ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕಾಂ) ಪದವೀಧರರಿಂದ ಮತ್ತು ಡಿಪ್ಲೊಮಾ ಮಾಡಿದವರಿಂದ ಅಪ್ರೆಂಟಿಸ್‌ಷಿಪ್‌ಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 135 ಅಭ್ಯರ್ಥಿಗಳಿಗೆ ಅವಕಾಶ ದೊರೆಯಲಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಜೂನ್ 2 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಇದು ಒಂದು ವರ್ಷಗಳ ಅವಧಿಯ ಅಪ್ರೆಂಟಿಸ್‌ಷಿಪ್ ಆಗಿದ್ದು, ಆಯ್ಕೆಯಾದ ಎಂಜಿನಿಯರಿಂಗ್ ಪದವೀಧರ ಅಭ್ಯರ್ಥಿಗಳಿಗೆ ಮಾಸಿಕ 9 ಸಾವಿರ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ 8 ಸಾವಿರ ಸ್ಟೈಫಂಡ್ ನೀಡಲಾಗುತ್ತದೆ.
ಎಷ್ಟು ಮಂದಿಗೆ ಅವಕಾಶ?
ಒಟ್ಟು 80 ಮಂದಿ ಪದವೀಧರರು ಅಪ್ರೆಂಟಿಸ್‌ಷಿಪ್ ಮಾಡಬಹುದಾಗಿದೆ. ಇವರಲ್ಲಿ 70 ಹುದ್ದೆಗಳನ್ನು ಎಲೆಕ್ಟ್ರಿಕಲ್ &ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವೀಧರರಿಗೆ ಮೀಸಲಾಗಿದ್ದರೆ, 10 ಹುದ್ದೆಗಳನ್ನು ಸಿವಿಲ್ ಎಂಜಿನಿಯರಿಂಗ್ ಮಾಡಿದವರಿಗೆ ಮೀಸಲಾಗಿಡಲಾಗಿದೆ.
ಡಿಪ್ಲೊಮಾ ಮಾಡಿದ 55 ಅಭ್ಯರ್ಥಿಗಳು ಅಪ್ರೆಂಟಿಸ್‌ಷಿಪ್ ಮಾಡುಬಹುದಾಗಿದ್ದು, ಇದರಲ್ಲಿ 45 ಹುದ್ದೆಗಳನ್ನು ಎಲೆಕ್ಟ್ರಿಕಲ್& ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮಾಡಿದ ಅಭ್ಯರ್ಥಿಗಳಿಗೆ ಮತ್ತು 10 ಹುದ್ದೆಗಳನ್ನು ಸಿವಿಲ್ ಎಂಜಿನಿಯರಿಂಗ್ ಮಾಡಿದವರಿಗೆ ನಿಗದಿಪಡಿಸಲಾಗಿದೆ.
ಆಯ್ಕೆ ಹೇಗೆ?
ಅಭ್ಯರ್ಥಿಗಳು ಪದವಿ ಮತ್ತು ಡಿಪ್ಲೊಮಾದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕ ನಡೆಯಲಿದೆ. ಬಂದ ಅರ್ಜಿಗಳನ್ನು ಪರಿಶೀಲಿಸಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ನಂತರ ಅಭ್ಯರ್ಥಿಗಳ ಮೂಲ ದಾಖಲೆ ಪರಿಶೀಲನೆ ನಡೆಸಿ, ಅಪ್ರೆಂಟಿಸ್‌ಷಿಪ್‌ಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಮೈಸೂರಿನಲ್ಲಿಯೇ ದಾಖಲೆ ಪರಿಶೀಲನೆ ನಡೆಯಲಿದೆ. ದಾಖಲೆ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಟಿಎ/ಡಿಎ ನೀಡಲಾಗುತ್ತದೆ.
ಅಧಿಸೂಚನೆಯಲ್ಲಿರುವುದೇನು?
ಇತ್ತ ಗಮನಿಸಿ
- ಪದವೀಧರ ಅಪ್ರೆಂಟಿಸ್‌ಷಿಪ್‌ಗೆ ಬಿಟೆಕ್ ಮಾಡಿದವರೂ ಅರ್ಜಿ ಸಲ್ಲಿಸಬಹುದು.
- ಅರ್ಜಿಯಲ್ಲಿ ಇ-ಮೇಲ್ ವಿಳಾಸ, ಮೊಬೈಲ್ ನಂಬರ್ ಮತ್ತು ಸಂಪರ್ಕ ವಿಳಾಸ ನೀಡುವುದು ಅವಶ್ಯಕ.
- ಜೂನ್ 14 ರಂದು ದಾಖಲೆ ಪರಿಶೀಲನೆಯು ನಡೆಯಲಿದೆ.
- ಮೀಸಲಾತಿಯನ್ವಯ ಅವಕಾಶವನ್ನು ಹಂಚಿಕೆ ಮಾಡಲಾಗಿರುತ್ತದೆ.
- ಹೆಚ್ಚಿನ ಮಾಹಿತಿಗೆ ವೆಬ್: http://www.cescmysore.karnataka.gov.in
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ನ್ಯಾಷನಲ್ ವೆಬ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಿರುತ್ತದೆ. ಈಗಾಗಲೇ ಅಪ್ರೆಂಟಿಸ್‌ಷಿಪ್‌ಗಾಗಿನ ಈ ಪೋರ್ಟಲ್‌ನಲ್ಲಿ ಹೆಸರು ನೊಂದಾಯಿಸಿಕೊಂಡಿರುವವರು ಸೆಸ್ಕಾಂ ಅನ್ನು ಆಯ್ಕೆಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಎನ್‌ಎಟಿಎಸ್‌ನಲ್ಲಿ ಅರ್ಜಿ ಸಲ್ಲಿಸಲು ಜೂನ್ 2 ಕೊನೆಯ ದಿನವಾದರೆ, ಸೆಸ್ಕಾಂಗೆ ಅರ್ಜಿ ಸಲ್ಲಿಸಲು ಜೂನ್ 7 ಕೊನೆಯ ದಿನವಾಗಿರುತ್ತದೆ.
ಇದನ್ನೂ ಓದಿ | ಕರ್ಣಾಟಕ ಬ್ಯಾಂಕ್‌ನಲ್ಲಿ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ