ಸಂಕಷ್ಟದಲ್ಲಿ ಸಮಯದಲ್ಲಿ ನೆರವಿಗೆ ಬರುವವನೆ ನಿಜವಾದ ಸಂಬಂಧಿ ಎಂಬ ಮಾತಿದೆ. ಕೆಲವೊಮ್ಮೆ ಅದೆಷ್ಟೇ ಆಪ್ತರಾಗಿದ್ದರೂ ಕಷ್ಟ ಎಂದು ಹೇಳಿಕೊಂಡಾಗ ಗೊತ್ತೇ ಆಗದಂತೆ ಕಣ್ಮರೆಯಾಗುವವರೆ ಹೆಚ್ಚು. ಆದರೆ ಕೆಲವರಿರುತ್ತಾರೆ, ಅವರು ಎಂತಹ ಕಷ್ಟ ಎಂದರೂ ಕ್ಷಣ ಮಾತ್ರದಲ್ಲಿ ಓಡಿ ಬಂದು ಸಹಾಯಕ್ಕೆ ನಿಲ್ಲುತ್ತಾರೆ. ದುಃಖದ ಸಮಯದಲ್ಲಿ ಕೈ ಹಿಡಿದು ಸಾಂತ್ವನ ಮಾಡುತ್ತಾರೆ. ಎದುರಾದ ಆಪತ್ತಿನಿಂದ ಹೇಗೆ ಹೊರಬರಬೇಕು ಎಂಬುದನ್ನ ತಿಳಿಸಿಕೊಡುತ್ತಾರೆ. ಅಂಥವರು ನಮ್ಮ ಜೊತೆಗಿದ್ದಾರೆ ಎಂಬುದೇ ಅದೆಷ್ಟೋ ಸಾರಿ ಬೆಟ್ಟದಷ್ಟು ಕಷ್ಟಗಳು ಎದುರಾದರು ಬೆಣ್ಣೆಯಂತೆ ಕರಗಿ ಹೋಗುತ್ತವೆ. ಹಾಗಾದರೆ ಅನುಗಾಲವು ಸಹಾಯಕ್ಕೆ ಬರುವವರು ಯಾರು ಎಂಬ ಪ್ರಶ್ನೆ ಕಾಡಬಹುದು. ಅವರೇ ಈ ಐದು ರಾಶಿಗಳವರು. ಇವರು ಎಂಥದ್ದೇ ಕಷ್ಟ ಇದ್ದರೂ ಕೈಲಾದಷ್ಟು ಸಹಾಯ ಮಾಡೇ ಮಾಡುತ್ತಾರೆ ಎಂದು ಹೇಳುತ್ತದೆ ಜ್ಯೋತಿಷ ಶಾಸ್ತ್ರ. ಹಾಗಾದರೆ ಹಾಗೇ ಸದಾ ಬೇರೆಯವರ ಸಂಕಷ್ಟಗಳಿಗೆ ಜೊತೆಯಾಗುವವ ಆ ಐದು ರಾಶಿಗಳು ಇವರೇ ನೋಡಿ.
ಕರ್ಕ ರಾಶಿ :
ಕರ್ಕ ರಾಶಿಯಯವರು ಸಾಮಾನ್ಯವಾಗಿ ತುಂಬಾ ಸೂಕ್ಷ್ಮಮತಿಗಳು ಹಾಗೂ ಭಾವುಕ ಜೀವಿಗಳು. ಇವರು ತಮಗೆ ಹತ್ತಿರದವರ ಬಗ್ಗೆ ಸದಾ ಕಾಳಜಿಯುಳ್ಳವರಾಗಿರುತ್ತಾರೆ. ಅವರಿಗಾಗಿ ಎಂತಹದ್ದೇ ಸಂದರ್ಭವನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ಪ್ರೀತಿಸಿದವರಿಗಾಗಿ ಪ್ರಾಣ ಕೊಡಲು ತಯಾರಾಗುತ್ತಾರೆ. ಈ ರಾಶಿಯವರು ನಿಮ್ಮ ಆಪ್ತ ವಲಯದಲ್ಲಿ ಇದ್ದಾರೆ ಎಂದರೆ ನೀವು ನಿಶ್ಚಿಂತರಾಗಿರಬಹುದು. ಅವರು ನಮ್ಮನ್ನ ಯಾವತ್ತೂ ಬಿಟ್ಟು ಕೊಡಲಾರರು. ಸ್ವಾರ್ಥವಿಲ್ಲದೆ ಸಹಾಯ ಮಾಡುವ ಮನಸಿನ ಆ ವ್ಯಕ್ತಿಗಳು ಆಪ್ತವಲಯದಲ್ಲಿಯೂ ಇರಬಹುದು ನೋಡಿ.
ಮೀನ ರಾಶಿ :
ಮೀನ ರಾಶಿಯ ವ್ಯಕ್ತಿಗಳು ತುಂಬಾ ಕಾಳಜಿ ತೆಗೆದುಕೊಳ್ಳುವವರಾಗಿರುತ್ತಾರೆ. ಮೃದು ವ್ಯಕ್ತಿತ್ವದ ಸರಳ ಸ್ವಭಾವದವರಾಗಿರುತ್ತಾರೆ. ಸಹಜವಾಗಿ ಇವರು ಸ್ವಚ್ಛಂದವಾಗಿ ಓಡಾಡಿಕೊಂಡಿರಲು ಬಯಸುತ್ತಾರೆ. ಆದರೆ ಸತ್ಯದಿಂದ ಸದಾ ಅಂತರ ಕಾಪಾಡಿಕೊಳ್ಳುವುದರಲ್ಲಿ ಇವರು ನಿಸ್ಸೀಮರು. ಸತ್ಯದ ಸಂದರ್ಭಗಳನ್ನ ಎದುರಿಸುವಲ್ಲಿ ಹಿಂದೇಟು ಹಾಕುತ್ತಾರೆ. ಹಾಗಂತ ಪಲಾಯನವಾದಿಗಳು ಎಂದೇನಲ್ಲ. ತಮ್ಮವರ ಹಾಗೂ ತಮಗೆ ಬೇಕಾದವರ ಯೋಗಕ್ಷೇಮ ವಿಚಾರಿಸುವ ವಿಷಯದಲ್ಲಿ ಸದಾ ಮುಂದಿರುತ್ತಾರೆ. ನಿಸ್ವಾರ್ಥತೆಯಿಂದ ಆಪ್ತರ ಕಾಳಜಿ ತೆಗೆದುಕೊಳ್ಳುತ್ತಾರೆ. ಸದಾ ಅವರ ಒಳಿತನ್ನ ಬಯಸುವವರಾಗಿರುತ್ತಾರೆ.
ಕನ್ಯಾ ರಾಶಿ :
ಕಾಳಜಿ ತೆಗೆದುಕೊಳ್ಳುವಲ್ಲಿ ಮತ್ತು ನೆರವಿಗೆ ಧಾವಿಸುವಲ್ಲಿ ಕನ್ಯಾ ರಾಶಿಯವರು ಮಹಾ ನಿಸ್ಸೀಮರು. ಇವರು ತಮ್ಮ ಪ್ರೀತಿ ಪಾತ್ರರಿಗೆ ಆದರ್ಶವಾಗಿರಲು ಬಯಸುತ್ತಾರೆ. ಕುಟುಂಬದವರ ದೃಷ್ಟಿಯಲ್ಲಿ ತಮ್ಮ ವ್ಯಕ್ತಿತ್ವ ಎಲ್ಲಿಯೂ ಹಾಳಾಗದಂತೆ ಕಾಪಾಡಿಕೊಳ್ಳುವ ಸ್ವಭಾವದವರಾಗಿರುತ್ತಾರೆ. ಯಾವುದೇ ಸಂದರ್ಭವಿದ್ದರೂ ಸಮಾಧಾನದಿಂದ ತಿಳಿ ಹೇಳುವುದು ಇವರ ವೈಶಿಷ್ಟ್ಯತೆ. ತಮ್ಮ ಕುಟುಂಬ ಮತ್ತು ಆಪ್ತವಲಯವೇ ತಮ್ಮ ಅತೀ ದೊಡ್ಡ ಶಕ್ತಿ ಎಂಬುದನ್ನ ಇವರು ಬಲವಾಗಿ ನಂಬುತ್ತಾರೆ. ಹೀಗಾಗಿ ಅವರನ್ನ ಸದಾ ಕಾಪಾಡುವಲ್ಲಿ ಅವರ ಕಷ್ಟಗಳಿಗೆ ನೆರವಾಗುವಲ್ಲಿ ಸಿದ್ಧರಿರುತ್ತಾರೆ. ಬೇರೆಯವರ ಭಾವನೆಗಳಿಗೆ ಸಮಾನ ಗೌರವ ಕೊಡುವುದನ್ನ ಯಾವತ್ತೂ ಮರೆಯುವದಿಲ್ಲ.
ವೃಷಭ ರಾಶಿ :
ಮನುಷ್ಯತ್ವಕ್ಕೆ ಹೆಚ್ಚಿನ ಬೆಲೆ ಕೊಡುವುದು ಹಾಗೂ ಆರ್ಥಿಕವಾಗಿ ದುರ್ಬಲರಾದವರಿಗೆ ಕೈಲಾದ ನೆರವನ್ನ ನೀಡುವುದನ್ನ ಈ ರಾಶಿವರು ಹೆಚ್ಚು ಇಷ್ಟಪಡುತ್ತಾರೆ. ಇವರು ಸ್ನೇಹಿತರ ಸಹಾಯಕ್ಕೆ ಟೊಂಕ ಕಟ್ಟಿ ನಿಲ್ಲಬಲ್ಲವರು ಹಾಗೂ ತಾವು ಪ್ರೀತಿಸುವವರ ಬಗ್ಗೆ ಅತೀವ ಕಾಳಜಿ ತೆಗೆದುಕೊಳ್ಳವರಾಗಿರುತ್ತಾರೆ. ತಮ್ಮವರ ಎಲ್ಲ ಸಂಕಷ್ಟಗಳಿಗೂ ತಾವು ಜೊತೆಯಾಗಲೇಬೇಕು ಎಂಬುದನ್ನ ಬಲವಾಗಿ ನಂಬುವವರು. ಹಾಗೆಯೇ ತಮಗೆ ಬೇಕಾದವರು ಅನುಗಾಲವು ಸುಖ, ಸಂತೋಷದಿಂದ ಇರಲು ಬೇಕಾದ ಸಹಾಯ ಮಾಡುವ ಮನಸ್ಸುಳ್ಳವರಾಗಿರುತ್ತಾರೆ.
ತುಲಾ ರಾಶಿ :
ತುಲಾ ರಾಶಿಯ ವ್ಯಕ್ತಿಗಳು ತಮಗೆ ಸರಿಯೆನಿಸಿದ್ದನ್ನು ಮಾಡುವಲ್ಲಿ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರೆ. ತಾರತಮ್ಯ ಮಾಡದೆ ಎಲ್ಲರಿಗೂ ನ್ಯಾಯ ಸಲ್ಲಬೇಕು ಎಂಬುದನ್ನ ಇವರು ಹೆಚ್ಚು ಇಷ್ಟಪಡುತ್ತಾರೆ. ತಮ್ಮನ್ನ ನಂಬಿದವರಿಗಾಗಿ ಸದಾ ನೆರವಾಗುವುದು ಕೂಡಾ ಇವರ ಅಚ್ಚುಮೆಚ್ಚಿನ ಸ್ವಭಾವ. ಪ್ರೀತಿ ಪಾತ್ರರಿಗೆ ಸದಾ ಒಳಿತಾಗಬೇಕು ಎಂಬುದು ಇವರ ಮನದ ಆಶಯವಾಗಿರುತ್ತದೆ. ಅವರಿಗೇನಾದರೂ ಸಂಕಷ್ಟದ ಘಳಿಗೆ ಎದುರಾದರೆ ಇವರು ಹಿಂದೆ ಮುಂದೆ ಯೋಚಿಸದೆ ಅವರ ಜೊತೆಗೆ ನಿಲ್ಲುತ್ತಾರೆ. ತಮ್ಮ ಆಪ್ತರಿಗೆ ಕಷ್ಟದ ಸಮಯವೇನಾದರು ಎದುರಾದರೆ ಸುಮ್ಮನೆ ನೋಡಿಕೊಂಡು ಕುಳಿತುಕೊಳ್ಳುವ ಜಾಯಮಾನದವರಾಗಿರುವುದಿಲ್ಲ.