ನಿಮ್ಮ ಪ್ರಶ್ನೆ : ನಾನು ಗ್ರೂಪ್ “ಡಿ’ ನೌಕರನಾಗಿದ್ದು, ರಾತ್ರಿ ವೇಳೆ ರಸ್ತೆ ಅಪಘಾತವಾಗಿ ನನ್ನ ಬಲ ಮೊಣಕಾಲನ್ನು ಕಳೆದುಕೊಂಡಿರುತ್ತೇನೆ. ಅಂಗವೈಕಲ್ಯನಾಗಿರುವ ನನಗೆ ವಿಶೇಷ ಅಂಗವೈಕಲ್ಯತೆ ರಜೆ ಲಭ್ಯವಾಗುತ್ತದೆಯೇ? ನಾನು ಕೃತಕ ಕಾಲನ್ನು ಖರೀದಿಸಿ ಅಳವಡಿಸಿಕೊಳ್ಳಲು ಇಚ್ಛಿಸಿದ್ದೇನೆ. ಈ ಖರೀದಿಗೆ ಸಂಬಂಧಿಸಿದಂತೆ ನನಗೆ ಎಷ್ಟು ಮೊತ್ತದ ಹಣವು ಸರ್ಕಾರದಿಂದ ಮರುಪಾವತಿಯಾಗುತ್ತದೆ? ದಯವಿಟ್ಟು ತಿಳಿಸಿ.
ಸೋಮಸುಂದರ್ ಎನ್. ಕೆ. | ಹುಬ್ಬಳ್ಳಿ
ತಜ್ಞರು ನೀಡಿದ ಉತ್ತರ: ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 136(1)ರಂತೆ ಸರ್ಕಾರಿ ನೌಕರನು ತನ್ನ ಕಚೇರಿ ಕೆಲಸ ನಿರ್ವಹಣೆಯ ಸಮಯದಲ್ಲಿ ಆದ ಗಾಯದಿಂದ ಅಂಗವಿಕಲನಾದರೆ ಅವನಿಗೆ ವಿಶೇಷ ರಜೆ ಲಭ್ಯವಾಗುತ್ತದೆ. 1963ರ ಕರ್ನಾಟಕ ಸರ್ಕಾರಿ ನೌಕರರ ವೈದ್ಯಕೀಯ ಚಿಕಿತ್ಸಾ ನಿಯಮಾವಳಿಯಂತೆ ಕೃತಕ ಕಾಲು ಅಳವಡಿಸಿಕೊಳ್ಳಲು 65,000 ರೂಪಾಯಿಗಳ ಮರು ಸಂದಾಯದ ಅವಕಾಶವಿರುತ್ತದೆ.
ನಿಮ್ಮ ಪ್ರಶ್ನೆ/ಸಮಸ್ಯೆಯನ್ನು ಕಳುಹಿಸಬೇಕಾದ ಇ-ಮೇಲ್ ವಿಳಾಸ: janasamparka@vistaranews.com
ತಜ್ಞರ ಪರಿಚಯ: ಸರ್ಕಾರಿ ನೌಕರರಿಗಿರುವ ಹಕ್ಕು, ಸೇವಾ ಕಾನೂನು, ನೀತಿಗಳ ಕುರಿತು ಆಳವಾಗಿ ಅಭ್ಯಾಸ ನಡೆಸಿರುವ ಲ. ರಾಘವೇಂದ್ರ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ನಿರಂತರವಾಗಿ ದನಿ ಎತ್ತುತ್ತಾ ಬಂದವರು.
ವಿಜ್ಞಾನ ಪದವಿಯೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ ಮತ್ತು ಶೀಘ್ರಲಿಪಿ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸೇವಾ ಕಾನೂನು, ಇಲಾಖಾ ಪರೀಕ್ಷೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 300ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸೇವಾ ಕಾನೂನು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದು, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇದನ್ನೂ ಓದಿ | ನೌಕರ ಮಿತ್ರ | ಸ್ವಯಂ ಚಾಲಿತ ಬಡ್ತಿಗೆ ಎಷ್ಟು ವರ್ಷ ಸೇವೆ ಸಲ್ಲಿಸಿರಬೇಕು?