ನವ ದೆಹಲಿ: ಭಾರತೀಯ ಸೇನೆಯು ʼಅಗ್ನಿಪಥ್ʼ (Agneepath Recruitment) ಯೋಜನೆಯಡಿಯಲ್ಲಿ ಅಗ್ನಿವೀರರ (Agniveer) ನೇಮಕಕ್ಕೆ ನಡೆಸಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (CEE) ಪ್ರವೇಶ ಪತ್ರವನ್ನು (agniveer admit card 2023) ಬಿಡುಗಡೆ ಮಾಡಿದೆ.
ಈಗಾಗಲೇ ಅಗ್ನಿವೀರರ ಹುದ್ದೆಗಳಿಗೆ ಅರ್ಜಿ ಲ್ಲಿಸಿರುವ ಅಭ್ಯರ್ಥಿಗಳು ಭಾರತೀಯ ಸೇನೆಯ ವೆಬ್‌ಸೈಟ್‌ನಲ್ಲಿ ರೋಲ್ ನಂಬರ್ ಮತ್ತು ಜನ್ಮದಿನಾಂಕದೊಂದಿಗೆ ಲಾಗಿನ್ ಆಗಿ, ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಏಪ್ರಿಲ್ 17 ರಿಂದ ಏಪ್ರಿಲ್ 26 ರವರೆಗೆ ಈ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಸದ್ಯ ಜನರಲ್ ಡ್ಯೂಟಿ ಹುದ್ದೆಗಳಿಗೆ ನಡೆಸುವ ಪರೀಕ್ಷೆಯ ಪ್ರವೇಶ ಪತ್ರ ಒದಗಿಸಲಾಗಿದ್ದು, ಇತರ ಹುದ್ದೆಗಳ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರವನ್ನು ಏ.11 ರ ನಂತರ ಒದಗಿಸಲಾಗುತ್ತದೆ ಎಂದು ಭಾರತೀಯ ಸೇನೆಯು ತಿಳಿಸಿದೆ.
ಈ ಹಿಂದೆ ಈ ನೇಮಕಾತಿಯಲ್ಲಿ ಮೊದಲಿಗೆ ರ‍್ಯಾಲಿ ನಡೆಸಲಾಗುತ್ತಿತ್ತು. ಇದರಲ್ಲಿ ಸಾಮಾನ್ಯ ಸ್ಕ್ರೀನಿಂಗ್ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಈ ಪರೀಕ್ಷೆಯಲ್ಲಿ ಅಭ್ಯರ್ಥಿಯ ದೈಹಿಕ ಸದೃಢತೆಯನ್ನೂ ಪರೀಕ್ಷಿಸಲಾಗುತ್ತಿತ್ತು. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಸಾಮಾನ್ಯ ಪ್ರವೇಶ ಪರೀಕ್ಷೆ (CEE)ಯನ್ನು ನಡೆಸಲಾಗುತ್ತಿತ್ತು. ಈ ನೇಮಕ ಪ್ರಕ್ರಿಯೆಯಿಂದ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಬದಲಾವಣೆ ತಂದಿದ್ದು, ಮೊದಲಿಗೆ ಈಗ ಕಂಪ್ಯೂಟರ್ ಆಧಾರಿತ ನೇಮಕಾತಿ ಪರೀಕ್ಷೆ ನಡೆಸಲಾಗುತ್ತಿದೆ.
ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ (Click Here) ಕ್ಲಿಕ್ ಮಾಡಿ.
ಒಟ್ಟಾರೆಯಾಗಿ ಈನಗ ನೇಮಕ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಮೊದಲಿಗೆ ಆನ್‌ಲೈನ್ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಇದಾದ ನಂತರ ಆನ್‌ಲೈನ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳಬೇಕು. ಆನ್‌ಲೈನ್ ಟೆಸ್ಟ್‌ನಲ್ಲಿ ಅರ್ಹತೆ ಪಡೆದರೆ ಅವರಿಗೆ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಗುತ್ತದೆ. ಇಲ್ಲಿ ದೈಹಿಕ ಪರೀಕ್ಷೆ ನಡೆಸಿ, ನಂತರ ವೈದ್ಯಕೀಯ ಪರೀಕ್ಷೆ ನಡೆಸಿ, ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಕಂಪ್ಯೂಟರ್ ಆಧಾರಿತ ಈ ಪ್ರವೇಶ ಪರೀಕ್ಷೆಯು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ನಡೆಯಲಿವೆ.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ: https://joinindianarmy.nic.in
ಇದನ್ನೂ ಓದಿ : CRPF Recruitment 2023 : ಸಿಆರ್‌ಪಿಎಫ್‌ನಲ್ಲಿ ನಡೆಯಲಿದೆ ಭರ್ಜರಿ ನೇಮಕ; 1.30 ಲಕ್ಷ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅಧಿಸೂಚನೆ