Site icon Vistara News

CDAC Recruitment 2023: 278 ಹುದ್ದೆಗಳಿವೆ; ಇಂದೇ ಅರ್ಜಿ ಸಲ್ಲಿಸಿ

cdac

cdac

ನವ ದೆಹಲಿ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌(CDAC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (CDAC Recruitment 2023). ಪ್ರಾಜೆಕ್ಟ್‌ ಎಂಜಿನಿಯರ್‌, ಪ್ರಾಜೆಕ್ಟ್‌ ಅಸೋಸಿಯೇಟ್‌ ಸೇರಿದಂತೆ ವಿವಿಧ 278 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನಿಮ್ಮ ಅರ್ಜಿ ಅಕ್ಟೋಬರ್‌ 20ರ ಮುಂಚಿತವಾಗಿ ಸಲ್ಲಿಕೆಯಾಗಲಿ ಎಂದು ಅಧಿಸೂಚನೆ ತಿಳಿಸಿದೆ. ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ-https://www.cdac.in ಪರಿಶೀಲಿಸಬಹುದು.

ಹುದ್ದೆಗಳ ವಿವರ

ಪ್ರಾಜೆಕ್ಟ್‌ ಅಸಿಸ್ಟೆಂಟ್‌-35, ಪ್ರಾಜೆಕ್ಟ್‌ ಅಸಿಸ್ಟೆಂಟ್‌/ ಜ್ಯೂನಿಯರ್‌ ಫೀಲ್ಡ್‌ ಅಪ್ಲಿಕೇಷನ್‌ ಎಂಜಿನಿಯರ್‌-04, ಪ್ರಾಜೆಕ್ಟ್‌ ಎಂಜಿನಿಯರ್‌/ ಫೀಲ್ಡ್‌ ಅಪ್ಲಿಕೇಷನ್‌ ಎಂಜಿನಿಯರ್‌-150, ಪ್ರಾಜೆಕ್ಟ್‌ ಮ್ಯಾನೇಜರ್‌/ ಪ್ರೋಗ್ರಾಂ ಮ್ಯಾನೇಜರ್‌/ ಪ್ರೋಗ್ರಾಂ ಡೆಲಿವರಿ ಮ್ಯಾನೇಜರ್‌/ ನಾಲೆಡ್ಜ್‌ ಪಾರ್ಟ್ನರ್‌/ ಪ್ರೋಡ್.‌ ಸರ್ವೀಸ್‌ & ಔಟ್‌ರಿಚ್‌ (PS&O) ಮ್ಯಾನೇಜರ್‌-25, ಪ್ರಾಜೆಕ್ಟ್‌ ಆಫೀಸರ್‌ (ಔಟ್‌ರಿಚ್‌ & ಪ್ಲೇಸ್‌ಮೆಂಟ್‌)-01, ಪ್ರಾಜೆಕ್ಟ್‌ ಸಪೋರ್ಟ್‌ ಸ್ಟಾಫ್‌(ಅಕೌಂಟ್ಸ್‌)-01, ಪ್ರಾಜೆಕ್ಟ್‌ ಸಪೋರ್ಟ್‌ ಸ್ಟಾಫ್‌(ಹಿಂದಿ ಸೆಕ್ಷನ್‌)-01, ಪ್ರಾಜೆಕ್ಟ್‌ ಸಪೋರ್ಟ್‌ ಸ್ಟಾಫ್‌ (ಎಚ್‌ಆರ್‌ಡಿ)-03, ಪ್ರಾಜೆಕ್ಟ್‌ ಟೆಕ್ನೀಶಿಯನ್‌-08, ಸೀನಿಯರ್‌ ಪ್ರಾಜೆಕ್ಟ್‌ ಎಂಜಿನೀಯರ್‌/ ಮೋಡ್ಯುಲ್‌ ಲೀಡ್‌/ ಪ್ರಾಜೆಕ್ಟ್‌ ಲೀಡ್‌/ ಪ್ರೋಡ್‌. ಸರ್ವೀಸ್‌ & ಔಟ್‌ರಿಚ್‌ (PS&O) ಆಫೀಸರ್‌-50 ಹೀಗೆ ಒಟ್ಟು 278 ಹುದ್ದೆಗಳು ಖಾಲಿ ಇವೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ

ಡಿಪ್ಲೋಮಾ/ ಬಿ.ಇ./ ಬಿ.ಟೆಕ್‌/ ಸ್ನಾತಕೋತ್ತರ ಪದವಿ/ ಪಿ.ಎಚ್‌.ಡಿ. ಓದಿದವರು ಅರ್ಜಿ ಸಲ್ಲಿಸಲು ಅರ್ಹರು. ವಿವಿಧ ಹುದ್ದೆಗಳಿಗೆ ಅನುಗುಣವಾಗಿ 30ರಿಂದ 50 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಸರ್ಕಾರಿ ಉದ್ಯೋಗಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಅರ್ಜಿ ಸಲ್ಲಿಸುವಾಗ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತದ ಎಲ್ಲಿ ಬೇಕಾದರೂ ಉದ್ಯೋಗ ಲಭಿಸುವ ಅವಕಾಶವಿದೆ.

ಇದನ್ನೂ ಓದಿ: KPSC Recruitment: 230 ಕಮರ್ಷಿಯಲ್ ಟ್ಯಾಕ್ಸ್​ ಇನ್ಸ್​ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

ಆಯ್ಕೆ ವಿಧಾನ

ಸಂದರ್ಶನ, ದಾಖಲಾತಿಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ಸಲ್ಲಿಕೆಯ ವಿಧಾನ

Exit mobile version