ನವ ದೆಹಲಿ: ಸೆಂಟ್ರಲ್ ಪೊಲ್ಯುಷನ್ ಕಂಟ್ರೋಲ್ ಬೋರ್ಡ್ ಖಾಲಿ ಇರುವ ವಿವಿಧ 74 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (CPCB Recruitment 2023). ಕನ್ಸಲ್ಟಂಟ್ ಎ, ಕನ್ಸಲ್ಟಂಟ್ ಬಿ ಮತ್ತು ಕನ್ಸಲ್ಟಂಟ್ ಸಿ ಹುದ್ದೆಗಳು ಖಾಲಿ ಇದ್ದು ಆಸಕ್ತರು ಆನ್‌ಲೈನ್ ಮೂಲಕ ಅಕ್ಟೋಬರ್ 10ರೊಳಗೆ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗ ಇದಾಗಿದ್ದು, ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ cpcb.nic.in ಸಂಪರ್ಕಿಸಿ.
ಹುದ್ದೆಗಳ ವಿವರ
ಕನ್ಸಲ್ಟಂಟ್ ಎ-19, ಕನ್ಸಲ್ಟಂಟ್ ಬಿ-52 ಮತ್ತು ಕನ್ಸಲ್ಟಂಟ್ ಸಿ-3 ಹುದ್ದೆಗಳಿವೆ. ಅಭ್ಯರ್ಥಿಗಳು ಎನ್ವಿಯೋರ್ನಮೆಂಟಲ್ ಎಂಜಿನಿಯರಿಂಗ್/ ಟೆಕ್ನಾಲಜಿ/ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಎನ್ವಿಯೋರ್ನಮೆಂಟಲ್ ಎಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಪದವಿ ಪಡೆದಿರಬೇಕು. ಜತೆಗೆ ಎಂ.ಎಸ್. ಆಫೀಸ್ ಬಗ್ಗೆ ಉತ್ತಮ ಜ್ಞಾನ ಹೊಂದಿರಬೇಕು. ಪರಿಸರ ಮಾಲಿನ್ಯ ನಿರ್ವಹಣೆ ಕ್ಷೇತ್ರದಲ್ಲಿ 3ರಿಂದ 15 ವರ್ಷಗಳ ಅನುಭವ ಹೊಂದಿರಬೇಕು. ಗರಿಷ್ಠ 65 ವರ್ಷದೊಳಗಿನ ಅಭ್ಯೃಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಆಯ್ಕೆಯಾದ ಅಭ್ಯರ್ಥಿಗಳಿಗೆ 60,000 to 1,00,000 ರೂ. ವೇತನ ದೊರೆಯಲಿದೆ. ದಿಲ್ಲಿಯಲ್ಲಿ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ
- ಆರಂಭದಲ್ಲಿ ವೆಬ್‌ಸೈಟ್ http://www.cpcbncaprecruitment.co.in ಮೇಲೆ ಕ್ಲಿಕ್ ಮಾಡಿ
- ಲಾಗಿನ್ ಆಗಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಿ
- ನೀವು ಅರ್ಜಿ ಸಲ್ಲಿಸಲು ಇಚ್ಛಿಸುವ ಹುದ್ದೆಯನ್ನು ಆಯ್ಕೆ ಮಾಡಿ
- ಅದರಲ್ಲಿ ಕೇಳಿರುವ ಮಾಹಿತಿಗಳನ್ನು ಒದಗಿಸಿ ಫಾರ್ಮ್ ತುಂಬಿ
- ಭವಿಷ್ಯದ ಅಗತ್ಯಗಳಿಗಾಗಿ ಅರ್ಜಿಯ ಪ್ರಿಂಟ್ ಔಟ್ ತೆಗೆದಿಡಿ.
ಇದನ್ನೂ ಓದಿ: Job News : ಅರಣ್ಯ ಇಲಾಖೆಯಲ್ಲಿ 310 ವೀಕ್ಷಕ ಹುದ್ದೆ ಭರ್ತಿ; ಅರ್ಜಿ ಸಲ್ಲಿಕೆ ಹೇಗೆ, ಕೊನೇ ದಿನಾಂಕ ಎಂದು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ. ಕಾಂಟ್ರಾಕ್ಟ್ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸದ್ಯಕ್ಕೆ ಒಂದು ವರ್ಷದ ಅವಧಿಗೆ ನೇಮಿಸಿಕೊಂಡು ಬಳಿಕ ಅಭ್ಯರ್ಥಿಯ ಕೆಲಸ ಆಧಾರದಲ್ಲಿ ಉದ್ಯೋಗ ಮುಂದುವರಿಸುವ ಸಾಧ್ಯತೆ ಇದೆ.