Site icon Vistara News

Central University Recruitment | ಸೆಂಟ್ರಲ್‌ ವಿವಿಯಲ್ಲಿ 77 ಬೋಧಕೇತರ ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Central University Recruitment

ಬೆಂಗಳೂರು: ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಬೋಧಕೇತರ ಸಿಬ್ಬಂದಿ ನೇಮಕಕ್ಕೆ (Central University Recruitment) ಅರ್ಜಿ ಆಹ್ವಾನಿಸಿದೆ. ಒಟ್ಟು 77 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಇದರಲ್ಲಿ 48 ʼಗ್ರೂಪ್‌-ಸಿʼಯ ಹುದ್ದೆಗಳಾಗಿವೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಆರ್ಜಿ ಸಲ್ಲಿಸಲು ಜನವರಿ23 ಕೊನೆಯ ದಿನವಾಗಿದೆ. ವಿವಿಯ ರಿಜಿಸ್ಟಾರ್‌ ಮತ್ತು ಫೈನಾನ್ಸ್‌ ಆಫೀಸರ್‌ ತಲಾ ಒಂದು ಹುದ್ದೆ. ಗ್ರೂಪ್‌ “ಎ”ಯ ವಿವಿಧ ಆರು ಹುದ್ದೆ ಹಾಗೂ ʼಗ್ರೂಪ್‌ ಬಿʼ ಒಟ್ಟು 21 ಹುದ್ದೆಗಳಿಗೆ ನೇಮಕ ನಡೆಯಲಿದೆ. ಗ್ರೂಪ್‌-ಸಿಯ ಒಟ್ಟು 48 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಇದರಲ್ಲಿ 16 ಕ್ಲರ್ಕ್‌ ಹುದ್ದೆಗಳಾಗಿವೆ. ಇದಲ್ಲದೆ, ಲ್ಯಾಬರೊಟರಿ ಅಟೆಂಡೆಂಟ್‌ 6 ಹುದ್ದೆಗಳಿಗೂ ನೇಮಕ ನಡೆಯಲಿದೆ.

ಹುದ್ದೆಗಳ ವಿವರ ಇಂತಿದೆ;

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿದ್ಯಾರ್ಹತೆ ಮತ್ತು ವಯೋಮಿತಿಯ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ. ಕೆಲವು ಹುದ್ದೆಗಳಿಗೆ ಅನುಭವ ಹೊಂದಿದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿರುತ್ತದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಲು ಅವಕಾಶ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ವೆಬ್‌ ಸೈಟ್‌: http://www.cuk.ac.in

ಇದನ್ನೂ ಓದಿ| KSP Recruitment 2022 | ಸಶಸ್ತ್ರ ಮೀಸಲು ಎಸ್‌ಐ ಹುದ್ದೆಗಳಿಗೆ ಜನವರಿ 8ಕ್ಕೆ ಲಿಖಿತ ಪರೀಕ್ಷೆ

Exit mobile version