Site icon Vistara News

Bank Recruitment 2022 | ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿದೆ ಆಫೀಸರ್‌ ಹುದ್ದೆ

Bank Recruitment 2022

ಬೆಂಗಳೂರು: ದೇಶದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾದ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಸ್ಪೆಷಲಿಸ್ಟ್‌ ಕೇಡರ್‌ನ ಆಫೀಸರ್‌ ಹುದ್ದೆಗಳಿಗೆ (Bank Recruitment 2022) ನೇಮಕ ಮಾಡಿಕೊಳ್ಳುತ್ತಿದ್ದು, ಆನ್‌ಲೈನ್‌ ನಲ್ಲಿ ಅರ್ಜಿ ಆಹ್ವಾನಿಸಿದೆ. ಒಟ್ಟು 110 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಅಕ್ಟೋಬರ್‌ 17 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಕೇವಲ ಸಂದರ್ಶನ ನಡೆಸಿ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಡಿಸೆಂಬರ್‌ನಲ್ಲಿ ಸಂದರ್ಶನ ನಡೆಯುವ ಸಾಧ್ಯತೆಗಳಿವೆ. ಸಾಮಾನ್ಯ ಅಭ್ಯರ್ಥಿಗಳಿಗೆ 850 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 175 ರೂ. ನಿಗದಿಪಡಿಸಲಾಗಿದ್ದು, ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕ ಪಾವತಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಲಿಂಕ್‌ | https://ibpsonline.ibps.in/cbiosep22/

ಯಾವೆಲ್ಲಾ ಹುದ್ದೆಗಳಿಗೆ ನೇಮಕ?
IT, Economist, Data Scientist, Risk Manager, IT SOC Analyst , IT Security Analyst , Technical Officer(Credit), Credit Officer, Data Engineer , Risk Manager, Law Officer, Security, Financial Analyst, Credit officers, Economist, Security ಹುದ್ದೆಗಳಿಗೆ ನೇಮಕ ನಡೆಯಲಿದೆ. ಐಟಿಯ ಒಟ್ಟು 21 ಹುದ್ದೆಗಳಿವೆ. ಹುದ್ದೆಗಳಿಗೆ ನಿಗದಿತ ವಿದ್ಯಾರ್ಹತೆಯ ಜತೆಗೆ ಅನುಭವವನ್ನು ಬಯಸಲಾಗಿದೆ.

Bank Recruitment 2022

ವಿದ್ಯಾರ್ಹತೆ, ಅನುಭವ ಮತ್ತು ವಯೋಮಿತಿ ಕುರಿತ ವಿವರವಾದ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದ್ದು, ಅಭ್ಯರ್ಥಿಗಳು ಇದನ್ನು ನೋಡಿಕೊಂಡೇ ಅರ್ಜಿ ಸಲ್ಲಿಸಬೇಕೆಂದು ಬ್ಯಾಂಕ್‌ ಪ್ರಕಟಣೆಯಲ್ಲಿ ಕೋರಿದೆ. ಗರಿಷ್ಠ ವಯೋಮಿತಿಯಲ್ಲಿ ಸರ್ಕಾರದ ನಿಯಮದ ಪ್ರಕಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ನೀಡಲಾಗಿರುತ್ತದೆ.

ಅಧಿಸೂಚನೆಯನ್ನು ಓದಲು ಲಿಂಕ್‌ ಇಲ್ಲಿದೆ | https://www.centralbankofindia.co.in/en/recruitments

ಇದನ್ನೂ ಓದಿ | SBI PO Recruitment 2022 | 1,673 ಪ್ರೊಬೇಷನರಿ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

Exit mobile version