ನಿಮ್ಮ ಪ್ರಶ್ನೆ : ನಾನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ 30 ವರ್ಷ ಸೇವೆ ಸಲ್ಲಿಸಿದ್ದು, ದಿನಾಂಕ: 31-10-2022 ರಂದು ನಿವೃತ್ತನಾಗಲಿದ್ದೇನೆ. 2021ರ ಅಕ್ಟೋಬರ್‌ನಲ್ಲಿ ಮುಖ್ಯೋಪಾಧ್ಯಾಯರ ಹುದ್ದೆಗೆ ಪದೋನ್ನತಿ ನೀಡಲಾಗಿತ್ತು. ಆದರೆ ವೈಯಕ್ತಿಕ ತೊಂದರೆಗಳಿಂದ ಅದನ್ನು ನಿರಾಕರಿಸಿದೆ. ನನಗೆ ನಿವೃತ್ತಿಗೆ ಮೊದಲು ಮತ್ತೆ ಪದೋನ್ನತಿ ದೊರೆಯುತ್ತದೆಯೇ?
ಬಿ.ಎಸ್. ಪಾಟೀಲ, ಧಾರವಾಡ
ತಜ್ಞರು ನೀಡಿದ ಉತ್ತರ: 1977ರ ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಯ ನಿಯಮ 4ಎ(2) ರಂತೆ ಸರ್ಕಾರಿ ನೌಕರನು ಪದೋನ್ನತಿಯನ್ನು ನಿರಾಕರಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಪರಿಗಣಿಸತಕ್ಕದ್ದಲ್ಲವೆಂದು ಸೂಚಿಸಲಾಗಿದೆ. ಆದ್ದರಿಂದ ನಿಮಗೆ ನಿವೃತ್ತಿಗೆ ಮೊದಲು ಪದೋನ್ನತಿ ನೀಡಲು ಅವಕಾಶವಿರುವುದಿಲ್ಲ.
ತಜ್ಞರ ಪರಿಚಯ: ಸರ್ಕಾರಿ ನೌಕರರಿಗಿರುವ ಹಕ್ಕು, ಸೇವಾ ಕಾನೂನು, ನೀತಿಗಳ ಕುರಿತು ಆಳವಾಗಿ ಅಭ್ಯಾಸ ನಡೆಸಿರುವ ಲ. ರಾಘವೇಂದ್ರ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ನಿರಂತರವಾಗಿ ದನಿ ಎತ್ತುತ್ತಾ ಬಂದವರು.
ವಿಜ್ಞಾನ ಪದವಿಯೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ ಮತ್ತು ಶೀಘ್ರಲಿಪಿ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸೇವಾ ಕಾನೂನು, ಇಲಾಖಾ ಪರೀಕ್ಷೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸೇವಾ ಕಾನೂನು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದು, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇದನ್ನೂ ಓದಿ | Naukra Mitra | ಕಾಲಮಿತಿ ವೇತನ ಬಡ್ತಿಯನ್ನು 2ನೇ ಬಾರಿಗೆ ಪಡೆಯಬಹುದೇ?