ನವದೆಹಲಿ: ಕೇಂದ್ರ ಸರ್ಕಾರದ ಪರಮಾಣು ಇಲಾಖೆಯ ಅಧೀನದಲ್ಲಿರುವ ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(ECIL) ಖಾಲಿ ಇರುವ 484 ಅಪ್ರೆಂಟಿಸ್‌ಗಳಿಗೆ (484 Apprentice Posts) ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಐಟಿಐ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಅಕ್ಟೋಬರ್ 10ರೊಳಗೆ ಅರ್ಜಿ ಸಲ್ಲಿಸಬೇಕು.
ವಿವಿಧ ಹುದ್ದೆಗಳ ವಿವರ
ಇಎಂ-190, ಎಲೆಕ್ಟ್ರಿಶಿಯನ್-80, ಫಿಟ್ಟರ್-80, ಆರ್. & ಎಸಿ-20, ಟರ್ನರ್-20, ಮೆಕ್ಯಾನಿಸ್ಟ್-10, ಕೋಪ-40, ವೆಲ್ಡರ್-25, ಪೈಂಟರ್-4 ಅಪ್ರೆಂಟಿಸ್‌ಗಳಿವೆ.
ಇದನ್ನೂ ಓದಿ: RBI Assistant Recruitment: ಆರ್‌ಬಿಐನಲ್ಲಿದೆ 450 ಹುದ್ದೆ; ಈ ಪದವಿ ಪಡೆದಿದ್ದರೆ ಇಂದೇ ಅರ್ಜಿ ಸಲ್ಲಿಸಿ
ವಯೋಮಿತಿ
ಅರ್ಜಿ ಸಲ್ಲಿಸುವ ಸಾಮಾನ್ಯ ವಿಭಾಗದ ಅಭ್ಯರ್ಥಿಗಳು 18-25 ವಯಸ್ಸಿನವರಾಗಿರಬೇಕು. ಇನ್ನು ಮೀಸಲಾತಿ ವಿಭಾಗಗಳಿಗೆ ರಿಯಾಯಿತಿ ಪ್ರಕಟಿಸಲಾಗಿದೆ. ಅದರಂತೆ ಒಬಿಸಿ 28, ಎಸ್‌ಸಿ, ಎಸ್‌ಟಿ ವಿಭಾಗದ ಅಭ್ಯರ್ಥಿಗಳಿಗೆ 30 ವರ್ಷ ನಿಗದಿಪಡಿಸಲಾಗಿದೆ. ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಆಧಾರದಲ್ಲಿ ಆಯ್ಕೆ ನಡೆಯಲಿದೆ. ನವೆಂಬರ್ 1ರಿಂದ ತರಬೇತಿ ನಡೆಯಲಿದೆ.
ಅರ್ಜಿ ಸಲ್ಲಿಕೆ ವಿಧಾನ
- ಆಸಕ್ತ ಅಭ್ಯರ್ಥಿಗಳು ಮೊದಲು www.apprenticeshipindia.gov.in. ವೆಬ್ಸೈಟ್ಗೆ ತೆರಳಿ ಹೆಸರನ್ನು ನೋಂದಣಿ ಮಾಡಬೇಕು.
- ಬಳಿಕ Electronics Corporation of India Limited (ECIL)ನ ಅಧಿಕೃತ ವೆಬ್ಸೈಟ್ www.ecil.co.in.ಗೆ ತೆರಳಿ ಹೋಮ್ ಪೇಜ್ನ ತುದಿಯ ಬಲಭಾಗದಲ್ಲಿರುವ ʼCareersʼ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
- ಆಗ ತೆರೆದುಕೊಳ್ಳುವ ಹೊಸಪೇಜ್ನಲ್ಲಿರುವ ʼCurrent Job Openingsʼ ಮೇಲೆ ಕ್ಲಿಕ್ ಮಾಡಿ.
- ಬಳಿಕ ಹೊಸ ರಿಜಿಸ್ಟ್ರೇಶನ್ ಪೇಜ್ ತೆರೆದುಕೊಳ್ಳಲಿದ್ದು, ಅದರಲ್ಲಿನ ʼOnline applications are invited for the engagement of ITI Trade apprentices at ECIL Hyderabad under the Apprenticeship Act 1961ʼ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಇ-ಮೇಲ್ ಮೂಲಕ ಲಾಗಿನ್ ಆಗಿ ಮತ್ತು ನಿಮ್ಮ ವಿವರ ಮತ್ತು ಶೈಕ್ಷಣಿಕ ಮಾಹಿತಿ ನೀಡಿ ECIL ಅಪ್ಲಿಕೇಶನ್ ಫಾರಂ ಭರ್ತಿ ಮಾಡಿ.
- ಸ್ಕ್ಯಾನ್ ಮಾಡಿದ ನಿಮ್ಮ ಇತ್ತೀಚಿನ ಕಲರ್ ಫೋಟೊ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ ʼSubmitʼ ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗಾಗಿ ಅರ್ಜಿಯನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.