Site icon Vistara News

Foxconn’s Hiring: ವಿವಾಹಿತ ಮಹಿಳೆಯರಿಗೆ ಫಾಕ್ಸ್‌ಕಾನ್‌ ಕಂಪನಿಯಲ್ಲಿ ಕೆಲಸ ಕೊಡುವುದಿಲ್ಲ! ಭುಗಿಲೆದ್ದ ವಿವಾದ

Foxconn's Hiring

ಆಪಲ್ (apple) ಸಾಧನಗಳ ಪ್ರಮುಖ ತಯಾರಕರಾದ ಫಾಕ್ಸ್‌ಕಾನ್ (Foxconn’s Hiring) ಭಾರತದಲ್ಲಿನ (india) ತನ್ನ ಪ್ರಮುಖ ಸ್ಮಾರ್ಟ್‌ಫೋನ್ ಸ್ಥಾವರದಲ್ಲಿ (smartphone plant) ವಿವಾಹಿತ ಮಹಿಳೆಯರನ್ನು ಹೊರಗಿಡುತ್ತಿದೆ! ಇದು ಎರಡೂ ಕಂಪನಿಗಳ ನೀತಿ ಸಂಹಿತೆಗಳಿಗೆ ವಿರುದ್ಧವಾಗಿದ್ದು, ವೈವಾಹಿಕ ಸ್ಥಿತಿಯನ್ನು (marital status) ಆಧರಿಸಿ ತಾರತಮ್ಯವನ್ನು ತೋರುತ್ತಿರುವುದು ಸ್ಪಷ್ಟವಾಗಿದೆ.

ಜೂನ್ 25ರಂದು ಮಾಧ್ಯಮವೊಂದರಲ್ಲಿ ಪ್ರಕಟವಾದ ತನಿಖಾ ವರದಿಯು ಫಾಕ್ಸ್‌ಕಾನ್ ವಿವಾಹಿತ ಮಹಿಳೆಯರಿಗೆ ಅವರ ಉದ್ಯೋಗ ಅರ್ಜಿಗಳನ್ನು ತಿರಸ್ಕರಿಸುವ ಮೂಲಕ ತಾರತಮ್ಯವನ್ನು ತೋರಿಸಿದೆ ಎಂದು ಬಹಿರಂಗಪಡಿಸಿತು. ಅವಿವಾಹಿತರಿಗೆ ಹೋಲಿಸಿದರೆ ವಿವಾಹಿತ ಮಹಿಳೆಯರಿಗೆ ಹೆಚ್ಚಿನ ಕುಟುಂಬ ಜವಾಬ್ದಾರಿಗಳು ಕಾರಣ ಎಂಬ ಕಾರಣಕ್ಕಾಗಿ ಅವರಿಗೆ ಕೆಲಸ ನಿರಾಕರಿಸಲಾಗುತ್ತಿದೆ.

ಮದುವೆಯ ನಂತರದ ಸಮಸ್ಯೆಗಳು

ತಮಿಳುನಾಡಿನ ಚೆನ್ನೈ ಸಮೀಪದ ಶ್ರೀಪೆರಂಬದೂರಿನಲ್ಲಿರುವ ಪ್ರಮುಖ ಐಫೋನ್ ಅಸೆಂಬ್ಲಿ ಘಟಕದಲ್ಲಿ ಸ್ಮಾರ್ಟ್‌ಫೋನ್ ತಯಾರಕರು ವಿವಾಹಿತ ಮಹಿಳೆಯರನ್ನು ಉದ್ಯೋಗಾವಕಾಶಗಳಿಂದ ವ್ಯವಸ್ಥಿತವಾಗಿ ಹೊರಗಿಟ್ಟಿದ್ದಾರೆ. ಪ್ರಪಂಚದ ಅತಿ ದೊಡ್ಡ ಕಾಂಟ್ರ್ಯಾಕ್ಟ್ ಎಲೆಕ್ಟ್ರಾನಿಕ್ಸ್ ತಯಾರಕರು ವಿವಾಹಿತ ಮಹಿಳೆಯರಿಗೆ “ಮದುವೆ ನಂತರದ ಹೆಚ್ಚಿನ ಸಮಸ್ಯೆಗಳಿರುತ್ತವೆ” ಎಂದು ಪ್ರತಿಪಾದಿಸುವ ಮೂಲಕ ಇದನ್ನು ಸಮರ್ಥಿಸಿದ್ದಾರೆ.
ಭಾರತದಾದ್ಯಂತ ಸುಮಾರು 12 ಫಾಕ್ಸ್‌ಕಾನ್ ನೇಮಕಾತಿ ಏಜೆನ್ಸಿಗಳ ಹಲವಾರು ಮಾಜಿ ಮತ್ತು ಪ್ರಸ್ತುತ ಉದ್ಯೋಗಿಗಳು ಇದನ್ನು ದೃಢಪಡಿಸಿದ್ದಾರೆ.

ತಾರತಮ್ಯಕ್ಕೆ ಕಾರಣಗಳೇನು?

ಏಜೆಂಟ್‌ಗಳು ಮತ್ತು ಫಾಕ್ಸ್‌ಕಾನ್ ಹೆಚ್ ಆರ್ ಅಧಿಕಾರಿಗಳು ಈ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದೆ. ವಿವಾಹಿತ ಮಹಿಳೆಯರಿಗೆ ಗರ್ಭಾವಸ್ಥೆ ಮತ್ತು ಕುಟುಂಬದ ಜವಾಬ್ದಾರಿ ಹೆಚ್ಚಿರುವುದರಿಂದ ಅವರು ಹೆಚ್ಚಿನ ಕಾರ್ಯಕ್ಷಮತೆಯಿಂದ ಕೆಲಸ ಮಾಡುವುದಿಲ್ಲ. ಅದೂ ಅಲ್ಲದೆ ವಿವಾಹಿತ ಹಿಂದೂ ಮಹಿಳೆಯರು ಮೈತುಂಬ ಆಭರಣ ಧರಿಸಿ ಬರುತ್ತಿರುವ ಕಾರಣ ನಮ್ಮ ಉತ್ಪಾದನೆಗೆ ಅಡ್ಡಿಯಾಗುತ್ತದೆ ಎಂಬ ವಿಚಿತ್ರ ಪ್ರತಿಪಾದನೆ ಕೇಳಿ ಬರುತ್ತಿದೆ.

ತೈವಾನ್ ಪ್ರಧಾನ ಕಚೇರಿಯ ತಯಾರಕರು ಕಾರ್ಮಿಕ ಕೊರತೆಯನ್ನು ಎದುರಿಸುತ್ತಿರುವಾಗ ಹೆಚ್ಚಿನ ಉತ್ಪಾದನಾ ಅವಧಿಯಲ್ಲಿ ವಿವಾಹಿತ ಮಹಿಳೆಯರನ್ನು ನೇಮಿಸಿಕೊಳ್ಳದಿರುವ ತನ್ನ ನೀತಿಯನ್ನು ಸಡಿಲಿಸುತ್ತಿದ್ದಾರೆ ಎಂದು ಕಂಪೆನಿಯ ಹೆಚ್ ಆರ್ ಒಬ್ಬರು ಹೇಳಿದ್ದಾರೆ. ಕೆಲವು ಸಂದರ್ಭಗಳಲ್ಲಿ, ನೇಮಕಾತಿ ಏಜೆನ್ಸಿಗಳು ಮಹಿಳಾ ಅಭ್ಯರ್ಥಿಗಳಿಗೆ ತಮ್ಮ ವೈವಾಹಿಕ ಸ್ಥಿತಿಯನ್ನು ಮರೆಮಾಚಲು ಸಹಾಯ ಮಾಡುತ್ತವೆ ಎನ್ನಲಾಗಿದೆ.

ಸರಿಪಡಿಸಲು ಕ್ರಮ

ಆಪಲ್ ಮತ್ತು ಫಾಕ್ಸ್‌ಕಾನ್ 2022ರಲ್ಲಿ ತಮ್ಮ ನೇಮಕಾತಿ ಅಭ್ಯಾಸಗಳಲ್ಲಿನ ನ್ಯೂನತೆಗಳನ್ನು ಒಪ್ಪಿಕೊಂಡಿವೆ ಮತ್ತು ಪರಿಸ್ಥಿತಿಯನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಕಂಪನಿ ಹೇಳಿದೆ. ಆದರೂ ಶ್ರೀಪೆರಂಬದೂರ್ ಸ್ಥಾವರದಲ್ಲಿ 2023 ಮತ್ತು 2024ರ ನೇಮಕಾತಿಯಲ್ಲಿ ಈ ಲೋಪ ಸಂಭವಿಸಿವೆ.

ಇದನ್ನೂ ಓದಿ: Frank Duckworth : ಮಳೆ ಪೀಡಿತ ಪಂದ್ಯಗಳಿಗೆ ಅನ್ವಯಿಸುವ ಡಕ್ವರ್ತ್​​ ಲೂಯಿಸ್ ನಿಯಮದ ರೂವಾರಿ ಫ್ರಾಂಕ್​ ಡಕ್ವರ್ತ್​​ ನಿಧನ

Exit mobile version