Site icon Vistara News

Vastu Tips : ಮನೆಯಲ್ಲಿ ಈ ಸಂಕೇತಗಳು ಕಂಡರೆ ಬೇಡ ನಿರ್ಲಕ್ಷ್ಯ; ವಾಸ್ತು ದೋಷದಿಂದಲೂ ಹೀಗಾಗಬಹುದು!

vastu tips for home

#image_title

ನಮ್ಮ ದೇಶದಲ್ಲಿ ವಾಸ್ತು ಶಾಸ್ತ್ರಕ್ಕೆ (Vastu Tips) ಬಹಳ ಮಹತ್ವ ನೀಡಲಾಗುತ್ತಿದೆ. ಏಕೆಂದರೆ ಇದಕ್ಕಿರುವ ಮಹತ್ವವನ್ನು ನಮ್ಮ ಪೂರ್ವಜರು ಸರಿಯಾಗಿ ತಿಳಿದುಕೊಂಡಿದ್ದು. ಮನೆಯಲ್ಲಿ ಎದುರಾಗುವ ಹಲವು ಸಮಸ್ಯೆಗಳಿಗೆ ವಾಸ್ತು ದೋಷ ಕಾರಣವಾಗಿರಬಹುದು. ವಾಸ್ತು ಶಾಸ್ತ್ರದಲ್ಲಿ ಮುಖ್ಯವಾಗಿ ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಯ ಬಗ್ಗೆ ಹೇಳಲಾಗುತ್ತದೆ.

ಮನೆಯಲ್ಲಿರುವ ಸದಸ್ಯರ ಮೇಲೆ ಈ ಶಕ್ತಿಗಳ ಪ್ರಭಾವ ಬೀರುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಇರುವುದರಿಂದ ಸುಖ–ಶಾಂತಿ, ಸಮೃದ್ಧಿ ನೆಲೆಸಿರುತ್ತದೆ. ಅದೇ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗಿದ್ದಲ್ಲಿ ಮನೆಯಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ವಾಸ್ತು ಶಾಸ್ತ್ರದಲ್ಲಿ ಮನೆಯ ದಿಕ್ಕು, ಮನೆಯಲ್ಲಿರುವ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿಯನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ತಿಳಿಸಲಾಗುತ್ತದೆ. ಹಾಗಾದರೆ ಮನೆಯಲ್ಲಿ ವಾಸ್ತು ದೋಷ ಉಂಟಾಗಿದೆ ಎಂಬುದನ್ನು ಹೇಗೆ ತಿಳಿಯುವುದು ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು. ಇದನ್ನು ಕೆಲವು ಸಂಕೇತಗಳು ತಿಳಿಸುತ್ತವೆ.

ಹಾಗಾದರೆ ಮನೆಯಲ್ಲಿ ವಾಸ್ತು ದೋಷ ಇದೆ ಎಂಬುದನ್ನು ತಿಳಿಸುವ ಸಂಕೇತಗಳು ಯಾವವು ಎಂಬುದನ್ನು ನೋಡೋಣ;

ಸಂತಾನ ಸಮಸ್ಯೆ

ವಿವಾಹವಾಗಿ ಹಲವಾರು ವರ್ಷಗಳು ಕಳೆದಿದ್ದರೂ ಸಂತಾನ ಆಗದೇ ಇದ್ದಲ್ಲಿ ಅದಕ್ಕೆ ಮನೆಯ ವಾಸ್ತು ದೋಷವೂ ಸಹ ಕಾರಣವಾಗಿರಬಹುದು. ವಾಸ್ತು ಶಾಸ್ತ್ರದ ಅನುಸಾರ ಮನೆಯಲ್ಲಿ ಸಂತಾನ ಸಮಸ್ಯೆ ಅಥವಾ ವಂಶ ವೃದ್ಧಿಗೆ ಅಡೆತಡೆಗಳು ಎದುರಾಗುತ್ತಿದ್ದರೆ ಅಂಥ ಮನೆಯ ಮಧ್ಯ ಭಾಗದಲ್ಲಿ ವಾಸ್ತು ದೋಷವಿರುವ ಸಾಧ್ಯತೆ ಹೆಚ್ಚಿರುತ್ತದೆ.

ಪದೇ ಪದೇ ಕೆಲಸ ಅರ್ಧಕ್ಕೇ ನಿಲ್ಲುವುದು

ಕೆಲವು ಮನೆಗಳಲ್ಲಿ ಯಾವ ಕೆಲಸವೂ ಸರಿಯಾಗಿ ಆಗುವುದಿಲ್ಲ. ಹಲವಾರು ಕೆಲಸಗಳು ಇನ್ನೇನು ಆಗೇ ಬಿಡುತ್ತದೆ ಎನ್ನುವಷ್ಟರಲ್ಲಿ ಮತ್ತೇನೋ ಸಮಸ್ಯೆ ಎದುರಾಗಿರುತ್ತದೆ. ಕೊನೆಗೂ ಎಷ್ಟೇ ಪ್ರಯತ್ನ ಪಟ್ಟರೂ ಆ ಕೆಲಸ ಫಲಪ್ರದವಾಗುವುದಿಲ್ಲ. ಇದಕ್ಕೂ ಮನೆಯ ಮಧ್ಯ ಭಾಗದ ವಾಸ್ತು ದೋಷವೇ ಕಾರಣವಾಗಿರಬಹುದೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯ ಮಧ್ಯಭಾಗದಲ್ಲಿ ಶೌಚಾಲಯವನ್ನು ನಿರ್ಮಿಸುವುದರಿಂದ ಅಥವಾ ಭಾರೀ ಗಾತ್ರದ ವಸ್ತುಗಳನ್ನು ಇಡುವುದರಿಂದ ಸಹ ವಾಸ್ತು ದೋಷ ಉಂಟಾಗುತ್ತದೆ.

ಆರ್ಥಿಕ ಸಂಕಷ್ಟ

ಹೆಚ್ಚು ಹಣ ಸಂಪಾದಿಸಿದರೂ ಹಣವನ್ನು ಉಳಿಸಲು ಆಗದಿರುವುದು ಅಥವಾ ಅಗತ್ಯವಿರುವಾಗ ಹಣದ ಕೊರತೆ ಉಂಟಾಗುವುದು ವಾಸ್ತು ದೋಷದ ಕಾರಣವಾಗಿರಬಹುದು. ಈ ರೀತಿಯ ಸಮಸ್ಯೆಗಳು ಮನೆಯ ನೈಋತ್ಯ ಮೂಲೆಯಲ್ಲಿ ವಾಸ್ತು ದೋಷವಿದ್ದರೆ ಉಂಟಾಗುತ್ತದೆ. ವಾಸ್ತು ಶಾಸ್ತ್ರದ ಅನುಸಾರ ಈ ದಿಕ್ಕಿನಲ್ಲಿ ಮುಖ್ಯದ್ವಾರ ಅಥವಾ ಕಿಟಕಿ ಇದ್ದರೆ ಈ ದೋಷ ಉಂಟಾಗುತ್ತದೆ.

ಮನೆಯಲ್ಲಿ ಕಲಹ ಹೆಚ್ಚುವುದು

ಮನೆಯ ಸದಸ್ಯರ ನಡುವೆ ಮನಸ್ತಾಪಗಳು ಉಂಟಾಗುವುದು, ಸದಾ ಜಗಳವಾಡುತ್ತಿರುವುದು ಸಹ ವಾಸ್ತು ದೋಷದ ಕಾರಣದಿಂದಲೇ ಆಗಿರಬಹುದು. ಈ ರೀತಿಯ ಸಮಸ್ಯೆಗಳು ಮನೆಯ ವಾಯವ್ಯ ಮೂಲೆಯಲ್ಲಿರುವ ವಾಸ್ತು ದೋಷದಿಂದ ಆಗಿರಬಹುದು.

ಜ್ಯೋತಿಷ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ (Click Here) ಕ್ಲಿಕ್‌ ಮಾಡಿ.

ಆರೋಗ್ಯ ಹದಗೆಡುವುದು

ಮನೆಯ ಸದಸ್ಯರಿಗೆ ಪದೇ ಪದೇ ಆರೋಗ್ಯ ಹದಗೆಡುವುದು ಸಹ ವಾಸ್ತು ದೋಷದ ಕಾರಣದಿಂದ ಆಗಿರಬಹುದು. ಈ ಸಮಸ್ಯೆಗಳು ಮನೆಯ ಆಗ್ನೇಯ ದಿಕ್ಕಿನಲ್ಲಿ ವಾಸ್ತು ದೋಷವಿದ್ದರೆ ಉಂಟಾಗುತ್ತದೆ.

ಹಣಕಾಸಿನ ಸಮಸ್ಯೆಗೆ ಸರಳ ಪರಿಹಾರ ಇಲ್ಲಿದೆ ನೋಡಿ

ಇನ್ನೂ ಕೆಲವು ಕಾರಣಗಳು ವಾಸ್ತು ದೋಷ ಉಂಟುಮಾಡುತ್ತವೆ. ಅವುಗಳೆಂದರೆ;

ಇದನ್ನೂ ಓದಿ: Vastu Tips : ಮನೆಯ ಈ ದಿಕ್ಕಿಗೆ ಕಿಟಕಿ ಇದ್ದರೆ ಆರ್ಥಿಕ ಲಾಭ, ಸಮೃದ್ಧಿ!

Exit mobile version