ಬೆಂಗಳೂರು: ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (Defence Research and Development Organisation-DRDO RAC Recruitment 2023) ರಿಕ್ರೂಟ್‌ಮೆಂಟ್ ಆ್ಯಂಡ್ ಅಸೆಸ್‌ಮೆಂಟ್ ಸೆಂಟರ್ (Recruitment and Assessment Centre-RAC) ಮೂಲಕ 51 ಸೈಂಟಿಸ್ಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ನವೆಂಬರ್ 17ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎಂಜಿನಿಯರಿಂಗ್ ಪದವಿ ಮತ್ತು ಎಂ.ಎಸ್‌ಸಿ ಓದಿದವರು ಅರ್ಜಿ ಸಲ್ಲಿಸಬಹುದು. ಭಾರತದ ಎಲ್ಲಿ ಬೇಕಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
ಸೈಂಟಿಸ್ಟ್ ʼಎಫ್ʼ-2, ಸೈಂಟಿಸ್ಟ್ ʼಇʼ-14, ಸೈಂಟಿಸ್ಟ್ ʼಡಿʼ-8, ಸೈಂಟಿಸ್ಟ್ ʼಸಿʼ-27 ಹುದ್ದೆಗಳಿವೆ. ಸೈಂಟಿಸ್ಟ್ ʼಎಫ್ʼ ಮತ್ತು ʼಇʼ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಂಜಿನಿಯರಿಂಗ್ ಪದವಿ ಮುಗಿಸಿರಬೇಕು. ಇನ್ನು ಸೈಂಟಿಸ್ಟ್ ʼಡಿʼ ಮತು ʼಸಿʼ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಂಜಿನಿಯರಿಂಗ್ ಪದವಿ ಅಥವಾ ಎಂ.ಎಸ್‌ಸಿ ಓದಿರಬೇಕು.
ವಯೋಮಿತಿ ಮತ್ತು ಅರ್ಜಿ ಶುಲ್ಕ
ಸೈಂಟಿಸ್ಟ್ ʼಎಫ್ʼ, ʼಇʼ ಮತ್ತು ʼಡಿʼ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 50 ವರ್ಷ ಹಾಗೂ ಸೈಂಟಿಸ್ಟ್ ʼಸಿʼ ಹುದ್ದೆಗಳಿಗೆ 40 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬೇಕು. ವಿಶೇಷ ಚೇತನರು ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ. ಎಸ್‌ಸಿ/ ಎಸ್‌ಟಿ/ ವಿಶೇಷ ಚೇತನರು ಮತ್ತು ಮಹಿಳೆಯರಿಗೆ ಅರ್ಜಿ ಶುಲ್ಕವಿಲ್ಲ. ಜನರಲ್/ ಒಬಿಸಿ & ಇಡಬ್ಲ್ಯುಎಸ್ ಪುರುಷ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಬೇಕು. ಪಾವತಿ ವಿಧಾನ: ಆನ್‌ಲೈನ್.
ಆಯ್ಕೆ ವಿಧಾನ ಮತ್ತು ವೇತನ
ಸ್ಕ್ರೀನಿಂಗ್, ಶಾರ್ಟ್ ಲಿಸ್ಟ್ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಸೈಂಟಿಸ್ಟ್ ʼಎಫ್ʼ-1,31,100 ರೂ., ಸೈಂಟಿಸ್ಟ್ ʼಇʼ-1,23,100 ರೂ., ಸೈಂಟಿಸ್ಟ್ ʼಡಿʼ-78,800 ರೂ., ಸೈಂಟಿಸ್ಟ್ ʼಸಿʼ-67,700 ರೂ. ತಿಂಗಳ ವೇತನ ದೊರೆಯಲಿದೆ.
ಅರ್ಜಿ ಸಲ್ಲಿಕೆ ವಿಧಾನ
- ಅರ್ಜಿ ಸಲ್ಲಿಸುವ ಮುನ್ನ ಕೇಳಿರುವ ಎಲ್ಲ ಅರ್ಹತೆ ಇರುವುದನ್ನು ಖಚಿತಪಡಿಸಿಕೊಳ್ಳಿ
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಸಂವಹನಕ್ಕೆ ಅಗತ್ಯವಾದ, ಸರಿಯಾದ ಫೋನ್ ನಂಬರ್, ಇ-ಮೇಲ್ ಐಡಿ ನಮೂದಿಸಿ. ಐಡಿ ಪ್ರೂಫ್, ವಯಸ್ಸಿನ ದಾಖಲಾತಿ, ಶೈಕ್ಷಣಿಕ ಅರ್ಹತೆಯ ದಾಖಲಾತಿ, ರೆಸ್ಯೂಮ್ ಇತ್ಯಾದಿ ರೆಡಿ ಮಾಡಿಟ್ಟುಕೊಳ್ಳಿ.
- DRDO RAC Scientist ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ಅಗತ್ಯವಾದ ಎಲ್ಲ ಮಾಹಿತಿಗಳನ್ನು ತುಂಬಿ. ಡಾಕ್ಯುಮೆಂಟ್ನ ಸ್ಕ್ಯಾನ್ ಪ್ರತಿ, ನಿಮ್ಮ ಫೋಟೊ (ಅಗತ್ಯವಿದ್ದರೆ ಮಾತ್ರ) ಅಪ್ಲೋಡ್ ಮಾಡಿ
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ
- ಎಲ್ಲ ಮಾಹಿತಿ ಸರಿಯಾಗಿದೆ ಎನ್ನುವುದನ್ನು ಖಚಿತಪಡಿಸಿದ ಬಳಿಕ DRDO RAC Recruitment 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು Submit ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ನಂಬರ್ ಅಥವಾ ರಿಕ್ವೆಸ್ಟ್ ನಂಬರ್ ತೆಗೆದಿಡಲು ಮರೆಯಬೇಡಿ.
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಬಿಳಾಸ rac.gov.in.ಗೆ ಭೇಟಿ ನೀಡಿ.
ಇದನ್ನೂ ಓದಿ: NIMHANS Recruitment 2023: ಖಾಲಿ ಇರುವ 161 ನರ್ಸಿಂಗ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿ