Site icon Vistara News

ನೌಕರ ಮಿತ್ರ | ಸರ್ಕಾರಿ ನೌಕರನು ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಬಹುದೇ?

mutual funds investment

ನಿಮ್ಮ ಪ್ರಶ್ನೆ : ಸರ್ಕಾರಿ ನೌಕರನಾದ ನಾನು ನನ್ನ ವೇತನದಿಂದ ಷೇರು ಖರೀದಿಸುವುದು ಮತ್ತು ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಮಾಡಬಹುದೇ? ಇದಕ್ಕೆ ಸರ್ಕಾರದ ಅನುಮತಿ ಏನಾದರೂ ಪಡೆಯುವುದು ಅವಶ್ಯಕವೇ?
ಕೆ. ಎಲ್‌. ಶ್ರೀನಿವಾಸ ಮೂರ್ತಿ | ತುಮಕೂರು

ತಜ್ಞರು ನೀಡಿದ ಉತ್ತರ: ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 2021ರಲ್ಲಿ ಸರ್ಕಾರಿ ನೌಕರರು ಷೇರು ಮಾರುಕಟ್ಟೆ, ಮ್ಯೂಚುವಲ್‌ ಫಂಡ್‌ ಅಥವಾ ಇತರ ಬಂಡವಾಳ ಹೂಡಿಕೆಯಲ್ಲಿ ಸಟ್ಟಾ ವ್ಯಾಪಾರ ಮಾಡತಕ್ಕದ್ದಲ್ಲವೆಂದು ಸೂಚಿಸಿದೆ. ಅಲ್ಲದೇ, ನಿಯಮ 21(2)ರಂತೆ ಸರ್ಕಾರಿ ನೌಕರನು ತನ್ನನ್ನು ಪೇಚಿಗೆ ಸಿಲುಕಿಸುವ ಅಥವಾ ತನ್ನ ಮೇಲೆ ಪರಿಣಾಮವನ್ನುಂಟು ಮಾಡುವ ಸಂಭವವಿರುವ ಯಾವುದೇ ಬಂಡವಾಳ ಹೂಡಿಕೆ ಮಾಡುವಂತಿಲ್ಲವೆಂದು ತಿಳಿಸಿದೆ. ಆದ್ದರಿಂದ ನೀವು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಇವುಗಳಲ್ಲಿ ಹಣ ಹೂಡುವ ಕುರಿತು ಚಿಂತಿಸಬಹುದು.

ನಿಮ್ಮ ಪ್ರಶ್ನೆ/ಸಮಸ್ಯೆಯನ್ನು ಕಳುಹಿಸಬೇಕಾದ ಇ-ಮೇಲ್‌ ವಿಳಾಸ: janasamparka@vistaranews.com

ತಜ್ಞರ ಪರಿಚಯ: ಸರ್ಕಾರಿ ನೌಕರರಿಗಿರುವ ಹಕ್ಕು, ಸೇವಾ ಕಾನೂನು, ನೀತಿಗಳ ಕುರಿತು ಆಳವಾಗಿ ಅಭ್ಯಾಸ ನಡೆಸಿರುವ ಲ. ರಾಘವೇಂದ್ರ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ನಿರಂತರವಾಗಿ ದನಿ ಎತ್ತುತ್ತಾ ಬಂದವರು.
ವಿಜ್ಞಾನ ಪದವಿಯೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ ಮತ್ತು ಶೀಘ್ರಲಿಪಿ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸೇವಾ ಕಾನೂನು, ಇಲಾಖಾ ಪರೀಕ್ಷೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸೇವಾ ಕಾನೂನು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದು, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇದನ್ನೂ ಓದಿ | ನೌಕರ ಮಿತ್ರ | ಒಂದೇ ಸ್ಥಳದಲ್ಲಿ ವಾಸ; ಪತಿ-ಪತ್ನಿ ಇಬ್ಬರೂ ಮನೆ ಬಾಡಿಗೆ ಭತ್ಯೆ ಪಡೆಯಬಹುದೇ?

Exit mobile version