ಜ್ಯೋತಿಷ ಶಾಸ್ತ್ರದ ಅನುಸಾರ 9 ಗ್ರಹಗಳೂ ವಿವಿಧ ಗುಣಗಳನ್ನು ಹೊಂದಿರುತ್ತದೆ. ಅವು ಜಾತಕದಲ್ಲಿ ಒಂದೊಂದು ಮನೆಯಲ್ಲಿದ್ದರೆ ಒಂದೊಂದು ಗುಣವನ್ನು ತೋರುತ್ತದೆ. ಅದರಂತೆ ನಿಮ್ಮ ಜೀವನದಲ್ಲೂ ಆ ಗುಣಗಳು ಪ್ರತಿಬಿಂಬಿಸುತ್ತದೆ. ಅದನ್ನು ಭಾವಾಶ್ರಿತ ಗ್ರಹಫಲ ಎಂದು ಹೇಳಲಾಗುತ್ತದೆ.
ಯಾವ ಗ್ರಹ ಯಾವ ಸ್ಥಾನದಲ್ಲಿದ್ದರೆ ಏನು ಫಲವನ್ನು ನೀಡುತ್ತದೆ? ಈ ಒಂದು ಗ್ರಹದ ಫಲದಿಂದ ನಿಮ್ಮ ಗುಣ ನಿರ್ಧಾರವಾಗುತ್ತದೆ ಎಂದರ್ಥವಲ್ಲ. ಆದರೆ,ಇದೂ ಕೂಡ ಪ್ರಭಾವ ಬೀರುತ್ತದೆ.
ಸೂರ್ಯ ಗ್ರಹ ನೀಡುವ ಫಲದ ಬಗ್ಗೆ ಇಲಿದೆ:
ಸೂರ್ಯಫಲ
ಸೂರ್ಯನು ಲಗ್ನದಲ್ಲಿರುವಾಗ ಜಾತಕದವರು ತೇಜಸ್ವಿ ಮತ್ತು ಎತ್ತರವಾದ ಕೃಶಶರೀರವುಳ್ಳವನಾಗಿರುತ್ತಾರೆ. ಕಡಿಮೆ ಕೂದಲುಳ್ಳುತ್ತಾರೆ, ಸೋಮಾರಿ ಹಾಗೂ ಕ್ರೋಧಿ ಆಗಿರುತ್ತಾರೆ. ನಿಸ್ತೇಜವಾದ ನೇತ್ರಗಳನ್ನು ಹೊಂದಿರುತ್ತಾರೆ. ಇವರು ಪರಾಕ್ರಮಿ ಆಗಿರುತ್ತಾರೆ ಆದರೆ ತಾಳ್ಮೆ ಕಡಿಮೆ ಇರುತ್ತದೆ ಹಾಗೂ ನಿರ್ದಾಕ್ಷಿಣ್ಯವಾಗಿರುತ್ತಾರೆ.
ಕರ್ಕಾಟಕ ಲಗ್ನದಲ್ಲಿ ಸೂರ್ಯನಿದ್ದರೆ, ಅವರ ನೇತ್ರ ವಿಕಾದಿಂದ ಬಲಳುತ್ತಾರೆ. ಮೇಷಲಗ್ನದಲ್ಲಿ ಸೂರ್ಯನಿದ್ದರೆ ನೇತ್ರದೋಷ ಕಾಡುತ್ತದೆ. ಸಿಂಹಲಗ್ನದಲ್ಲಿದ್ದರೆ ಇರುಳುಗಣ್ಣು (ರಾತ್ರಿಯ ಅಂಧತ್ವ) ಸಮಸ್ಯೆ ಉಂಟಾಗುತ್ತದೆ. ತುಲಾಲಗ್ನದಲ್ಲಿ ಸೂರ್ಯನಿದ್ದ ಜಾತಕದವರು ಧನ ಹೀನ ಮತ್ತು ನಿಸ್ಸಂತಾನವಾಗುತ್ತಾರೆ.
ಸೂರ್ಯನು ದ್ವಿತೀಯದಲ್ಲಿದ್ದರೆ, ವಿದ್ಯೆ, ಧನಹೀನನಾಗುತ್ತಾರೆ. ಹಾಗೂ ಮಾತನಾಡುವಾಗ ಉಗ್ಗುತ್ತಾರೆ.
ಸೂರ್ಯನು ತೃತೀಯದಲ್ಲಿದ್ದ ಜಾತಕದವರು ಶಕ್ತಿಶಾಲಿ, ಪರಾಕ್ರಮಿ, ಉದಾರಿಯಾಗಿರುತ್ತಾರೆ.ಅಲ್ಲದೆ, ಅವರು ತಮ್ಮ ಬಂಧುಗಳಿಗೆ ಶತೃವಾಗುತ್ತಾರೆ.
ಸೂರ್ಯನು ಚತುರ್ಥದಲ್ಲಿದ್ದರೆ, ಅವರಿಗೆ ಬಂಧು ಮಿತ್ರರು, ಭೂಮಿ ಮತ್ತು ಗೃಹ ವಿಹೀನನಾಗುತ್ತದೆ. ಅವರು ರಾಜನ ಸೇವಕರಾಗಿರುತ್ತಾರೆ. ಮತ್ತು ಅವರ ಪಿತ್ರಾರ್ಜಿತ ಸಂಪತ್ತು ನಾಶವಾಗುತ್ತದೆ.
ಸೂರ್ಯನು ಲಗ್ನಾತ್ ಪಂಚಮಭಾವದಲ್ಲಿದ್ದರೆ ಸುಖ, ಧನ ಹಾಗೂ ಸಂತಾನ ಹೀನವಾಗುತ್ತದೆ. ಹಾಗೂ ಅಲ್ಪಾಯುವಾಗಿರುತ್ತಾರೆ. ಸೂರ್ಯ ಗ್ರಹ ಈ ಸ್ಥಾನದಲ್ಲಿದ್ದರೆ ಅವರು ತೀಕ್ಷ್ಯ ಬುದ್ಧಿಯುಳ್ಳವನಾಗಿದ್ದು, ವನಸಂಚಾರಿಯಾಗಿರುತ್ತಾರೆ.
ಷಷ್ಠಭಾವದಲ್ಲಿದ್ದರೆ ಸೂರ್ಯಗ್ರಹ ಫಲದಾಯಕವಾಗಿದೆ. ಈ ಜಾತಕದವರು ಜಮೀನುದಾರರು, ಗುಣವಂತರು ಹಾಗೂ, ಧನಿಕರಾಗುತ್ತಾರೆ. ತಾವು ಕೈಗಿಳ್ಳುವ ಕಾರ್ಯದಲ್ಲಿ ವಿಜಯೀಯಾಗುತ್ತಾರೆ.
ಸೂರ್ಯನು ಸಪ್ತಮಭಾವದಲ್ಲಿದ್ದರೆ, ಅವರು ರಾಜರ ವಿರೋಧಿಯಾಗುತ್ತಾರೆ. ಶರೀರ ವಿಕೃತವಾಗಿರುತ್ತದೆ. ಸಂಚಾರಿ, ಸ್ತ್ರೀಸುಖವಂಚಿತ ಮತ್ತು ತಿರಸ್ಕೃತರಾಗುತ್ತಾರೆ.
ಸೂರ್ಯಗ್ರಹ ಅಷ್ಟಮ ಭಾವದಲ್ಲಿದ್ದರೆ ಧನಸಂಪತ್ತು ಪ್ರಾಪ್ತಗುತ್ತದೆ. ಆದರೆ, ದೃಷ್ಟಿಹೀನತೆ ಕಾಡುತ್ತದೆ ಹಾಗೂ, ಅಲ್ಪಾಯುವಾಗಿರುತ್ತದೆ.
ನವಮ ಭಾವದಲ್ಲಿ ಸೂರ್ಯನಿದ್ದರೆ ಆ ವ್ಯಕ್ತಿಯು ದೇವರು, ಬ್ರಾಹ್ಮಣರಲ್ಲಿ ಶ್ರದ್ಧೆಯಿದ್ದು ಸುಖವಾಗಿರುತ್ತಾರೆ. ಬಂಧು-ಬಾಂಧವ ಹಾಗೂ ಸಂತತಿಯ ಸುಖ ಹೊಂದಿರುತ್ತಾರೆ, ಆದರೆ ತಂದೆಯನ್ನು ಕಳೆದುಕೊಳ್ಳುತ್ತಾರೆ.
ಸೂರ್ಯನು ದಶಮ ಭಾವದಲ್ಲಿ ಬಲಿಷ್ಠನಾಗಿರುತ್ತಾನೆ. ಸೂರ್ಯನು ದಶಮಭಾವದಲ್ಲಿದ್ದ ಜಾತಕದವರು ಸಂತಾನ, ವಾಹನ, ಧನ ಹಾಗೂ ಬಲಸಂಪನ್ನರಾಗಿರುತ್ತಾರೆ. ತಮ್ಮ ಕುಶಾಗ್ರಬುದ್ಧಿಯಿಂದ ಜೀವನದಲ್ಲಿ ಯಶಸ್ಸನ್ನು ಹೊಂದುತ್ತಾರೆ.
ಏಕಾದಶದಲ್ಲಿ ಸೂರ್ಯನಿದ್ದರೆ, ಅನೇಕ ಪ್ರಕಾರದ ಧನ-ಧಾನ್ಯ ಸಂಪತ್ತುಗಳನ್ನು ಪಡೆಯುತ್ತಾರೆ. ಈ ಜಾತಕದವರು ದೀರ್ಘಾಯುಷಿಯಾಗಿರುತ್ತಾರೆ. ಮುಖ್ಯವಾಗಿ ಇವರು ಶೋಕರಹಿತನಾದ ಜನನಾಯಕನಾಗುತ್ತಾರೆ.
ದ್ವಾದಶದಲ್ಲಿ ಸೂರ್ಯನಿದ್ದರೆ ಅವರು ತಂದೆಯನ್ನು ದ್ವೇಷಿಸುವವರಾಗಿರುತ್ತಾರೆ. ಅವರಿಗೆ ದೃಷ್ಟಿದೋಷ ಕಾಡುತ್ತದೆ. ಜೀವನದಲ್ಲಿ ಧನ ಮತ್ತು ಪುತ್ರ ವಿಹೀನನಾಗಿ ದುಃಖಿಸುತ್ತಾರೆ.
ಇದನ್ನೂ ಓದಿ: Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?