Site icon Vistara News

ನೌಕರ ಮಿತ್ರ | ಸರ್ಕಾರಿ ನೌಕರರು ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ವಾಸಿಸುವುದು ಕಡ್ಡಾಯವೇ?

ನೌಕರ ಮಿತ್ರ

ನಿಮ್ಮ ಪ್ರಶ್ನೆ : ನಾನು ರಾಮನಗರ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ಉಪನ್ಯಾಸಕನಾಗಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಆದರೆ, ನಮ್ಮ ಕಾಲೇಜಿನ ಪ್ರಾಂಶುಪಾಲರು ನಾನು ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲೇ ವಾಸಿಸಬೇಕು ಎನ್ನುತ್ತಿದ್ದಾರೆ. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಸೂಚಿಸಿ.
ಎಲ್‌. ರವಿಶಂಕರ್ | ರಾಮನಗರ

ತಜ್ಞರು ನೀಡಿದ ಉತ್ತರ: ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಾವಳಿ ೨೦೨೧ರ ನಿಯಮ ೮ರಂತೆ ಸರ್ಕಾರಿ ನೌಕರನು ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ವಾಸಿಸಬೇಕು. ಸಾರ್ವತ್ರಿಕ ರಜೆ ಮತ್ತು ಇತರೆ ರಜೆ ದಿನಗಳಂದು ಸಹ ಕೇಂದ್ರಕಾರ್ಯಸ್ಥಾನವನ್ನು ಬಿಡಬೇಕಾದರೆ ಕಚೇರಿ ಮುಖ್ಯಸ್ಥರ ಪೂರ್ವಾನುಮತಿ ಅವಶ್ಯಕ. ನೀವು ರಾಮನಗರದಲ್ಲೇ ವಾಸಿಸಬೇಕು. ಇಲ್ಲದೆ ಹೋದರೆ ಶಿಸ್ತು ಕ್ರಮಕ್ಕೆ ಒಳಪಡಬೇಕಾಗುತ್ತದೆ.

ನಿಮ್ಮ ಪ್ರಶ್ನೆ/ಸಮಸ್ಯೆಯನ್ನು ಕಳುಹಿಸಬೇಕಾದ ಇ-ಮೇಲ್‌ ವಿಳಾಸ: janasamparka@vistaranews.com

ತಜ್ಞರ ಪರಿಚಯ: ಸರ್ಕಾರಿ ನೌಕರರಿಗಿರುವ ಹಕ್ಕು, ಸೇವಾ ಕಾನೂನು, ನೀತಿಗಳ ಕುರಿತು ಆಳವಾಗಿ ಅಭ್ಯಾಸ ನಡೆಸಿರುವ ಲ. ರಾಘವೇಂದ್ರ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ನಿರಂತರವಾಗಿ ದನಿ ಎತ್ತುತ್ತಾ ಬಂದವರು.
ವಿಜ್ಞಾನ ಪದವಿಯೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ ಮತ್ತು ಶೀಘ್ರಲಿಪಿ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸೇವಾ ಕಾನೂನು, ಇಲಾಖಾ ಪರೀಕ್ಷೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸೇವಾ ಕಾನೂನು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದು, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇದನ್ನೂ ಓದಿ | Naukra Mitra | ಕಾಲಮಿತಿ ವೇತನ ಬಡ್ತಿಯನ್ನು 2ನೇ ಬಾರಿಗೆ ಪಡೆಯಬಹುದೇ?

Exit mobile version