ಬೆಂಗಳೂರು: 1410 ಕಾನ್ಸ್‌ಟೇಬಲ್(ಟ್ರೇಡ್ಸ್‌ಮನ್) ಹುದ್ದೆಗಳಿಗೆ ಗಡಿ ಭದ್ರತಾ ಪಡೆ(Border Security Force-BSF) ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು rectt.bsf.gov.in ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ನೇಮಕಾತಿಗೆ ಜಾಲತಾಣದಲ್ಲಿ ಜಾಹೀರಾತು ಪ್ರಕಟಿಸಿದ ದಿನದಿಂದ 30 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕು. ಒಟ್ಟು ಹುದ್ದೆಗಳ ಪೈಕಿ 1343 ಮಹಿಳೆಯರಿಗಾಗಿ, 67 ಪುರುಷರಿಗೆ ಮೀಸಲು ಇಡಲಾಗಿದೆ(BSF Recruitment 2023).
ಅರ್ಹ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಅಥವಾ ಅದಕ್ಕೆ ಸಮನಾದ ಅರ್ಹತೆಯನ್ನು ಹೊಂದಿರುಬೇಕು. 18ರಿಂದ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲ ಶೈಕ್ಷಣಿಕ ಅರ್ಹತೆಗಳ ದಾಖಲಾತಿಗಳನ್ನು ಹೊಂದಿರಬೇಕು.
ಇದನ್ನೂ ಓದಿ: DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ
ಹೇಗೆ ಅರ್ಜಿ ಸಲ್ಲಿಸುವುದು?
ಅರ್ಹ ಅಭ್ಯರ್ಥಿಗಳು ಮೊದಲಿಗೆ ಬಿಎಸ್‌ಎಫ್‌ನ ಅಧಿಕೃತ rectt.bsf.gov.in ಜಾಲತಾಣಕ್ಕೆ ಭೇಟಿ ನೀಡಬೇಕು. ಆಗಾ ಕಾಣಿಸಿಕೊಳ್ಳುವ ಹೋಮ್‌ಪೇಜ್‌ನಲ್ಲಿರುವ Constable Tradesman post ಲಿಂಕ್ ಮೇಲೆ ಕ್ಲಿಕ್ ಮಾಡಿ. ಬೇಕಾಗುವ ಎಲ್ಲ ಮಾಹಿತಿಯನ್ನು ನೀಡಿ ನೋಂದಣಿ ಮಾಡಿಕೊಳ್ಳಿ. ಬಳಿಕ ಅಪ್ಲಿಕೇಷನ್ ಭರ್ತಿ ಮಾಡಿ ಮತ್ತು ಸೂಚಿಸಲಾದ ಶುಲ್ಕವನ್ನು ಭರ್ತಿ ಮಾಡಿ. ಈ ಎಲ್ಲ ಕ್ರಿಯೆ ಮುಗಿದ ಬಳಿಕ submit ಬಟನ್ ಮೇಲೆ ಕ್ಲಿಕ್ ಮಾಡಿ. ಮುಂದಿನ ಸಂವಹನಕ್ಕಾಗಿ ಯಾವದಕ್ಕೂ ಅಪ್ಲಿಕೇಷನ್‌ನ ಒಂದು ಕಾಪಿಯನ್ನು ಇಟ್ಟುಕೊಳ್ಳುವುದು ಒಳ್ಳೆಯದು.