ಬೆಂಗಳೂರು: ಚಿತ್ರದುರ್ಗ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಸೆಂಟ್ರಲ್ ಬ್ಯಾಂಕ್ (Chitradurga District Co-operative Central Bank-Chitradurga DCCB) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ ( Chitradurga DCCB Recruitment). ಅಸಿಸ್ಟಂಟ್ ಜನರಲ್ ಮ್ಯಾನೇಜರ್, ಡ್ರೈವರ್, ಅಟೆಂಡರ್ ಸೇರಿ ಒಟ್ಟು 68 ಹುದ್ದೆಗಳು ಖಾಲಿ ಇದ್ದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 16ರ ಒಳಗೆ ನಿಮ್ಮ ಅರ್ಜಿ ಸಲ್ಲಿಕೆಯಾಗಲಿ.
ಹುದ್ದೆಗಳ ವಿವರ ಮತ್ತು ಶೈಕ್ಷಣಿಕ ಅರ್ಹತೆ
ಅಸಿಸ್ಟಂಟ್ ಜನರಲ್ ಮ್ಯಾನೇಜರ್- 6 ಹುದ್ದೆ-ಸ್ನಾತಕೋತ್ತರ ಪದವಿ
ಫಸ್ಟ್ ಡಿವಿಷನ್ ಅಸಿಸ್ಟೆಂಟ್-9 ಹುದ್ದೆ-ಪದವಿ
ಸೆಕೆಂಡ್ ಡಿವಿಷನ್ ಅಸಿಸ್ಟಂಟ್-35 ಹುದ್ದೆ-ಪದವಿ
ಕಂಪ್ಯೂಟರ್ ಎಂಜಿನಿಯರ್-2 ಹುದ್ದೆ-ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಎಸ್.ಸಿ., ಬಿ.ಇ. ಅಥವಾ ಬಿ.ಸಿ.ಎ.
ಡ್ರೈವರ್-2 ಹುದ್ದೆ-ಎಸ್ಸೆಸ್ಸೆಲ್ಸಿ
ಅಟೆಂಡರ್-14 ಹುದ್ದೆ-ಎಸ್ಸೆಸ್ಸೆಲ್ಸಿ
ವಯೋಮಿತಿ ಮತ್ತು ಸಡಿಲಿಕೆ
ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. 2ಎ/2ಬಿ/3ಎ & 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ/ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಎಚ್/ ವಿಧವಾ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ.
ಅರ್ಜಿ ಶುಲ್ಕ
ಎಸ್/ಎಸ್‌ಟಿ/ಪಿಎಚ್/ವಿಧವಾ & ಯೋಧರು ಅರ್ಜಿ ಶುಲ್ಕವಾಗಿ 750 ರೂ. ಮತ್ತು ಸಾಮಾನ್ಯ/2ಎ/2ಬಿ/3ಎ & 3ಬಿ ಅಭ್ಯರ್ಥಿಗಳು 1,500 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಇದಕ್ಕಾಗಿ ನೆಟ್ ಬ್ಯಾಂಕಿಂಗ್, ಡೆಬಿಟ್, ಕ್ರೆಡಿಟ್ ಕಾರ್ಡ್, ಯುಪಿಐ ವಿಧಾನ ಬಳಸಬಹುದು. ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಇದನ್ನೂ ಓದಿ: NIELIT Recruitment: ಎನ್‌ಐಇಎಲ್‌ಐಟಿಯಲ್ಲಿ 80 ಹುದ್ದೆ: ಎಸ್ಸೆಸ್ಸೆಲ್ಸಿ, ಐಟಿಐ ಪಾಸಾಗಿದ್ದರೆ ಸಾಕು
ಅರ್ಜಿ ಸಲ್ಲಿಕೆ ವಿಧಾನ
- ಚಿತ್ರದುರ್ಗ ಡಿಸಿಸಿಬಿ ನೇಮಕಾತಿ ಅಧಿಸೂಚನೆ 2023 ಅನ್ನು ವಿವರವಾಗಿ ಓದಿ ಮತ್ತು ಅರ್ಜಿ ಸಲ್ಲಿಕೆಗೆ ನೀವು ಅರ್ಹರು ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಸಂವಹನಕ್ಕೆ ಅಗತ್ಯವಾದ, ಸರಿಯಾದ ಫೋನ್ ನಂಬರ್, ಇ-ಮೇಲ್ ಐಡಿ ನಮೂದಿಸಿ. ಐಡಿ ಪ್ರೂಫ್, ವಯಸ್ಸಿನ ದಾಖಲಾತಿ, ಶೈಕ್ಷಣಿಕ ಅರ್ಹತೆಯ ದಾಖಲಾತಿ, ರೆಸ್ಯೂಮ್ ಇತ್ಯಾದಿಗಳನ್ನು ರೆಡಿ ಮಾಡಿಟ್ಟುಕೊಳ್ಳಿ.
- ಅರ್ಜಿ ಸಲ್ಲಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ
- ಅಗತ್ಯವಾದ ಎಲ್ಲ ಮಾಹಿತಿಗಳನ್ನು ತುಂಬಿ. ಡಾಕ್ಯುಮೆಂಟ್ನ ಸ್ಕ್ಯಾನ್ ಪ್ರತಿ, ನಿಮ್ಮ ಫೋಟೊ (ಅಗತ್ಯವಿದ್ದರೆ ಮಾತ್ರ) ಅಪ್ಲೋಡ್ ಮಾಡಿ
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ
- ಎಲ್ಲ ಮಾಹಿತಿ ಸರಿಯಾಗಿದೆ ಎನ್ನುವುದನ್ನು ಖಚಿತಪಡಿಸಿದ ಬಳಿಕ ಚಿತ್ರದುರ್ಗ ಡಿಸಿಸಿಬಿ ನೇಮಕಾತಿ 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು Submit ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ನಂಬರ್ ಅಥವಾ ರಿಕ್ವೆಸ್ಟ್ ನಂಬರ್ ತೆಗೆದಿಡಿ.
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ವಿಳಾಸ chitradurgadccbank.com ಸಂಪರ್ಕಿಸಿ ಅಥವಾ ಹೆಲ್ಪ್‌ಲೈನ್ 9019796412ಕ್ಕೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.