Site icon Vistara News

Engineers Day | ನೀವು ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ವಿಶ್ವೇಶ್ವರಯ್ಯರ ಹತ್ತು ಹೇಳಿಕೆಗಳು ಇವು

Engineers Day

ನೂರಾ ಎರಡು ವರ್ಷಗಳ ತುಂಬು ಬದುಕನ್ನು ಕರ್ಮಯೋಗಿಯಂತೆ ಬಾಳಿದ, “ಭಾರತರತ್ನʼʼ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮ ದಿನ ಇಂದು. ದೇಶದ ಇತಿಹಾಸದಲ್ಲಿಯೇ ವಿಶ್ವೇಶ್ವರಯ್ಯ ಅವರಿಗೆ ಹೋಲಿಸುವ ಮತ್ತೊಬ್ಬ ವ್ಯಕ್ತಿ ಸಿಗಲಾರರು. ಹೀಗಾಗಿಯೇ ಅವರ ಜನ್ಮ ದಿನಾಚರಣೆಯನ್ನು “ಎಂಜಿನಿಯರ್‌ ದಿನʼʼ (Engineers Day) ವಾಗಿ ಆಚರಿಸಲಾಗುತ್ತಿದೆ. ಸರ್ ಎಂ. ವಿ ಅವರ ಬದುಕು ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕ. ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅವರ ಹತ್ತು ಹೇಳಿಕೆಗಳು ಇಲ್ಲಿವೆ.

ದುಡಿದು ಕೆಟ್ಟವರಿಲ್ಲ, ದುಡಿದು ಸತ್ತವರೂ ಇಲ್ಲ, ದುಡಿಯದೇ ನಾಶವಾಗಿ ಹೋದವರು ಇದ್ದಾರೆ!
ಕುತೂ ಕುತೂ ತುಕ್ಕು ಹಿಡಿದು ಸಾಯವುದಕ್ಕಿಂತ, ಕೆಲಸ ಮಾಡಿ, ಮಾಡಿ ಸವೆದು ಸಾಯುವುದು ಮೇಲು.

ನಿಮ್ಮ ಜೀವನವನ್ನು ಬೇರೆಯವರು ನಿರ್ಧರಿಸಲಾರರು. ನಿಮ್ಮ ಜೀವನದಲ್ಲಿನ ಯಶಸ್ಸು ಮತ್ತು ಖುಷಿಯನ್ನು ನೀವೇ ಕಂಡುಕೊಳ್ಳಬೇಕು. ನಿಮ್ಮ ಬಗ್ಗೆ, ನಿಮ್ಮ ಜೀವನದ ಬಗ್ಗೆ ನೀವೇ ಯೋಚಿಸಿ, ಹೇಗೆ ಬದುಕಬೇಕೆಂದು ನೀವೇ ನಿರ್ಧರಿಸಿ.

ನಿಜವಾದ ಸೇವೆ ಎಂದರೆ ನೀವು ಮಾಡುವ ಕೆಲಸವನ್ನು ಬೇರೆಯವರಿಂದ ಅಳೆಯಲು, ಹಣದಿಂದ ಕೊಳ್ಳಲು ಸಾಧ್ಯವಾಗದೇ ಇರುವಂತೆ ಕೆಲಸ ಮಾಡುವುದು.

ಹೆಚ್ಚಿನ ಜ್ಞಾನ ಅಥವಾ ಕೌಶಲ್ಯ, ಸಾಮರ್ಥ್ಯ ಅಥವಾ ಮಹತ್ವಾಕಾಂಕ್ಷೆಯೊಂದಿಗೆ ಮಾಡುವ ಎಲ್ಲಾ ಕೆಲಸವೂ ಸಾಮಾನ್ಯವಾಗಿ ಹೆಚ್ಚಿನ ಪ್ರತಿಫಲವನ್ನು ನೀಡುತ್ತವೆ.

ಅದೃಷ್ಟ ಎನ್ನುವುದು ದೇವರ ಕೈಯಲ್ಲಿ ನಿಷ್ಕ್ರಿಯವಾಗಿರುವ ಸಾಧನವಲ್ಲ. ನಮ್ಮ ಡೆಸ್ಟಿನಿ, ನಮ್ಮ ವಿಧಿ ಮನುಷ್ಯನ ಕೈಯಲ್ಲಿರುವ ಸಾಧನ.

ನೆನಪಿಡಿ, ನಿಮ್ಮ ಕೆಲಸ ಕೇವಲ ಒಂದು ರೈಲ್ವೆ ಕ್ರಾಸಿಂಗ್‌ ಗುಡಿಸುವುದಾಗಿರಬಹುದು. ಆದರೆ ಅದನ್ನು ಎಷ್ಟು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದರೆ, ಇಡೀ ವಿಶ್ವದಲ್ಲಿಯೇ ನಿಮ್ಮದರಷ್ಟು ಸ್ವಚ್ಛವಾಗಿ ಇನ್ನಾವುದೂ ಇರಬಾರದು. ಕೆಲಸ ಮಾಡಿದರೆ ಹಾಗೆ ಮಾಡಬೇಕು.

ದುಡಿ, ಮೈ ಮುರಿದು ದುಡಿ, ಹೆಚ್ಚು ಹೆಚ್ಚಾಗಿ ದುಡಿ. ಆ ನಿನ್ನ ದುಡಿಮೆಯಲ್ಲಿ ಕ್ರಮವಿರಲಿ, ನಿಯಮವಿರಲಿ, ಗುರಿ ಇರಲಿ. ವಿವೇಚನೆ ಇರಲಿ, ದಕ್ಷತೆ ಇರಲಿ.

ಹಣವಿದ್ದರೆ ಸಾಲದು, ಒಳ್ಳೆಯ ವ್ಯಕ್ತಿತ್ವ ಇದ್ದರಷ್ಟೇ ಸಮಾಜ ಗೌರವಿಸುತ್ತದೆ.

ಒಂದು ದೇಶದಲ್ಲಿ ಖನಿಜ ಸಂಪನ್ಮೂಲ ಸಾಕಷ್ಟಿರಬಹುದು, ಅರಣ್ಯಗಳು, ನೌಕಾನೆಲೆಗಳು ಇರಬಹುದು, ವಿದ್ಯುತ್ ಉತ್ಪಾದನೆಗೆ ಸಾಧ್ಯವಾಗುವ ನದಿಗಳು ಇರಬಹುದು, ಆದರೆ ಮನುಷ್ಯನು ತನ್ನ ಮೇಧಸ್ಸನ್ನು ಉಪಯೋಗಿಸಿ, ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ದೇಶ ಆಗಷ್ಟೇ ಇನ್ನಷ್ಟು ಸಂಪದ್ಭರಿತವಾಗುತ್ತದೆ.

ಶ್ರಮ ಪಡೆದೆ, ಏನೂ ಸಾಧನೆ ಮಾಡದೆ ಯಶಸ್ಸನ್ನು ಬಯಸುವುದು ಮರುಭೂಮಿಯಲ್ಲಿ ಕುಡಿಯುವ ನೀರಿಗಾಗಿ ಹುಡುಕಾಡಿದಂತೆ.

ಇದನ್ನೂ ಓದಿ | Engineer’s Day | ಇವು ಸ್ವತಂತ್ರ ಭಾರತದ ಅದ್ಭುತ ನಿರ್ಮಾಣಗಳು!

Exit mobile version