Site icon Vistara News

CSIR-UGC net 2022 | ಸಿಎಸ್‌ಐಆರ್-ಯುಜಿಸಿ ನೆಟ್‌ ಪರೀಕ್ಷೆಗೆ ಪ್ರವೇಶ ಪತ್ರ ಪ್ರಕಟ

CSIR-UGC net 2022

ಬೆಂಗಳೂರು: ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್) ಮತ್ತು ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ) ಜಂಟಿಯಾಗಿ ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ಲೆಕ್ಚರ್‌ಶಿಪ್/ ಅಸಿಸ್ಟೆಂಟ್ ಪ್ರೊಫೆಸರ್‌ಶಿಪ್‌ಗಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (CSIR-UGC net 2022) ಪ್ರವೇಶ ಪತ್ರ ಪ್ರಕಟವಾಗಿದೆ.

ಈ ಪರೀಕ್ಷೆಯನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಪ್ರವೇಶ ಪತ್ರವನ್ನು ವೆಬ್‌ನಲ್ಲಿ ಒದಗಿಸಿದ್ದು, ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ, ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಲಿಂಕ್‌ | https://csirnet.nta.nic.in

ಸೆಪ್ಟೆಂಬ್‌ 16 ರಿಂದ 19 ರವರೆಗೆ ಈ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯ ವೇಳಾಪಟ್ಟಿ ಇಂತಿದೆ;

ಪ್ರವೇಶ ಪತ್ರವನ್ನು ವೆಬ್‌ಸೈಟ್‌ನಿಂದಲೇ ಅಭ್ಯರ್ಥಿಗಳು ಡೌನ್‌ಲೋಡ್‌ ಮಾಡಿಕೊಳ್ಳಬೇಕಾಗಿದ್ದು, ಅಂಚೆಯ ಮೂಲಕ ಕಳುಹಿಸಲಾಗುವುದಿಲ್ಲ ಎಂದು ಎನ್‌ಟಿಎ ತಿಳಿಸಿದೆ. ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳುವಾಗ ಸಮಸ್ಯೆ ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ 011-40759000 ಸಂಪರ್ಕಿಸಬಹುದಾಗಿದೆ.

ಈ ಪರೀಕ್ಷೆ ಮೂಲಕ ಜೂನಿಯರ್ ರಿಸರ್ಚ್ ಫೆಲೋ (ಜೆಆರ್‌ಎಫ್‌) ನೀಡಲಾಗುತ್ತದೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯ ಬೋಧಿಸುವ ಉಪನ್ಯಾಸಕರಿಗೆ/ಸಹಾಯಕ ಪ್ರಾಧ್ಯಾಪಕರಿಗೆ ಅರ್ಹತೆ ನಿಗದಿಪಡಿಸಲಾಗುತ್ತದೆ.

ಫೆಲೋಶಿಪ್‌ಗೆ ಅರ್ಹತೆ ಪಡೆಯುವ ಅಭ್ಯರ್ಥಿಗಳು ಮಾಸಿಕ 31,000 ರೂ. ಸ್ಟೈಪೆಂಡ್ಪ ಪಡೆಯಬಹುದಾಗಿದೆ. ಅಭ್ಯರ್ಥಿಗಳು ಜೆಆರ್‌ಎಫ್‌ ಮತ್ತು ಲೆಕ್ಚರ್‌ಶಿಪ್/ಅಸಿಸ್ಟೆಂಟ್ ಪ್ರೊಫೆಸರ್‌ ಶಿಪ್ ಎರಡಕ್ಕೂ ಅರ್ಜಿ ಸಲ್ಲಿಸಬಹುದಾಗಿದ್ದು,
ಅರ್ಜಿಯಲ್ಲಿ ತಮ್ಮ ಆದ್ಯತೆಯನ್ನು ತಿಳಿಸಬೇಕಿರುತ್ತದೆ. ಲಿತಾಂಶ ಪ್ರಕಟಿಸುವಾಗಲೇ ಎರಡಕ್ಕೂ ಪ್ರತ್ಯೇಕ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಜೆಆರ್‌ಎಫ್‌ ಅರ್ಹತೆ ಪಡೆದವರು ಉನ್ನತ ವಿದ್ಯಾಭ್ಯಾಸ ಅಥವಾ ಸಂಶೋಧನೆಗಾಗಿ ದೇಶದ ವಿವಿಧ ವಿಶ್ವವಿದ್ಯಾಲಯ, ಸಂಶೋಧನಾ ಸಂಸ್ಥೆಗಳನ್ನು ಸೇರಬಹುದು.

ಪರೀಕ್ಷೆ ಹೇಗಿರುತ್ತದೆ?
ಈ ಅರ್ಹತಾ ಪರೀಕ್ಷೆಯೂ ಕಂಪ್ಯೂಟರ್ ಆಧರಿತ ಪರೀಕ್ಷೆ (ಸಿಬಿಟಿ) ಯಾಗಿರುತ್ತದೆ. ಅಬ್ಜೆಕ್ಟೀವ್‌ ಮಾದರಿಯಲ್ಲಿ ನಡೆಯುವ ಈ ಪರೀಕ್ಷೆಯ ಅವಧಿಯು ೩ ಗಂಟೆಗಳಾಗಿರತ್ತದೆ. ಮೂರು ವಿಭಾಗಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಮೊದಲ ವಿಭಾಗದಲ್ಲಿ ೨೦, ೨ನೇ ವಿಭಾಗದಲ್ಲಿ ೪೦ ಮತ್ತು ಮೂರನೇ ವಿಭಾಗದಲ್ಲಿ ೬೦ ಹೀಗೆ ಒಟ್ಟು ೧೨೦ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮೊದಲೆರಡು ವಿಭಾಗದ ಪ್ರತಿ ಪ್ರಶ್ನೆಗೆ ೨ ಅಂಗ, ಮೂರನೇ ವಿಭಾಗದ ಪರೀಕ್ಷೆಯ ಪ್ರತಿ ಪ್ರಶ್ನೆಗೆ ೪ ಅಂಗ ಒಟ್ಟಾರೆ ೨೦೦ ಅಂಕ ನಿಗದಿಪಡಿಸಲಾಗಿರುತ್ತದೆ. ಋಣಾತ್ಮಕ ಮೌಲ್ಯಮಾಪನ (ನೆಗೆಟಿವ್‌ ಮಾರ್ಕ್ಸ್‌) ಇರುತ್ತದೆ. ಪ್ರತಿ ತಪ್ಪು ಉತ್ತರನಕ್ಕೆ ಆ ಪ್ರಶ್ನೆಗೆ ನಿಗದಿಪಡಿಸಲಾದ ಅಂಕದಲ್ಲಿ ಶೇ.೨೫ ಅಂಕ ಕಳೆಯಲಾಗುತ್ತದೆ. ಪ್ರತಿ ಪ್ರಶ್ನೆಗೂ ಬಹು ಉತ್ತರಗಳನ್ನು ನೀಡಲಾಗಿದ್ದು, ಅಭ್ಯರ್ಥಿಗಳು ಸರಿಯಾದ ಉತ್ತರವನ್ನು ಗುರುತಿಸಬೇಕಿರುತ್ತದೆ.
ಕೆಮಿಕಲ್‌ ಸೈನ್ಸ್‌, ಅರ್ಥ್‌, ಅಟ್ಮಾಸ್ಪೆರಿಕ್‌, ಒಷಿನ್‌ ಮತ್ತು ಪ್ಲಾನೆಟರಿ ಸೈನ್ಸ್‌, ಲೈಫ್‌ ಸೈನ್ಸ್‌, ಮ್ಯಾಥ್‌ಮೆಟಿಕಲ್‌ ಸೈನ್ಸಸ್‌, ಫಿಜಿಕಲ್‌ ಸೈನ್ಸಸ್‌ ವಿಷಯಗಳಿಗೆ ಸಂಬಂಧಿಸಿದಂತೆ ಈ ಪರೀಕ್ಷೆ ನಡೆಯಲಿದೆ.

ಈ ಪರೀಕ್ಷೆಯ ಮಾಹಿತಿಯನ್ನು ಇಲ್ಲಿಂದಲೂ ಪಡೆಯಬಹುದು: https://csirnet.nta.nic.in

ಪರೀಕ್ಷೆ ರಾಜ್ಯದಲ್ಲಿ ಎಲ್ಲಿ ನಡೆಯಲಿದೆ?
ರಾಜ್ಯದ ಬೆಳಗಾವಿ, ಬಳ್ಳಾರಿ, ಬೆಂಗಳೂರು, ಬೀದರ್, ದಾವಣಗೆರೆ, ಕಲಬುರಗಿ, ಹಾಸನ, ಹುಬ್ಬಳ್ಳಿ/ಧಾರವಾಡ, ಕಲಬುರಗಿ, ಹಾಸನ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ/ಮಣಿಪಾಲ್‌ನಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: https://nta.ac.in

ಇದನ್ನೂ ಓದಿ | Kar TET 2022 | ಶಿಕ್ಷಕರ ಅರ್ಹತಾ ಪರೀಕ್ಷೆಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Exit mobile version