Site icon Vistara News

Apprenticeship Training: ಬೆಸ್ಕಾಂನಲ್ಲಿ 400 ಅಪ್ರೆಂಟಿಸ್‌ ತರಬೇತಿಗೆ ಅರ್ಜಿ ಆಹ್ವಾನ; ನಾಳೆ ಕೊನೇ ದಿನ

Apprenticeship Training in Bescom

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ 2023-2024 ನೇ ಸಾಲಿಗೆ ಒಂದು ವರ್ಷದ ಅವಧಿಗೆ ಅಪ್ರೆಂಟಿಸ್‌ ತರಬೇತಿ (Apprenticeship Training – ಶಿಶುಕ್ಷು ತರಬೇತಿ) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯಕ್ಕೆ ಸೇರಿದ ಅರ್ಹ ಅಭ್ಯರ್ಥಿಗಳಿಂದ (ಇಂಜಿನಿಯರಿಂಗ್ ಪದವಿ ಮತ್ತು ಡಿಪ್ಲೋಮಾ – Engineering Degree and Diploma) ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ವಿವಿಧ ಪ್ರವರ್ಗಗಳ ಅಡಿಯಲ್ಲಿ ಒಟ್ಟು 400 ಅಪ್ರೆಂಟಿಸ್‌ಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಪದವೀಧರ ಅಪ್ರೆಂಟಿಸ್‌ ವರ್ಗದಡಿ ಎಲೆಕ್ಟ್ರಾನಿಕ್‌ ಮತ್ತು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಶನ್‌ ಎಂಜಿನಿಯರಿಂಗ್‌, ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌, ಇನ್ಫಾರ್ಮೇಶನ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌, ಸಿವಿಲ್‌ ಎಂಜಿನಿಯರಿಂಗ್‌, ಇನ್‌ಸ್ಟ್ರುಮೆಂಟಲ್‌ ಟೆಕ್ನಾಲಜಿ ಎಂಜಿನಿಯರಿಂಗ್‌ಗಳಲ್ಲಿ ಒಟ್ಟು 325 ಅಪ್ರೆಂಟಿಸ್‌ಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಇದಕ್ಕೆ ಮಾಸಿಕ ಶಿಶುಕ್ಷು ವೇತನವಾಗಿ ಮಾಸಿಕ 9,008 ರೂಪಾಯಿಯಂತೆ ಒಂದು ವರ್ಷಗಳ ಅವಧಿಗೆ ಕೊಡಲಾಗುವುದು.

ಇನ್ನು ಟೆಕ್ನಿಷಿಯನ್‌ (ಡಿಪ್ಲೊಮಾ) ಅಪ್ರೆಂಟಿಸ್ ಅಡಿಯಲ್ಲಿ ಎಲೆಕ್ಟ್ರಿಕಲ್ಸ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ಎಂಜಿನಿಯರಿಂಗ್, ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ಗಳಡಿ ಒಟ್ಟು 75 ಅಪ್ರೆಂಟಿಸ್‌ಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಮಾಸಿಕವಾಗಿ ಒಟ್ಟು 8,000 ರೂಪಾಯಿಯಂತೆ ಒಂದು ವರ್ಷಗಳ ಅವಧಿವರೆಗೆ ನೀಡಲಾಗುವುದು.

ಅರ್ಹತೆಗಳು

ಅರ್ಹತಾ ಮಾನದಂಡಗಳು

ಮೀಸಲಾತಿ ಪಡೆಯಲು ಷರತ್ತು

ಅಪ್ರೆಂಟಿಸ್ ಕಾಯ್ದೆಯಡಿಯಲ್ಲಿ ಎಸ್.ಸಿ./ಎಸ್.ಟಿ./ಒಬಿಸಿ ಮೀಸಲಾತಿಗೆ ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮೀಸಲಾತಿಯನ್ನು ನೀಡಲಾಗುವುದು. ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳು ನೀಡಿರುವ ಮೀಸಲಾತಿಯನ್ನು ಮಾತ್ರ ಪರಿಗಣಿಸಲಾಗುವುದು. ಅಭ್ಯರ್ಥಿಗಳು ಪರಿಶೀಲನೆ ಸಮಯದಲ್ಲಿ ಮೀಸಲಾತಿಗೆ ಪೂರಕವಾಗಿ ಸಂಬಂಧಿತ ಮೀಸಲಾತಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ ಹಾಗೂ ಒಂದು ವೇಳೆ ಸಲ್ಲಿಸಲು ವಿಫಲವಾದಲ್ಲಿ ಅಭ್ಯರ್ಥಿಗಳ ಮೀಸಲಾತಿಯ ಹಕ್ಕನ್ನು ಸಾಮಾನ್ಯ ವರ್ಗವೆಂದು ಪರಿಗಣಿಸಲಾಗುವುದು.

ಕನಿಷ್ಠ ದೈಹಿಕ ಸಾಮರ್ಥ್ಯ

ಅಭ್ಯರ್ಥಿಯು ಯಾವುದೇ ಅಂಟುರೋಗ ಅಥವಾ ಸಾಂಕ್ರಾಮಿಕ ಕಾಯಿಲೆಯ ಪುರಾವೆಗಳಿಂದ ಮುಕ್ತವಾಗಿರಬೇಕು. ಅಭ್ಯರ್ಥಿಯು ಸೇವೆಯಿಂದ ಉಲ್ಬಣಗೊಳ್ಳುವ ಅಥವಾ ಸೇವೆಗೆ ಅನರ್ಹರಾಗುವ ಅಥವಾ ಸಾರ್ವಜನಿಕರ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಯಾವುದೇ ಕಾಯಿಲೆಯಿಂದ ಬಳಲುತ್ತಿರಬಾರದು. ಅಪ್ರೆಂಟಿಸ್ ಕಾಯ್ದೆಯ ಅನುಸೂಚಿ-2 ರಲ್ಲಿ ನೀಡಿರುವ ಕ್ಷಯರೋಗ ಕಾಯಿಲೆಯ ಸಕ್ರಿಯತೆಯ ಪುರಾವೆಯಿಂದ ಅಥವಾ ಅದರ ಆರೋಗ್ಯ ಸಮಸ್ಯೆಯಿಂದ ಮುಕ್ತನಾಗಿರಬೇಕು. ಸಹಾಯಕ ಶಸ್ತ್ರಚಿಕಿತ್ಸಕ ಶ್ರೇಣಿಯ ಹುದ್ದೆಗೆ ಕೆಳಮಟ್ಟವಲ್ಲದ ವೈದ್ಯಕೀಯ ಅಧಿಕಾರಿಯಿಂದ ಲಿಖಿತರೂಪದಲ್ಲಿ ನೀಡುವ ವೈದ್ಯಕೀಯ ಪ್ರಮಾಣ ಪತ್ರವನ್ನು ಅಭ್ಯರ್ಥಿಯು ಹಾಜರುಪಡಿಸಬೇಕು.

ತರಬೇತಿಯ ಅವಧಿ

ಅಪ್ರೆಂಟಿಸ್ ಕಾಯ್ದೆ 1961ರ ಪ್ರಕಾರ ಅಪ್ರೆಂಟಿಸ್ ತರಬೇತಿಯ ಅವಧಿ ಒಂದು ವರ್ಷದ ಅವಧಿಗೆ ಇರುತ್ತದೆ.

ಆಯ್ಕೆ ವಿಧಾನ

ಬೋರ್ಡ್ ಆಫ್ ಅಪ್ರೆಂಟಿಸ್ ಟ್ರೈನಿಂಗ್ (ದಕ್ಷಿಣ ಕ್ಷೇತ್ರೀಯ)ವರಿಗೆ ಆನ್‌ಲೈನ್ ಅರ್ಜಿಗಳ ದತ್ತಾಂಶದಿಂದ ಅಭ್ಯರ್ಥಿಗಳ ಕಿರುಪಟ್ಟಿಯನ್ನು ತಯಾರಿಸುವ ಕೆಲಸವನ್ನು ವಹಿಸಲಾಗಿದೆ. ಅರ್ಹತಾ ಪರೀಕ್ಷೆಗಳಲ್ಲಿ ಮಾತ್ರ ಪಡೆದ ಅಂಕಗಳ ಆಧಾರದ ಮೇಲೆ ಕಿರುಪಟ್ಟಿಯನ್ನು ತಯಾರಿಸಲಾಗುತ್ತದೆ. ಕಿರುಪಟ್ಟಿ ಆದ ಅಭ್ಯರ್ಥಿಗಳ ವಿವರಗಳನ್ನು ಅವರ ನೋಂದಾಯಿತ ಇ-ಮೇಲ್ ಐಡಿಗೆ ಸಂದೇಶ ರವಾನಿಸಲಾಗುತ್ತದೆ. ದಾಖಲೆಗಳ ಪರಿಶೀಲನೆಗೆ “ಉಪ ಪ್ರಧಾನ ವ್ಯವಸ್ಥಾಪಕರು ರವರ ಕಚೇರಿ., ಮಾನವ ಸಂಪನ್ಮೂಲ ಅಭಿವೃದ್ಧಿ, ಕೇಂದ್ರ, ಬೆ.ವಿ.ಕಂ., ಕ್ರೆಸೆಂಟ್ ಟವರ್ಸ್, ಕ್ರೆಸೆಂಟ್ ರಸ್ತೆ, ಮಲ್ಲಿಗೆ ಆಸ್ಪತ್ರೆಯ ಪಕ್ಕ, ರೇಸ್ ಕೋರ್ಸ್ ರಸ್ತೆಯ ಹತ್ತಿರ, ಬೆಂಗಳೂರು-560001″ ರವರ ಕಚೇರಿಗೆ ಅಭ್ಯರ್ಥಿಗಳು ಖುದ್ದಾಗಿ ಹಾಜರಾಗಬೇಕು.

ಅರ್ಜಿಗಳನ್ನು ನೋಂದಣಿ ಮಾಡುವ ಮತ್ತು ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ಕೊನೇ ದಿನಾಂಕ

ಇದನ್ನೂ ಓದಿ: Guest Lecturer: ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ, ವಿಮೆ ಘೋಷಣೆ

ಅಭ್ಯರ್ಥಿಗಳ ಪಟ್ಟಿಯನ್ನು ಇಲ್ಲಿ ನೋಡಿ

ಅಭ್ಯರ್ಥಿಗಳ ಪಟ್ಟಿಯನ್ನು ಈ ವೆಬ್‌ಸೈಟ್‌ನ ಮುಖಪುಟದ Organised Events & News Sections ಹಾಗೂ ಬೆವಿಕಂ ವೆಬ್‌ಸೈಟ್‌ನ Administration & Human Resource/ Training ಮತ್ತು ಮುಖಪುಟದ Latest News ಅಡಿಯಲ್ಲಿ ಪ್ರಕಟಿಸಲಾಗುವುದು. ಅಲ್ಲದೆ, ಯಾವುದೇ ಸ್ಪಷ್ಟೀಕರಣಕ್ಕೆ ಅಭ್ಯರ್ಥಿಗಳು ಇ-ಮೇಲ್‌ (dgmhrd.work@gmail.com) ಮೂಲಕ ಸಂಪರ್ಕಿಸಬಹದು. ಎಂದು ಬೆವಿಕಂ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version