Site icon Vistara News

csir-ugc net 2022 | ಸಿಎಸ್‌ಐಆರ್-ಯುಜಿಸಿ ನೆಟ್‌ ಪರೀಕ್ಷೆಗೆ ಅರ್ಜಿ ಆಹ್ವಾನ

CSIR-UGC net 2022

ಬೆಂಗಳೂರು: ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್) ಮತ್ತು ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ) ಜಂಟಿಯಾಗಿ ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ಲೆಕ್ಚರ್‌ಶಿಪ್/ ಅಸಿಸ್ಟೆಂಟ್ ಪ್ರೊಫೆಸರ್‌ಶಿಪ್‌ಗಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (csir-ugc net 2022) ಅರ್ಜಿ ಆಹ್ವಾನಿಸಲಾಗಿದೆ.

ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಆಗಸ್ಟ್‌ ೧೦ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸಲ್ಲಿಕೆಯಾಗಿರು ಅರ್ಜಿಯಲ್ಲಿ ಬದಲಾವಣೆಗಳನ್ನು ಮಾಡಲು ಆಗಸ್ಟ್‌ ೧೨ರಿಂದ ೧೬ರ ವರೆಗೆ ಅವಕಾಶ ನೀಡಲಾಗುತ್ತದೆ. ಈ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಲಿದೆ. ಈ ಪರೀಕ್ಷೆ ಮೂಲಕ ಜೂನಿಯರ್ ರಿಸರ್ಚ್ ಫೆಲೋ (ಜೆಆರ್‌ಎಫ್‌) ನೀಡಲಾಗುತ್ತದೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯ ಬೋಧಿಸುವ ಉಪನ್ಯಾಸಕರಿಗೆ/ಸಹಾಯಕ ಪ್ರಾಧ್ಯಾಪಕರಿಗೆ ಅರ್ಹತೆ ನಿಗದಿಪಡಿಸಲಾಗುತ್ತದೆ.

ಫೆಲೋಶಿಪ್‌ಗೆ ಅರ್ಹತೆ ಪಡೆಯುವ ಅಭ್ಯರ್ಥಿಗಳು ಮಾಸಿಕ 31,000 ರೂ. ಸ್ಟೈಪೆಂಡ್ಪ ಪಡೆಯಬಹುದಾಗಿದೆ. ಅಭ್ಯರ್ಥಿಗಳು ಜೆಆರ್‌ಎಫ್‌ ಮತ್ತು ಲೆಕ್ಚರ್‌ಶಿಪ್/ಅಸಿಸ್ಟೆಂಟ್ ಪ್ರೊಫೆಸರ್‌ ಶಿಪ್ ಎರಡಕ್ಕೂ ಅರ್ಜಿ ಸಲ್ಲಿಸಬಹುದಾಗಿದ್ದು,
ಅರ್ಜಿಯಲ್ಲಿ ತಮ್ಮ ಆದ್ಯತೆಯನ್ನು ತಿಳಿಸಬೇಕಿರುತ್ತದೆ. ಲಿತಾಂಶ ಪ್ರಕಟಿಸುವಾಗಲೇ ಎರಡಕ್ಕೂ ಪ್ರತ್ಯೇಕ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಜೆಆರ್‌ಎಫ್‌ ಅರ್ಹತೆ ಪಡೆದವರು ಉನ್ನತ ವಿದ್ಯಾಭ್ಯಾಸ ಅಥವಾ ಸಂಶೋಧನೆಗಾಗಿ ದೇಶದ ವಿವಿಧ ವಿಶ್ವವಿದ್ಯಾಲಯ, ಸಂಶೋಧನಾ ಸಂಸ್ಥೆಗಳನ್ನು ಸೇರಬಹುದು.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅರ್ಹತೆಗಳೇನು?
ಎಂಎಸ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು (ಬಿಎಸ್-ಎಂಎಸ್/ ಎಸ್-4 ವರ್ಷ/ಬಿಇ/ಬಿಟೆಕ್/ಬಿ ಫಾರ್ಮಾ/ಎಂಬಿಬಿಎಸ್ಪ ದವಿ ಸಂಯೋಜಿತ) ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನಿಗದಿತ ವಿದ್ಯಾರ್ಹತೆಯಲ್ಲಿ
ಅಭ್ಯರ್ಥಿಗಳು ಕನಿಷ್ಠ ಶೇಕಡಾ 55 ಅಂಕಗಳನ್ನು (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಾಗಿದ್ದಲ್ಲಿ ಶೇಕಡಾ 50) ಪಡೆದು ತೇರ್ಗಡೆಯಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಈಗಾಗಲೇ ಎಂಎಸ್ಸಿಗೆ
ಸೇರ್ಪಡೆಗೊಂಡವರೂ ಅರ್ಜಿ ಸಲ್ಲಿಸಬಹುದು.

ವಯೋಮಿತಿ ಎಷ್ಟಿರುತ್ತದೆ?
ಜೂನಿಯರ್ ರಿಸರ್ಚ್ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 28 ವರ್ಷ (20೨೧ರ ಜುಲೈ 1ಕ್ಕೆ ಅನ್ವಯವಾಗುವಂತೆ. ಕಳೆದ ವರ್ಷ ಈ ಪರೀಕ್ಷೆ ನಡೆಸದೇ ಇರುವುದರಿಂದ ವಯೋಮಿತಿಯಲ್ಲಿ ಈ ವರ್ಷ ಮಾತ್ರ ಈ ಸಡಿಲಿಕೆ ನೀಡಲಾಗಿದೆ). ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ ವಯೋಮಿತಿ 33 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ ವಯೋಮಿತಿ 31 ವರ್ಷ.
ಲೆಕ್ಚರ್‌ಶಿಪ್/ ಅಸಿಸ್ಟೆಂಟ್‌ ಪ್ರೊಫೆಸರ್‌ ಶಿಪ್‌ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿರುವುದಿಲ್ಲ.

ಅರ್ಜಿ ಶುಲ್ಕ ಎಷ್ಟು ಪಾವತಿಸಬೇಕು?
ಸಾಮಾನ್ಯ ವರ್ಗದ ಮತ್ತು ಇಡಬ್ಲ್ಯುಎಸ್ ಅಭ್ಯರ್ಥಿಗಳು 1000 ರೂ., ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು 500
ರೂ. ಮತ್ತು ಎಸ್‌ಸಿ/ಎಸ್‌ಟಿ ಹಾಗೂ ಅಂಗವಿಕಲ ಅಭ್ಯರ್ಥಿಗಳು 250 ರೂ. ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

ಪರೀಕ್ಷೆ ಹೇಗಿರುತ್ತದೆ?
ಈ ಅರ್ಹತಾ ಪರೀಕ್ಷೆಯೂ ಕಂಪ್ಯೂಟರ್ ಆಧರಿತ ಪರೀಕ್ಷೆ (ಸಿಬಿಟಿ) ಯಾಗಿರುತ್ತದೆ. ಅಬ್ಜೆಕ್ಟೀವ್‌ ಮಾದರಿಯಲ್ಲಿ ನಡೆಯುವ ಈ ಪರೀಕ್ಷೆಯ ಅವಧಿಯು ೩ ಗಂಟೆಗಳಾಗಿರತ್ತದೆ. ಮೂರು ವಿಭಾಗಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಮೊದಲ ವಿಭಾಗದಲ್ಲಿ ೨೦, ೨ನೇ ವಿಭಾಗದಲ್ಲಿ ೪೦ ಮತ್ತು ಮೂರನೇ ವಿಭಾಗದಲ್ಲಿ ೬೦ ಹೀಗೆ ಒಟ್ಟು ೧೨೦ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮೊದಲೆರಡು ವಿಭಾಗದ ಪ್ರತಿ ಪ್ರಶ್ನೆಗೆ ೨ ಅಂಗ, ಮೂರನೇ ವಿಭಾಗದ ಪರೀಕ್ಷೆಯ ಪ್ರತಿ ಪ್ರಶ್ನೆಗೆ ೪ ಅಂಗ ಒಟ್ಟಾರೆ ೨೦೦ ಅಂಕ ನಿಗದಿಪಡಿಸಲಾಗಿರುತ್ತದೆ. ಋಣಾತ್ಮಕ ಮೌಲ್ಯಮಾಪನ (ನೆಗೆಟಿವ್‌ ಮಾರ್ಕ್ಸ್‌) ಇರುತ್ತದೆ. ಪ್ರತಿ ತಪ್ಪು ಉತ್ತರನಕ್ಕೆ ಆ ಪ್ರಶ್ನೆಗೆ ನಿಗದಿಪಡಿಸಲಾದ ಅಂಕದಲ್ಲಿ ಶೇ.೨೫ ಅಂಕ ಕಳೆಯಲಾಗುತ್ತದೆ. ಪ್ರತಿ ಪ್ರಶ್ನೆಗೂ ಬಹು ಉತ್ತರಗಳನ್ನು ನೀಡಲಾಗಿದ್ದು, ಅಭ್ಯರ್ಥಿಗಳು ಸರಿಯಾದ ಉತ್ತರವನ್ನು ಗುರುತಿಸಬೇಕಿರುತ್ತದೆ.
ಕೆಮಿಕಲ್‌ ಸೈನ್ಸ್‌, ಅರ್ಥ್‌, ಅಟ್ಮಾಸ್ಪೆರಿಕ್‌, ಒಷಿನ್‌ ಮತ್ತು ಪ್ಲಾನೆಟರಿ ಸೈನ್ಸ್‌, ಲೈಫ್‌ ಸೈನ್ಸ್‌, ಮ್ಯಾಥ್‌ಮೆಟಿಕಲ್‌ ಸೈನ್ಸಸ್‌, ಫಿಜಿಕಲ್‌ ಸೈನ್ಸಸ್‌ ವಿಷಯಗಳಿಗೆ ಸಂಬಂಧಿಸಿದಂತೆ ಈ ಪರೀಕ್ಷೆ ನಡೆಯಲಿದೆ.

ಈ ಪರೀಕ್ಷೆಯ ಮಾಹಿತಿಯನ್ನು ಇಲ್ಲಿಂದಲೂ ಪಡೆಯಬಹುದು: https://csirnet.nta.nic.in

ಪರೀಕ್ಷೆ ಎಂದು ನಡೆಯಲಿದೆ?
ಇದೇ ಮೊದಲ ಬಾರಿಗೆ ಎನ್‌ಟಿಎ ಪರೀಕ್ಷೆ ಎಂದು ನಡೆಯಲಿದೆ ಎಂಬುದನ್ನು ಇನ್ನೂ ಪ್ರಕಟಿಸಿಲ್ಲ. ಸದ್ಯವೇ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ. ರಾಜ್ಯದ ಬೆಳಗಾವಿ, ಬಳ್ಳಾರಿ, ಬೆಂಗಳೂರು, ಬೀದರ್, ದಾವಣಗೆರೆ, ಕಲಬುರಗಿ, ಹಾಸನ, ಹುಬ್ಬಳ್ಳಿ/ಧಾರವಾಡ, ಕಲಬುರಗಿ, ಹಾಸನ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ/ಮಣಿಪಾಲ್‌ನಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗುತ್ತದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ತಮ್ಮ ಆಯ್ಕೆಯ ಪರೀಕ್ಷಾ ಕೇಂದ್ರವನ್ನು ಗುರುತಿಸಬೇಕಿರುತ್ತದೆ.

ಈ ಪರೀಕ್ಷೆಯ ಕುರಿತ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: https://csirnet.nta.nic.in/information-bulletin/

ಇದನ್ನೂ ಓದಿ | Job News | ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಸಿಬ್ಬಂದಿ ನೇಮಕಾತಿ ಆಯೋಗ

Exit mobile version