ಬೆಂಗಳೂರು: ಏರ್‌ಪೋರ್ಟ್ ಅಥಾರಟಿ ಆಫ್ ಇಂಡಿಯಾ ಕಾರ್ಗೋ ಲಾಜಿಸ್ಟಿಕ್ಸ್ & ಅಲೈಡ್ ಸರ್ವಿಸ್ ಕಂಪೆನಿ ಲಿಮಿಟೆಡ್ (Airports Authority of India Cargo Logistics & Allied Services Company Limited-AAICLAS Recruitment 2023) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಖಾಲಿ ಇರುವ 436 ಅಸಿಸ್ಟೆಂಟ್ (ಸೆಕ್ಯೂರಿಟಿ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನವೆಂಬರ್ 15. ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ
ಯಾವುದೇ ಮಾನ್ಯತೆ ಪಡೆದ ಮಂಡಳಿ / ವಿಶ್ವವಿದ್ಯಾಲಯ / ಸಂಸ್ಥೆಯಿಂದ 12ನೇ ತರಗತಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗಳಿಗೆ ಶೇ. 60 ಮತ್ತು ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ ಶೇ. 55ರಷ್ಟು ಅಂಕ ಕಡ್ಡಾಯ. ಇಂಗ್ಲಿಷ್, ಹಿಂದಿ ಅಥವಾ ಸ್ಥಳೀಯ ಭಾಷೆಯನ್ನು ಓದುವ / ಮಾತನಾಡುವ ಸಾಮರ್ಥ್ಯ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ ಮತ್ತು ವಯೋಮಿತಿ
ಸಾಮಾನ್ಯ/ ಒಬಿಸಿ ಅಭ್ಯರ್ಥಿಗಳು 500 ರೂ. ಮತ್ತು ಎಸ್ಸಿ/ ಎಸ್‌ಟಿ/ ಎಕ್ಸ್ ಸರ್ವಿಸ್ ಮ್ಯಾನ್/ ಮಹಿಳೆಯರು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಸಾಮಾನ್ಯ/ ಯುಆರ್ ಅಭ್ಯರ್ಥಿಗಳ ವಯಸ್ಸು 27 ವರ್ಷ ದಾಟಿರಬಾರದು. ಇನ್ನು ಮೀಸಲಾತಿಗೆ ಅನುಗುಣವಾಗಿ ರಿಯಾಯಿತಿ ಲಭ್ಯವಿದೆ. ಎಸ್‌ಸಿ/ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ರಿಯಾಯಿತಿ ಇದೆ.
ಆಯ್ಕೆ ವಿಧಾನ ಮತ್ತು ವೇತನ
ಪ್ರಿಲಿಮಿನರಿ ಇಂಗ್ಲಿಷ್ ಟೆಸ್ಟ್, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ 21,500-22,500 ರೂ. ತಿಂಗಳ ವೇತನ ಸಿಗಲಿದೆ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- AAICLAS Assistant (Security) ನೋಟಿಫಿಕೇಷನ್ ಮೇಲೆ ಕ್ಲಿಕ್ ಮಾಡಿ
- ಸೂಕ್ತ ಮಾಹಿತಿ ಒದಗಿಸಿ ಅರ್ಜಿ ತುಂಬಿ ಮತ್ತು ಅರ್ಜಿ ಶುಲ್ಕ ಪಾವತಿಸಿ
- ಮತ್ತೊಮ್ಮೆ ಅರ್ಜಿಯನ್ನು ಗಮನಿಸಿ ಎಲ್ಲ ಮಾಹಿತಿ ಸರಿಯಾಗಿದೆ ಎನ್ನುವುದನ್ನು ಖಾತರಿಪಡಿಸಿ Submit ಆಯ್ಕೆ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ವಿಳಾಸ http://www.aaiclas.aero/ಕ್ಕೆ ಭೇಟಿ ನೀಡಿ.
ಇದನ್ನೂ ಓದಿ: JOB NEWS: 184 ಎಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ