ನಿಮ್ಮ ಪ್ರಶ್ನೆ : ನಾವಿಬ್ಬರು ಅಂದರೆ ನಾನು ಮತ್ತು ನನ್ನ ಪತ್ನಿ ಸರ್ಕಾರಿ ನೌಕರರಾಗಿದ್ದು, ಜಮೀನು ಖರೀದಿಸಬೇಕು ಎಂದುಕೊಂಡಿದ್ದೇವೆ. ಇದಕ್ಕೆ ಅವಕಾಶವಿದೆಯೇ? ಯಾವ ನಿಯಮದಡಿಯಲ್ಲಿ ಜಮೀನನ್ನು ಖರೀದಿಸಬಹುದು?
ಟಿ.ಎಲ್. ರವೀಂದ್ರ ಭಟ್ | ಬೆಂಗಳೂರು
ತಜ್ಞರು ನೀಡಿದ ಉತ್ತರ: ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು 2021ರ ನಿಯಮ 24ರಡಿಯಲ್ಲಿ ಯಾರೇ ಸರ್ಕಾರಿ ನೌಕರರು ಸ್ಥಿರ ಅಥವಾ ಚರಾಸ್ಥಿಯನ್ನು ಖರೀದಿಸುವ ಮೊದಲು ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯಬೇಕು. ಹೀಗೆ ಸ್ಥಿರಾಸ್ಥಿ ಖರೀದಿಸಿದ ಮೇಲೆ ಇದಕ್ಕೆ ಸಂಬಂಧಿಸಿದ ಆದಾಯದ ಮೂಲಗಳನ್ನು ತಿಳಿಸಿ ಮುಂದಿನ ಆಸ್ತಿ ಮತ್ತು ಋಣ ಪಟ್ಟಿಕೆಯಲ್ಲಿ ಇಬ್ಬರೂ ಸರ್ಕಾರಿ ನೌಕರರು ಸರ್ಕಾರಕ್ಕೆ ಇದನ್ನು ತಿಳಿಸಬೇಕು.
ನಿಮ್ಮ ಪ್ರಶ್ನೆ/ಸಮಸ್ಯೆಯನ್ನು ಕಳುಹಿಸಬೇಕಾದ ಇ-ಮೇಲ್ ವಿಳಾಸ: janasamparka@vistaranews.com
ತಜ್ಞರ ಪರಿಚಯ: ಸರ್ಕಾರಿ ನೌಕರರಿಗಿರುವ ಹಕ್ಕು, ಸೇವಾ ಕಾನೂನು, ನೀತಿಗಳ ಕುರಿತು ಆಳವಾಗಿ ಅಭ್ಯಾಸ ನಡೆಸಿರುವ ಲ. ರಾಘವೇಂದ್ರ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ನಿರಂತರವಾಗಿ ದನಿ ಎತ್ತುತ್ತಾ ಬಂದವರು.
ವಿಜ್ಞಾನ ಪದವಿಯೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ ಮತ್ತು ಶೀಘ್ರಲಿಪಿ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸೇವಾ ಕಾನೂನು, ಇಲಾಖಾ ಪರೀಕ್ಷೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸೇವಾ ಕಾನೂನು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದು, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇದನ್ನೂ ಓದಿ | ನೌಕರ ಮಿತ್ರ | ನಾನು ವೈಯಕ್ತಿಕ ಕಾರಣಗಳಿಂದ ನಿವೃತ್ತಿ ಪಡೆದರೆ ಸಿಗುವ ನಿವೃತ್ತಿ ಸೌಲಭ್ಯಗಳೇನು?