Site icon Vistara News

ನೌಕರ ಮಿತ್ರ | ಪದೋನ್ನತಿಗೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಕಡ್ಡಾಯವೇ?

ನೌಕರ ಮಿತ್ರ

ನಿಮ್ಮ ಪ್ರಶ್ನೆ : ನಾನು ಎಸ್.ಎಸ್.ಎಲ್.ಸಿ. ಕನ್ನಡ ಮಾಧ್ಯಮದಲ್ಲಿ ಓದಿ ಪಾಸಾಗಿದ್ದು, ನಂತರ 2 ವರ್ಷಗಳ ಕಾಲ ಐ.ಟಿ.ಐ. ವಿದ್ಯಾರ್ಹತೆಯನ್ನು ಹೊಂದಿರುತ್ತೇನೆ. ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ (ಸಿ & ಆರ್) ಪ್ರಕಟವಾಗಿದೆ. ಇದರಲ್ಲಿ ಗ್ರೂಪ್ ‘ಡಿ’ ಹುದ್ದೆಯಿಂದ ದ್ವಿ.ದ.ಸ. ಹುದ್ದೆಗೆ ಪದೋನ್ನತಿ ಹೊಂದಲು ಐದು ವರ್ಷ ಅವಧಿ ನಿಗಧಿ ಪಡಿಸಿದ್ದು, ನಾನು ನನ್ನ ಹುದ್ದೆಯಲ್ಲಿ 5 ವರ್ಷಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿದ್ದೇನೆ. ಈ ಪದೋನ್ನತಿ ಹೊಂದಲು ಕನ್ನಡ ಭಾಷಾ ಪರೀಕ್ಷೆಯನ್ನು ತೇರ್ಗಡೆ ಹೊಂದುವುದು ಕಡ್ಡಾಯವೇ?
ಬಸವರಾಜ್ ಪಾಟೀಲ್ | ಗದಗ

ತಜ್ಞರು ನೀಡಿದ ಉತ್ತರ: ನೀವು 1974ರ ಕರ್ನಾಟಕ ಸರ್ಕಾರಿ ಸೇವಾ (ಕನ್ನಡ ಭಾಷೆ ಮತ್ತು ಸೇವಾ ಪರೀಕ್ಷೆಗಳು) ನಿಯಮಾವಳಿಯಂತೆ ಇಲಾಖಾ ಪರೀಕ್ಷೆಯಾದ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಿರುತ್ತದೆ. ಆದರೆ ಎಸ್.ಎಸ್.ಎಲ್.ಸಿ. ಪ್ರಥಮ / ದ್ವಿತೀಯ ಭಾಷೆಯಾಗಿ ಅಥವಾ ಉನ್ನತ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಅಧ್ಯಯನ ಮಾಡಿದ್ದರೆ ವಿನಾಯಿತಿ ನೀಡಲಾಗುತ್ತದೆ.

ನಿಮ್ಮ ಪ್ರಶ್ನೆ/ಸಮಸ್ಯೆಯನ್ನು ಕಳುಹಿಸಬೇಕಾದ ಇ-ಮೇಲ್‌ ವಿಳಾಸ: janasamparka@vistaranews.com

ತಜ್ಞರ ಪರಿಚಯ: ಸರ್ಕಾರಿ ನೌಕರರಿಗಿರುವ ಹಕ್ಕು, ಸೇವಾ ಕಾನೂನು, ನೀತಿಗಳ ಕುರಿತು ಆಳವಾಗಿ ಅಭ್ಯಾಸ ನಡೆಸಿರುವ ಲ. ರಾಘವೇಂದ್ರ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ನಿರಂತರವಾಗಿ ದನಿ ಎತ್ತುತ್ತಾ ಬಂದವರು.
ವಿಜ್ಞಾನ ಪದವಿಯೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ ಮತ್ತು ಶೀಘ್ರಲಿಪಿ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸೇವಾ ಕಾನೂನು, ಇಲಾಖಾ ಪರೀಕ್ಷೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸೇವಾ ಕಾನೂನು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದು, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇದನ್ನೂ ಓದಿ | Naukra Mitra | ಕಾಲಮಿತಿ ವೇತನ ಬಡ್ತಿಯನ್ನು 2ನೇ ಬಾರಿಗೆ ಪಡೆಯಬಹುದೇ?

Exit mobile version