ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited-HAL Recruitment 2023) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಂಜಿನಿಯರ್, ಡೆಪ್ಯುಟಿ ಮ್ಯಾನೇಜರ್, ಸೆಕ್ಯುರಿಟಿ ಆಫೀಸರ್ ಸೇರಿ 84 ಹುದ್ದೆಗಳಿವೆ. ಭಾರತ ಎಲ್ಲಿಯಾದರೂ ಉದ್ಯೋಗ ನಿರ್ವಹಿಸಲು ತಯಾರಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ನವೆಂಬರ್ 30ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆ ತಿಳಿಸಿದೆ.
ಅಧಿಕೃತ ಅಧಿಸೂಚನೆಗೆ ಇಲ್ಲಿ ಕ್ಲಿಕ್ ಮಾಡಿ.
ಹುದ್ದೆಗಳ ವಿವರ
ಸೀನಿಯರ್ ಟೆಸ್ಟ್ ಪೈಲಟ್/ ಟೆಸ್ಟ್ ಪೈಲಟ್-2, ಚೀಫ್ ಮ್ಯಾನೇಜರ್(ಸಿವಿಲ್)-1, ಸೀನಿಯರ್ ಮ್ಯಾನೇಜರ್ (ಸಿವಿಲ್)-1, ಡೆಪ್ಯುಟಿ ಮ್ಯಾನೇಜರ್ (ಸಿವಿಲ್)-9, ಮ್ಯಾನೇಜರ್ (ಐಎಂಎಂ)-5, ಎಂಜಿನಿಯರ್ (ಐಎಂಎಂ)-9, ಡೆಪ್ಯುಟಿ ಮ್ಯಾನೇಜರ್ (ಫೈನಾನ್ಸ್)-9, ಫೈನಾನ್ಸ್ ಆಫೀಸರ್-6, ಡೆಪ್ಯುಟಿ ಮ್ಯಾನೇಜರ್ (ಎಚ್‌ಆರ್)-5, ಡೆಪ್ಯುಟಿ ಮ್ಯಾನೇಜರ್ (ಲೀಗಲ್)-4, ಡೆಪ್ಯುಟಿ ಮ್ಯಾನೇಜರ್ (ಮಾರ್ಕೆಟಿಂಗ್)-5, ಸೆಕ್ಯುರಿಟಿ ಆಫೀಸರ್-9, ಆಫೀಸರ್ (ಆಫೀಶಿಯಲ್ ಲಾಂಗ್ವೇಜ್)-1, ಎಂಜಿನಿಯರ್ (ಕಸ್ಟಮರ್ ಸರ್ವಿಸ್)-3, ಫೈರ್ ಆಫೀಸರ್-3 ಹುದ್ದೆಗಳಿವೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಸಾಮಾನ್ಯ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕು. ಇದರಲ್ಲಿ 18% ಜಿಎಸ್‌ಟಿ ಸೇರಿದೆ. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯು ಡಿ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ನಡೆಯಲಿದೆ. ಅರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ “Hindustan Aeronautics Limited – Recruitment Account”ಗೆ ಸಲ್ಲಿಸಬೇಕು. ಅಕೌಂಟ್ ನಂಬರ್ 41496209808 (IFSC Code SBIN0009077).
ಅರ್ಜಿ ಸಲ್ಲಿಕೆ ವಿಧಾನ
- HAL ಇಂಡಿಯಾ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ
- ಸಂವಹನ ಉದ್ದೇಶಕ್ಕಾಗಿ ಸರಿಯಾದ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆಯ ಡಾಕ್ಯುಮೆಂಟ್, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಔದ್ಯೋಗಿಕ ಅನುಭವದ ದಾಖಲೆಗಳನ್ನು ಸಿದ್ಧವಾಗಿಡಿ.
- ಅರ್ಜಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
- ಸರಿಯಾದ ಮಾಹಿತಿ ತುಂಬಿ ಫಾರ್ಮ್ ಭರ್ತಿ ಮಾಡಿ.
- ಈ ವಿಳಾಸಕ್ಕೆ ಅರ್ಜಿ ನಮೂನೆಯನ್ನು ಕಳುಹಿಸಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಕಾರ್ಪೊರೇಟ್ ಕಚೇರಿ, 15/1, ಕಬ್ಬನ್ ರಸ್ತೆ, ಬೆಂಗಳೂರು-560001 (Hindustan Aeronautics Limited, Corporate Office, 15/1, Cubbon Road, Bengaluru – 560 001)
ಗಮನಿಸಿ: ಸಾಮಾನ್ಯ ಪೋಸ್ಟ್/ ಸ್ಪೀಡ್ ಪೋಸ್ಟ್/ ರಿಜಿಸ್ಟರ್ ಪೋಸ್ಟ್/ ಕೊರಿಯರ್ ಮೂಲಕ ನಿಮ್ಮ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಅಧಿಕೃತ ವಿಳಾಸ: https://hal-india.co.in/ಗೆ ಭೇಟಿ ನೀಡಿ.
ಇದನ್ನೂ ಓದಿ: AAICLAS Recruitment 2023: 436 ಅಸಿಸ್ಟೆಂಟ್ ಹುದ್ದೆಗಳಿಗೆ ದ್ವಿತೀಯ ಪಿಯು ಪಾಸಾದವರು ಅರ್ಜಿ ಸಲ್ಲಿಸಿ