Site icon Vistara News

ಬ್ಯಾಂಕ್‌ ಆಫ್‌ ಇಂಡಿಯಾ: 696 ವಿವಿಧ ಹುದ್ದೆಗಳಿಗೆ ಅರ್ಜಿ , ಮೇ 10 ಕೊನೆ ದಿನ




ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಎಕನಾಮಿಸ್ಟ್‌ ಸ್ಟ್ಯಾಟಿಸ್ಟಿಷಿಯನ್‌, ರಿಸ್ಕ್‌ ಮ್ಯಾನೇಜ್‌ ಮೆಂಟ್‌ , ಕ್ರೆಡಿಟ್ ಅನಾಲಿಸ್ಟ್‌, ಕ್ರೆಡಿಟ್‌ ಆಫೀಸರ್‌, ಟೆಕ್‌ ಅಪ್ರೈಸಲ್‌, ಐಟಿ ಆಫೀಸರ್‌ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇವೆ.

ಒಟ್ಟು 696 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಿದ್ದು, ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಹಾಗೂ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಪದವಿಯಲ್ಲಿ ಶೇ. 60ರಷ್ಟು ಅಂಕಗಳನ್ನು ಪಡೆದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಿನಾಯಿತಿ :

ಎಸ್‌.ಸಿ, ಎಸ್‌ಟಿ ವಿದ್ಯಾರ್ಥಿಗಳು ಶೇ. 55 ಅಂಕ ಗಳಿಸಿರಬೇಕು. ವಯೋಮಿತಿಯಲ್ಲಿ ಎಸ್.ಟಿ, ಎಸ್‌.ಸಿ ವಿದ್ಯಾರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ಹಾಗೂ ಮಾಜಿ ಸೈನಿಕರಿಗೆ 5 ವರ್ಷ ಸಡಿಲಿಕೆ ಇದೆ.

ಹೆಚ್ಚಿನ ಮಾಹಿತಿಗಾಗಿ :

https://www.bankofindia.co.in/career

Exit mobile version