿನ ಸೇವಾ ಅಧಿಕ್ಯವನ್ನು (ವೆಟೇಜ್) ಪಡೆಯುವುದರಿಂದ ನಿಮ್ಮ ಮೂಲ ವೇತನದ ಶೇ. 50ರಷ್ಟು ಮೊಬಲಗು ನಿವೃತ್ತಿ ವೇತನವಾಗಿ ಲಭ್ಯವಾಗುವುದು. ಅಲ್ಲದೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯಂತೆ ನಿಮಗೆ ನಿವೃತ್ತಿ ಉಪದಾನ, ಮುಂತಾದ ಎಲ್ಲಾ ಸೇವಾ ಸೌಲಭ್ಯಗಳು ಲಭ್ಯವಾಗುತ್ತವೆ.

ನಿಮ್ಮ ಪ್ರಶ್ನೆ/ಸಮಸ್ಯೆಯನ್ನು ಕಳುಹಿಸಬೇಕಾದ ಇ-ಮೇಲ್‌ ವಿಳಾಸ: janasamparka@vistaranews.com

ತಜ್ಞರ ಪರಿಚಯ: ಸರ್ಕಾರಿ ನೌಕರರಿಗಿರುವ ಹಕ್ಕು, ಸೇವಾ ಕಾನೂನು, ನೀತಿಗಳ ಕುರಿತು ಆಳವಾಗಿ ಅಭ್ಯಾಸ ನಡೆಸಿರುವ ಲ. ರಾಘವೇಂದ್ರ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ನಿರಂತರವಾಗಿ ದನಿ ಎತ್ತುತ್ತಾ ಬಂದವರು.
ವಿಜ್ಞಾನ ಪದವಿಯೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ ಮತ್ತು ಶೀಘ್ರಲಿಪಿ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸೇವಾ ಕಾನೂನು, ಇಲಾಖಾ ಪರೀಕ್ಷೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸೇವಾ ಕಾನೂನು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದು, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇದನ್ನೂ ಓದಿ | ನೌಕರ ಮಿತ್ರ | ಸರ್ಕಾರಿ ನೌಕರನು ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಬಹುದೇ?

Exit mobile version