Site icon Vistara News

Nava Panchama Yoga : ಸೂರ್ಯ ಮಂಗಳ ಯುತಿಯಿಂದ ನವ ಪಂಚಮ ಯೋಗ; ಯಾವೆಲ್ಲಾ ರಾಶಿಗಳಿಗೆ ಶುಭ ಫಲ?

nava pancham yoga

nava pancham yoga

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದ ಪ್ರತಿ ಗ್ರಹಗಳ ಸ್ಥಾನ ಮತ್ತು ಸ್ಥಿತಿಯ ಆಧಾರದಲ್ಲಿ ಯೋಗಗಳು ಉಂಟಾಗುತ್ತವೆ. ಯೋಗಗಳಲ್ಲಿ ಹಲವಾರು ಯೋಗಗಳಿದ್ದು, ಇದರಲ್ಲಿ “ನವ ಪಂಚಮ ಯೋಗʼʼವು (Nava Panchama Yoga) ಅತ್ಯಂತ ಉತ್ತಮ ಯೋಗವೆಂದು ಪರಿಗಣಿಸಲಾಗಿದೆ. ಈ ಯೋಗ ಸೃಷ್ಟಿಯಾಗಬೇಕಾದರೆ ನವ ಮತ್ತು ಪಂಚಮ ಸ್ಥಾನದಲ್ಲಿ ಮಿತ್ರ ಗ್ರಹಗಳು ಸ್ಥಿತವಾಗಿರಬೇಕು.

ಒಂದು ಗ್ರಹದಿಂದ ಇನ್ನೊಂದು ಗ್ರಹವು 120 ಡಿಗ್ರಿ ದೂರ ಇರುತ್ತವೆ. ಈ ಎರಡೂ ಗ್ರಹಗಳು ಒಂದೇ ತತ್ವದ ರಾಶಿಯಲ್ಲಿ ಇರುತ್ತವೆ. ಅಂದರೆ ಮೇಷ, ಸಿಂಹ, ಧನು ಗ್ರಹಗಳಲ್ಲಿ ಯಾವುದಾದರೂ ಎರಡು ಗ್ರಹಗಳು ನವಪಂಚಮ ಯೋಗದಲ್ಲಿ ಬರುತ್ತವೆ. ಅದೇ ರೀತಿ ವೃಷಭ, ಕನ್ಯಾ ಮತ್ತು ಮಕರ ಹಾಗೂ ಮಿಥುನ, ತುಲಾ ಮತ್ತು ಕುಂಭ ಅಲ್ಲದೆ ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಗಳ ತತ್ವದ ಆಧಾರದ ಮೇಲೆ ಈ ಯೋಗವು ಬರುತ್ತವೆ.

ಈ ಬಾರಿ ಫೆಬ್ರವರಿ 13ರ ವರೆಗೆ ಸೂರ್ಯ ಮತ್ತು ಮಂಗಳ ಗ್ರಹಗಳು ಈ ರೀತಿ ಸ್ಥಿತವಾಗಿರುವ ಕಾರಣ ನವ ಪಂಚಮ ಯೋಗ ಉಂಟಾಗಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳು ಒಂದೇ ರಾಶಿಯಲ್ಲಿ ಸ್ಥಿತವಾಗಿರುವುದಕ್ಕೆ “ಯುತಿʼʼ ಎಂದು ಕರೆಯುತ್ತಾರೆ. ಯುತಿಯ ಜೊತೆ ಜೊತೆಗೆ ಗ್ರಹಗಳ ಸ್ಥಾನವು ಸಹ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಪ್ರಬಲವಾದ ಪ್ರಭಾವವನ್ನು ಬೀರುತ್ತವೆ. ಎರಡು ಮಿತ್ರ ಗ್ರಹಗಳು ಒಂದರಿಂದ ಇನ್ನೊಂದಕ್ಕೆ ಜಾತಕದ ಒಂಬತ್ತು ಮತ್ತು ಐದನೇ ಸ್ಥಾನದಲ್ಲಿ ಸ್ಥಿತವಾಗಿದ್ದರೆ ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಈ ಯೋಗದಿಂದ ಕೆಲವು ರಾಶಿಯ ವ್ಯಕ್ತಿಗಳಿಗೆ ವಿಶೇಷ ಲಾಭ ಉಂಟಾಗುತ್ತದೆ.

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ಇದೇ ರೀತಿ ಸೂರ್ಯ ಮಂಗಳ ಗ್ರಹವು ತ್ರಿಕೋನ ಭಾವದಲ್ಲಿ ಇರುವುದರಿಂದ ನವ ಪಂಚಮ ಯೋಗ ಉಂಟಾಗುತ್ತದೆ. ಸೂರ್ಯ ಗ್ರಹವು ಮಕರ ರಾಶಿಯಲ್ಲಿ ಸ್ಥಿತವಾಗಿದ್ದರೆ, ಮಂಗಳ ಗ್ರಹವು ವೃಷಭ ರಾಶಿಯಲ್ಲಿ ಸ್ಥಿತವಾಗಿದೆ. ಇದರ ಪರಿಣಾಮವಾಗಿ ಉಂಟಾಗುವ ನವ ಪಂಚಮ ಯೋಗದಿಂದ ಕೆಲವು ರಾಶಿಯ ವ್ಯಕ್ತಿಗಳಿಗೆ ಆರ್ಥಿಕ ಲಾಭ ಉಂಟಾಗಲಿದೆ. ಆ ರಾಶಿಗಳು ಯಾವುವು ನೋಡೋಣ.

ಮೇಷ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವ ಪಂಚಮ ಯೋಗದಿಂದ ಈ ರಾಶಿಯ ವ್ಯಕ್ತಿಗಳಿಗೆ ಹೆಚ್ಚಿನ ಲಾಭ ಉಂಟಾಗುತ್ತದೆ. ಈ ರಾಶಿಯ ವ್ಯಕ್ತಿಗಳ ಜಾತಕದಲ್ಲಿ ಮಂಗಳ ಗ್ರಹವು ದ್ವಿತೀಯ ಸ್ಥಾನದಲ್ಲಿ ಸ್ಥಿತವಾಗಿದೆ ಮತ್ತು ಸೂರ್ಯ ಗ್ರಹವು ನವಮ ಸ್ಥಾನದಲ್ಲಿದೆ. ಈ ಸಂದರ್ಭದಲ್ಲಿ ಮೇಷ ರಾಶಿಯ ವ್ಯಕ್ತಿಗಳಿಗೆ ಆಕಸ್ಮಿಕ ಧನಲಾಭವಾಗುವ ಸಂಭವವಿದೆ. ಗೌರವಾದರಗಳು ಹೆಚ್ಚಲಿವೆ. ಈ ಸಮಯದಲ್ಲಿ ಬಡ್ತಿ, ವರ್ಗಾವಣೆಯ ಯೋಗವಿರುತ್ತದೆ. ಮಾತಿನಿಂದ ಎಲ್ಲರನ್ನು ಗೆಲ್ಲಬಹುದಾಗಿದೆ.

ವೃಷಭ : ಈ ರಾಶಿಯ ವ್ಯಕ್ತಿಗಳಿಗೂ ನವ ಪಂಚಮ ಯೋಗವು ಅನುಕೂಲ ಮಾಡಿಕೊಡಲಿದೆ. ಮಂಗಳ ಗ್ರಹವು ಈ ರಾಶಿಯವರಲ್ಲಿ ಉಚ್ಛ ಸ್ಥಿತಿಯಲ್ಲಿದೆ. ಹಾಗಾಗಿ ಈ ರಾಶಿಯ ವ್ಯಕ್ತಿಗಳಿಗೆ ಅದೃಷ್ಟ ಕೈ ಹಿಡಿಯಲಿದೆ. ಸಮಾಜದಲ್ಲಿ ಗೌರವ ಹೆಚ್ಚಲಿದೆ. ಕಾರ್ಯ ಕ್ಷೇತ್ರದಲ್ಲಿ ಉತ್ಸಾಹ ಹೆಚ್ಚಲಿದೆ. ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿಯಾಗಲಿದೆ. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಬಯಸುವವರ ಇಚ್ಛೆ ಈಡೇರಲಿದೆ. ಈ ಸಮಯದಲ್ಲಿ ಆರ್ಥಿಕ ಸ್ಥಿತಿಯೂ ಉತ್ತಮವಾಗಲಿದೆ.

ಕಟಕ : ಈ ರಾಶಿಯ ವ್ಯಕ್ತಿಗಳಿಗೆ ಆರ್ಥಿಕವಾಗಿ ನವ ಪಂಚಮ ಯೋಗವು ಲಾಭ ತರಲಿದೆ. ಮಂಗಳ ಗ್ರಹವು ಕಟಕ ರಾಶಿಯ ಲಾಭ ಸ್ಥಾನದಲ್ಲಿರುವುದರಿಂದ ಕೇಂದ್ರ ತ್ರಿಕೋನ ರಾಜಯೋಗವನ್ನು ನಿರ್ಮಾಣ ಮಾಡುತ್ತದೆ. ವೈವಾಹಿಕ ಜೀವನದಲ್ಲಿ ಮಾಧುರ್ಯ ಹೆಚ್ಚಲಿದೆ. ಧನ ಲಾಭದ ಯೋಗ ಉಂಟಾಗುತ್ತದೆ. ವ್ಯಾಪಾರಿಗಳಿಗೆ ಬರಬೇಕಿದ್ದ ಹಣ ಈ ಸಮಯದಲ್ಲಿ ಕೈ ಸೇರಲಿದೆ. ವಿದೇಶ ಪ್ರವಾಸದ ಯೋಗವೂ ಇರುತ್ತದೆ.

ಇದನ್ನೂ ಓದಿ : Planet Transit 2023 : ಸದ್ಯವೇ ಮೂರು ಗ್ರಹಗಳ ಸಂಚಾರ; ಶುಭಾಶುಭ ಫಲಗಳೇನು?

Exit mobile version