Site icon Vistara News

ನೌಕರ ಮಿತ್ರ | ಎರಡನೇ ಹೆರಿಗೆ ಸಮಯದಲ್ಲಿ ನನಗೆ ಅವಳಿಮಕ್ಕಳಾಗಿವೆ; ವಿಶೇಷ ಬಡ್ತಿಯನ್ನು ಪಡೆಯಬಹುದೇ?

ನೌಕರ ಮಿತ್ರ

ನಿಮ್ಮ ಪ್ರಶ್ನೆ : ನಾನು ಸರ್ಕಾರಿ ಪ್ರೌಢಶಾಲಾ ಶಿಕ್ಷಕಿಯಾಗಿ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. 2018ರಲ್ಲಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, 2022ರ ಮೇ ತಿಂಗಳಿನಲ್ಲಿ ಎರಡನೆ ಹೆರಿಗೆ ಸಂದರ್ಭದಲ್ಲಿ ಅವಳಿ ಗಂಡು ಮಕ್ಕಳಾಗಿವೆ. ನನಗೀಗ ಒಟ್ಟು ಮೂರು ಮಕ್ಕಳಿದ್ದು, ನಾನು ಕುಟುಂಬ ಯೋಜನೆ ಅನುಸರಣಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು, ಈ ಸಂಬಂಧ ವೈಯಕ್ತಿಕ ವೇತನರೂಪದಲ್ಲಿ ವಿಶೇಷ ಬಡ್ತಿಯನ್ನು ನೀಡಲು ತಿರಸ್ಕರಿಸಿದ್ದಾರೆ. ಇದು ಸರಿಯಾದ ಕ್ರಮವೇ?
ದಿವ್ಯಾ ಎನ್. ಪಾಟೀಲ್ | ಗದಗ

ತಜ್ಞರು ನೀಡಿದ ಉತ್ತರ: ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ : ಎಫ್‌ಡಿ/59/ಎಸ್‌ಆರ್‌ಎಸ್ 1993 ದಿನಾಂಕ : 29.06.1993ರ ಅನ್ವಯ ಮೊದಲು ಒಂದು ಮಗವಿನ ನಂತರ ಅವಳಿ/ತ್ರಿವಳಿ ಮಕ್ಕಳಾದರೂ, ಕುಟುಂಬ ಯೋಜನೆ ಅನುಸರಣಿ ಮಾಡುವ ಸರ್ಕಾರಿ ನೌಕರಳಿಗೆ ವೈಯಕ್ತಿಕ ವೇತನರೂಪದಲ್ಲಿ ನೀಡುವ ವಿಶೇಷ ಬಡ್ತಿಯನ್ನು ಮಂಜೂರು ಮಾಡಬೇಕಾಗುತ್ತದೆ. ಈ ಆದೇಶದ ಹಿನ್ನಲೆಯಲ್ಲಿ ಪುನಃ ಮನವಿ ಸಲ್ಲಿಸಿರಿ.

ನಿಮ್ಮ ಪ್ರಶ್ನೆ/ಸಮಸ್ಯೆಯನ್ನು ಕಳುಹಿಸಬೇಕಾದ ಇ-ಮೇಲ್‌ ವಿಳಾಸ: janasamparka@vistaranews.com

ತಜ್ಞರ ಪರಿಚಯ: ಸರ್ಕಾರಿ ನೌಕರರಿಗಿರುವ ಹಕ್ಕು, ಸೇವಾ ಕಾನೂನು, ನೀತಿಗಳ ಕುರಿತು ಆಳವಾಗಿ ಅಭ್ಯಾಸ ನಡೆಸಿರುವ ಲ. ರಾಘವೇಂದ್ರ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ನಿರಂತರವಾಗಿ ದನಿ ಎತ್ತುತ್ತಾ ಬಂದವರು.
ವಿಜ್ಞಾನ ಪದವಿಯೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ ಮತ್ತು ಶೀಘ್ರಲಿಪಿ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸೇವಾ ಕಾನೂನು, ಇಲಾಖಾ ಪರೀಕ್ಷೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸೇವಾ ಕಾನೂನು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದು, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇದನ್ನೂ ಓದಿ | Naukra Mitra | ಕಾಲಮಿತಿ ವೇತನ ಬಡ್ತಿಯನ್ನು 2ನೇ ಬಾರಿಗೆ ಪಡೆಯಬಹುದೇ?

Exit mobile version