Site icon Vistara News

ಭಾವಾಶ್ರಿತ ಗ್ರಹಫಲ | ಚಂದ್ರನು ನೀಡುವ ಫಲಗಳೇನು?

ಎರಡನೇ ಗ್ರಹನಾದ ಚಂದ್ರ ಯಾವ ಸ್ಥಾನದಲ್ಲಿದ್ದರೆ ಯಾವ ಫಲಗಳನ್ನು ಪ್ರಾಪ್ತಿಸುತ್ತಾನೆ? ಭಾವಾಶ್ರಿತ ಗ್ರಹಫಲ ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ.

ಚಂದ್ರಭಾವ ಫಲ

ಶುಕ್ಲಪಕ್ಷದ ಚಂದ್ರನು ಲಗ್ನದಲ್ಲಿದ್ದರೆ, ಶುಭವೇ ಆಗುತ್ತದೆ. ಈ ಜಾತಕದವರು ಸದೃಢ ಶರೀರ ಹೊಂದಿರುತ್ತಾರೆ, ದೀರ್ಘವಾದ ಆಯುಷ್ಯ ಇವರಿಗಿರುತ್ತದೆ. ಇವರು ಬಲವಂತರು ಹಾಗೂ ನಿರ್ಭಯರಾಗಿರುತ್ತಾರೆ. ಧನಸಂಪತ್ತಿನ ಕೊರತೆ ಇವರಿಗೆ ಬಾಧಿಸುವುದಿಲ್ಲ. ಆದರೆ, ಕೃಷ್ಣಪಕ್ಷದಲ್ಲಿ ಜನಿಸಿದಾಗ, ಚಂದ್ರನು ಲಗ್ನದಲ್ಲಿದ್ದರೆ, ಇದರ ವಿರುದ್ಧ ಫಲಗಳು ಉಂಟಾಗುತ್ತವೆ.

ಚಂದ್ರನು ದ್ವಿತೀಯದಲ್ಲಿದ್ದರೆ, ವಿಷಯಸುಖದಲ್ಲಿ ಆಸಕ್ತಿ ಉಂಟಾಗುತ್ತದೆ. ಈ ಜಾತಕದವರು ಸಹಜವಾಗಿ ವಿದ್ವಾಂಸರಾಗುತ್ತಾರೆ ಹಾಗೂ ಮೃದುಭಾಷಿಯಾಗಿರುತ್ತಾರೆ. ಆದರೆ, ಅಂಗವಿಕಲತೆಯ ದೋಷದಿಂದ ಬಲಳುವ ಸಾಧ್ಯತೆ ಇರುತ್ತದೆ.

ತೃತೀಯ ಭಾವದಲ್ಲಿ ಚಂದ್ರನು ಮಾತೃಸುಖವನ್ನು ಪ್ರಾಪ್ತಿಸುತ್ತದೆ. ಹಾಗೂ ಕಾಮಾಂಧರಾದ ಸೋದರರು ಇವರಿಗುತ್ತಾರೆ. ಈ ಜಾತಕದವರು ಸಮಾನ್ಯವಾಗಿ ಬಲಶಾಲಿ, ಶೌರ್ಯವಂತರು, ಮತ್ತು ಅತ್ಯಂತ ಕೃಪಣರಾಗಿರುತ್ತಾರೆ.

ಚಂದ್ರನ ಚತುರ್ಥದಲ್ಲಿ ಬಲಿಷ್ಠ. ಈ ಜಾತಕದವರು ಸದಾ ಸುಖಿಯಾಗಿರುತ್ತಾರೆ. ಇವರು ಸಾಮಾನ್ಯವಾಗಿ ಭೋಗಿಯು, ತ್ಯಾಗಿಯೂ ಆಗಿರುತ್ತಾರೆ. ಇವರಿಗೆ ಮಿತ್ರರು ಮತ್ತು ವಾಹನ ಸುಖದ ಕೊರತೆ ಇರುವುದಿಲ್ಲ. ಇವರು ಜೀವನದಲ್ಲಿ ಯಶಸ್ವಿಯಾಗಿ ಬಾಳುತ್ತಾರೆ.

ಪಂಚಮಭಾವದಲ್ಲಿ ಚಂದ್ರನಿದ್ದ ಜಾತಕದವರು ಮೇಧಾವಿಯಾಗಿರುತ್ತಾರೆ. ಇವರು ಉತ್ತಮ ಸಲಹೆಯನ್ನ ನಿಡುವ ಸಾಮರ್ಥ್ಯದವರಾಗಿರುತ್ತಾರೆ. ಇವರ ನಡೆ ಮಂದಗತಿಯಲ್ಲಿರುತ್ತದೆ. ಸತ್ಪುತ್ರರನ್ನು ಪಡೆದು ಸುಖವಾಗಿರುತ್ತಾರೆ.

ಷಷ್ಟಮದಲ್ಲಿ ಚಂದ್ರನಿದ್ದರೆ ಫಲಗಳು ಸಾಮಾನ್ಯವಾಗಿ ಶುಭದಾಯಕವಾಗಿರುವುದಿಲ್ಲ. ಇವರು ಉತ್ತಮ ಬುದ್ಧಿಮಟ್ಟದವರಾಗಿರುವುದಿಲ್ಲ. ಉದರ ವ್ಯಾಧಿಯಂತಹ ಖಾಯಿಲೆಯಿಂದ ಪೀಡಿತರಾಗುತ್ತಾರೆ ಹಾಗೂ ಅಲ್ಪಾಯುವಾಗಿರುತ್ತಾರೆ.

ಚಂದ್ರನು ಸಪ್ತಮ ಭಾವದಲ್ಲಿದ್ದರೆ ಸೌಭಾಗ್ಯವಂತರಾಗಿರುತ್ತಾರೆ. ಇವರು ರೂಪವಂತರು ಹಾಗೂ ಎಲ್ಲರಿಗೆ ತ್ಯಂತ ಪ್ರೀತಿಪಾತ್ರರಾಗಿರುತ್ತಾರೆ.

ಅಷ್ಟಮದಲ್ಲಿ ಚಂದ್ರನಿದ್ದಾಗ ಅಶುಭ ಫಲಗಳು ಪ್ರಧಾನವಾಗಿರುತ್ತದೆ. ಈ ಜಾತಕದವರು ರೋಗಪೀಡಿತರಾಗುತ್ತಾರೆ ಹಾಗೂ ಅಲ್ಪಾಯುವಾಗಿರುತ್ತಾರೆ.

ಚಂದ್ರನು ನವಮದಲ್ಲಿ ಸುಖವನ್ನು ನೀಡುತ್ತಾನೆ.ಈ ಜಾತಕದವರು ಧರ್ಮಾತ್ಮರಾಗಿದ್ದು, ಉತ್ತಮ ಸಂತಾನ ಸುಖವುಳ್ಳುತ್ತಾರೆ.

ದಶಮಭಾವದಲ್ಲಿ ಚಂದ್ರನಿರುವ ಜಾತಕದವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಸತ್ಕರ್ಮನಿರತರಾಗಿದ್ದು, ಸಜ್ಜನರಿಗೆ ಸಹಾಯ ಮಾಡುವ ಮನೋಭಾವ ಹೊಂದಿರುತ್ತಾರೆ.

ಚಂದ್ರನು ಏಕಾದಶಸ್ಥನಾಗಿದ್ದ ಜಾತಕದಲ್ಲಿ ಆಯಸ್ಸು ದೀರ್ಘವಾಗಿರುತ್ತದೆ. ಇವರು ಧನಿಕರು ಹಾಗೂ ಸಂತತಿಯನ್ನು ಹೊಂದುತ್ತಾರೆ. ಇವರ ಕಾರ್ಯಗಳಿಗೆ ಸೇವಕರನ್ನು ಹೊಂದಿರುವ ನಾಯಕರಾಗುತ್ತಾರೆ.

ದ್ವಾದಶದಲ್ಲಿ ಚಂದ್ರನಿದ್ದರೆ ಆಲಸ್ಯ ಉಂಟಾಗುತ್ತದೆ. ಈ ಜಾತಕದವರು ದುಃಖಿಯಾಗಿರುತ್ತಾರೆ ಹಾಗೂ ಪರಾಭವ ಹೊಂದಿರುತ್ತಾರೆ. ಇವರು ಸಾಮನ್ಯವಾಗಿ ಸ್ನೇಹಜೀವಿಯಾಗಿರುವುದಿಲ್ಲ, ಎಲ್ಲರನ್ನೂ ದ್ವೇಷಿಸುವ ಗುಣ ಇವರಲ್ಲಿರುತ್ತದೆ.

ಇದನ್ನೂ ಓದಿ: ಭಾವಾಶ್ರಿತ ಗ್ರಹಫಲ | ಸೂರ್ಯನು ದಶಮ ಭಾವದಲ್ಲಿದ್ದರೆ ಬಲಿಷ್ಠ

Exit mobile version