Site icon Vistara News

AFMS Recruitment 2023: ಮೆಡಿಕಲ್‌ ಆಫೀಸರ್‌ ಆಗಬೇಕೇ? 650 ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ

doctor

doctor

ನವ ದೆಹಲಿ: ಭಾರತೀಯ ಸೇನೆಯು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆ(AFMS)ಗಳಲ್ಲಿ ಖಾಲಿ ಇರುವ 650 ವೈದ್ಯಕೀಯ ಅಧಿಕಾರಿಗಳ (MO) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ (AFMS Recruitment 2023). ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್‌ 5 ಕೊನೆಯ ದಿನ. ಎಂಬಿಬಿಎಸ್/ ಪಿಜಿ ಶೈಕ್ಷಣಿಕ ಅರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.

ಒಟ್ಟು 650 ಹುದ್ದೆಗಳ ಪೈಕಿ 65 ಹುದ್ದೆಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲು. ಉಳಿದ 585 ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುವುದು. ಭಾರತದ ಯಾವ ಪ್ರದೇಶದಲ್ಲಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನ 85,000 ರೂ. ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ಶುಲ್ಕ

ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು 200 ರೂ. ಶುಲ್ಕ ಪಾವತಿಸಬೇಕು. ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಲು ನವೆಂಬರ್‌ 5ರ ತನಕ ಕಾಲವಕಾಶ ಇದೆ. ನೆಟ್‌ ಬ್ಯಾಂಕಿಂಗ್‌, ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ಬಳಸಿ ಅರ್ಜಿ ಶುಲ್ಕವನ್ನು ಪಾವತಿಸಬೇಕು.

ವಯೋಮಿತಿ ಮಿತಿ ಮತ್ತು ಆಯ್ಕೆ ವಿಧಾನ

ಅರ್ಜಿ ಸಲ್ಲಿಸುವ ಎಂಬಿಬಿಎಸ್‌/ ಪಿಜಿ ಡಿಪ್ಲೋಮಾ ಅಭ್ಯರ್ಥಿಗಳ ವಯಸ್ಸು 30 ವರ್ಷ ಮೀರಿರಬಾರದು. ಇನ್ನು ಪಿಜಿ ಅಭ್ಯರ್ಥಿಗಳ ವಯಸ್ಸು 35 ವರ್ಷ ಮೀರಿರಬಾರದು. ಸರ್ಕಾರದ ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ರಿಯಾಯಿತಿ ಲಭ್ಯವಿದೆ. ಹಲವು ಹಂತಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅರ್ಜಿಗಳ ಪರಿಶೀಲನೆ, ಸಂದರ್ಶನ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ಸಲ್ಲಿಸುವ ವಿಧಾನ

ಅಪ್‌ಲೋಡ್‌ ಮಾಡಬೇಕಾದ ಡಾಕ್ಯುಮೆಂಟ್‌

ಹೆಚ್ಚಿನ ಮಾಹಿತಿಗೆ amcsscentry.gov.in. ವೆಬ್‌ಸೈಟ್‌ಗೆ ಭೇಟಿ ನೀಡಿ.

ಇದನ್ನೂ ಓದಿ: TMB Recruitment 2023: ಬ್ಯಾಂಕ್‌ ಉದ್ಯೋಗ ಹುಡುಕುವವರಿಗೆ ಗುಡ್‌ನ್ಯೂಸ್‌; ಆಫೀಸರ್‌, ಪ್ರೊಬೆಷನರಿ ಕ್ಲರ್ಕ್‌ ಹುದ್ದೆಗಳಿವೆ!

Exit mobile version