ಬೆಂಗಳೂರು: ʻನಮ್ಮ ಮೆಟ್ರೋʼ ಖ್ಯಾತಿಯ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ (ಬಿಎಂಆರ್‌ಸಿ) ಖಾಲಿ ಇರುವ ವಿವಿಧ 236 ಹುದ್ದೆಗಳಿಗೆ (BMRCL Recruitment 2023) ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಜುಲೈ 22 ರಿಂದ ಪರೀಕ್ಷೆ ನಡೆಸಲಿದ್ದು, ಪ್ರವೇಶ ಪತ್ರವನ್ನು ವೆಬ್‌ಸೈಟ್‌ನಲ್ಲಿ ಒದಗಿಸಿದೆ.
ಪರೀಕ್ಷೆ ಬರೆಯಬೇಕಾಗಿರುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆವ್‌ಸೈಟ್‌ನಲ್ಲಿ ಅಥವಾ ನಮ್ಮ ಮೆಟ್ರೋದ ವೆಬ್‌ಸೈಟ್‌ನಲ್ಲಿ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ವಿಶೇಷ ಲಿಂಕ್ ಒದಗಿಸಲಾಗಿದ್ದು, ಅಭ್ಯರ್ಥಿಗಳು ಲಿಂಕ್‌ನಲ್ಲಿ ಮೊದಲಿಗೆ ಅರ್ಜಿ ಸಲ್ಲಿಸಿರುವ ಇಲಾಖೆಯನ್ನು ಸೆಲೆಕ್ಟ್ ಮಾಡಿಕೊಂಡು, ನಂತರ ಅರ್ಜಿ ಸಂಖ್ಯೆಯನ್ನು ಹಾಗೂ ತಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ಟೈಪ್ ಮಾಡುವ ಮೂಲಕ ಲಾಗಿನ್ ಆಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ (Click Here) ಮಾಡಿ.
ಪ್ರವೇಶ ಪತ್ರದಲ್ಲಿ ಪರೀಕ್ಷೆಗೆ ಸಂಬಂಧಿಸಿದ ಸೂಚನೆಗಳನ್ನು ನೀಡಲಾಗಿದ್ದು, ಪ್ರವೇಶ ಪತ್ರದಲ್ಲಿ ಮುದ್ರಿಸಿರುವ ಎಲ್ಲಾ ವಿವರಗಳನ್ನು ಪರಿಶೀಲಿಸಿ, ನಿಗದಿತ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದ ಮಾಹಿತಿಯನ್ನೂ ಪ್ರವೇಶ ಪತ್ರದಲ್ಲಿ ಒದಗಿಸಲಾಗಿರುತ್ತದೆ.
ಜುಲೈ 22, ಜುಲೈ 23 ಮತ್ತು ಜುಲೈ 30 ರಂದು ಪರೀಕ್ಷೆ ನಡೆಯಲಿದೆ. ಜುಲೈ 22 ರಂದು ಸ್ಟೇಷನ್ ಕಂಟ್ರೋಲರ್ / ಟ್ರೈನ್ ಆಪರೇಟರ್ ಹುದ್ದೆಗಳಿಗೆ ಮಧ್ಯಾಹ್ನ 2.30 ರಿಂದ ಪರೀಕ್ಷೆ ನಡೆಯಲಿದೆ. ಜುಲೈ 23 ರಂದು ಬೆಳಗ್ಗೆ 10.30 ರಿಂದ ಮೇಂಟೇನರ್ಸ್ ಸಿಸ್ಟಮ್ಸ್ ಮತ್ತು ಮೇಂಟೇನರ್ಸ್ ಸಿವಿಲ್ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ 2.30 ರಿಂದ ಸೆಕ್ಷಂನ್ ಎಂಜಿನಿಯರ್ (ಸಿವಿಲ್) ಮತ್ತು ಸೆಕ್ಷಂನ್ ಎಂಜಿನಿಯರ್ (ಸಿಸ್ಟಮ್) ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಜುಲೈ 30 ರಂದು ಬೆಳಗ್ಗೆ 10.30 ರಿಂದ ಮೇಂಟೇನರ್ಸ್ ಸಿಸ್ಟಮ್ಸ್ ಮತ್ತು ಮೇಂಟೇನರ್ಸ್ ಸಿವಿಲ್ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆದರೆ, ಮಧ್ಯಾಹ್ನದ ಮಧ್ಯಾಹ್ನ 2.30 ರಿಂದ ಸ್ಟೇಷನ್ ಕಂಟ್ರೋಲರ್ / ಟ್ರೈನ್ ಆಪರೇಟರ್ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಲಿದೆ.
ಸ್ಟೇಷನ್ ಕಂಟ್ರೋಲರ್ / ಟ್ರೈನ್ ಆಪರೇಟರ್ – 92 + 16 ಹೈಕ = 108 ಹುದ್ದೆಗಳು
ಸೆಕ್ಷನ್ ಎಂಜಿನಿಯರ್ ಸಿಸ್ಟಮ್ಸ್ – 10 ಹುದ್ದೆಗಳು
ಸೆಕ್ಷನ್ ಎಂಜಿನಿಯರ್ ಸಿವಿಲ್ -04 ಹುದ್ದೆಗಳು
ಮೇಂಟೇನರ್ಸ್ ಸಿಸ್ಟಮ್ಸ್ -44 + 06 (ಹೈಕ) = 50 ಹುದ್ದೆಗಳು
ಮೇಂಟೇನರ್ಸ್ ಸಿವಿಲ್ – 57 + 7 (ಹೈಕ) = 64 ಹುದ್ದೆಗಳು
ಒಟ್ಟು 236 ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಲಿಖಿತ ಪರೀಕ್ಷೆಯು ನೂರು ಅಂಕಗಳಿಗೆ ನಡೆಯಲಿದ್ದು, ವಸ್ತುನಿಷ್ಠ ಮಾದರಿಯಲ್ಲಿ ನಡೆಸಲಾಗುತ್ತದೆ. ಪರೀಕ್ಷೆ ಬರೆಯಲು ಎರಡು ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಡೆಯಲಿದೆ. ಓಎಂಆರ್ ಶೀಟ್ ನಲ್ಲಿಯೂ ಕನ್ನಡದಲ್ಲಿಯೇ ಮಾಹಿತಿ ನೀಡಲಾಗಿರುತ್ತದೆ. ಇಲ್ಲಿ ಕನ್ನಡ ಬರೆಯದ ಅಭ್ಯರ್ಥಿಯನ್ನು ನೇಮಕಕ್ಕೆ ಪರಿಗಣಿಸಲಾಗುವುದಿಲ್ಲ. ಈ ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನವಿರುತ್ತದೆ.
ಇದನ್ನೂ ಓದಿ : Agniveer Recruitment 2023: ಭಾರತೀಯ ವಾಯುಪಡೆಗೆ ಅಗ್ನಿವೀರರ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ
ಈ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮೂಲ ದಾಖಲೆಗಳ ಪರಿಶೀಲನೆಗಾಗಿ ಮತ್ತು ಕನ್ನಡ ಭಾಷಾ ಪರೀಕ್ಷೆಗೆ ಕರೆಯಲಾಗುತ್ತದೆ. ದಾಖಲಾತಿ ಮತ್ತು ಕನ್ನಡ ಪರೀಕ್ಷೇಯಲ್ಲಿ ಉತ್ತಿರ್ಣರಾದವರನ್ನು ನಂತರ ವೈದ್ಯಕೀಯ ಫಿಟ್‌ನೆಸ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸ್ಟೇಷನ್ ಕಂಟ್ರೋಲರ್/ಟ್ರೈನ್ ಆಪರೇಟರ್ ಹುದ್ದೆಗೆ 1:5 ಅನುಪಾತದಲ್ಲಿ ಸೈಕೋಮೆಟ್ರಿಕ್(Psychometric) ಪರೀಕ್ಷೆ ನಡೆಸಲಾಗುತ್ತದೆ. ಆನಂತರ ನೇಮಕ ಮಾಡಿಕೊಳ್ಳಲಾಗುತ್ತದೆ.