Site icon Vistara News

HESCOM Recruitment 2023 : ಹೆಸ್ಕಾಂನಲ್ಲಿ ಅಪ್ರೆಂಟಿಸ್‌ಷಿಫ್‌; ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನ

HESCOM recruitment 2023

ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ಪದವೀಧರರಿಂದ ಮತ್ತು ಡಿಪ್ಲೊಮಾ ಮಾಡಿದವರಿಂದ ಅಪ್ರೆಂಟಿಸ್‌ಷಿಪ್‌ಗೆ ಅರ್ಜಿ (HESCOM Recruitment 2023) ಆಹ್ವಾನಿಸಿದೆ. ಒಟ್ಟು ೨00 ಅಭ್ಯರ್ಥಿಗಳಿಗೆ ಅವಕಾಶ ದೊರೆಯಲಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಅರ್ಜಿ ಸಲ್ಲಿಸಲು ಜ.೨೫ ಕೊನೆಯ ದಿನವಾಗಿದೆ.

ಇದು ಒಂದು ವರ್ಷಗಳ ಅವಧಿಯ ಅಪ್ರೆಂಟಿಸ್‌ಷಿಪ್‌ ಆಗಿದ್ದು, ಆಯ್ಕೆಯಾದ ಎಂಜಿನಿಯರಿಂಗ್‌ ಪದವೀಧರ ಅಭ್ಯರ್ಥಿಗಳಿಗೆ ಮಾಸಿಕ 9 ಸಾವಿರ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ 8 ಸಾವಿರ ಸ್ಟೈಫಂಡ್‌ ನೀಡಲಾಗುತ್ತದೆ.

ಎಷ್ಟು ಮಂದಿಗೆ ಅವಕಾಶ?
ಒಟ್ಟು 125 ಮಂದಿ ಪದವೀಧರರು ಅಪ್ರೆಂಟಿಸ್‌ಷಿಪ್‌ ಮಾಡಬಹುದಾಗಿದೆ. ಎಲೆಕ್ಟ್ರಿಕಲ್‌ & ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ಮಾಡಿದ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಡಿಪ್ಲೊಮಾ ಮಾಡಿದ 75 ಅಭ್ಯರ್ಥಿಗಳು ಅಪ್ರೆಂಟಿಸ್‌ಷಿಪ್‌ ಮಾಡುಬಹುದಾಗಿದ್ದು, ಎಲೆಕ್ಟ್ರಿಕಲ್‌ & ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ಡಿಪ್ಲೊಮಾ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಸೂಚನೆಯಲ್ಲಿರುವುದೇನು?

ಆಯ್ಕೆ ಹೇಗೆ?

ಅಭ್ಯರ್ಥಿಗಳು ಎಂಜಿನಿಯರಿಂಗ್‌ ಪದವಿ ಮತ್ತು ಡಿಪ್ಲೊಮಾದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕ ನಡೆಯಲಿದೆ. ಬಂದ ಅರ್ಜಿಗಳನ್ನು ಪರಿಶೀಲಿಸಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ಇ-ಮೇಲ್‌ ಮೂಲಕ ಮಾಹಿತಿ ನೀಡಲಾಗುತ್ತದೆ. ನಂತರ ಅಭ್ಯರ್ಥಿಗಳ ಮೂಲ ದಾಖಲೆ ಪರಿಶೀಲನೆ ನಡೆಸಿ, ಅಪ್ರೆಂಟಿಸ್‌ಷಿಪ್‌ಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಹುಬ್ಬಳ್ಳಿಯಲ್ಲಿಯೇ ದಾಖಲೆ ಪರಿಶೀಲನೆ ನಡೆಯಲಿದೆ. ದಾಖಲೆ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಟಿಎ/ಡಿಎ ನೀಡಲಾಗುತ್ತದೆ.

ಇತ್ತ ಗಮನಿಸಿ

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ನ್ಯಾಷನಲ್‌ ವೆಬ್‌ ಪೋರ್ಟಲ್‌ (www.mhrdnats.gov.in) ಮೂಲಕ ಅರ್ಜಿ ಸಲ್ಲಿಸಬೇಕಿರುತ್ತದೆ. ಈಗಾಗಲೇ ಅಪ್ರೆಂಟಿಸ್‌ಷಿಪ್‌ಗಾಗಿನ ಈ ಪೋರ್ಟಲ್‌ನಲ್ಲಿ ಹೆಸರು ನೊಂದಾಯಿಸಿಕೊಂಡಿರುವವರು ಹೆಸ್ಕಾಂ ಅನ್ನು ಆಯ್ಕೆಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಎನ್‌ಎಟಿಎಸ್‌ನಲ್ಲಿ ಅರ್ಜಿ ಸಲ್ಲಿಸಲು ಜನವರಿ 25 ಕೊನೆಯ ದಿನವಾದರೆ, ಹೆಸ್ಕಾಂಗೆ ಅರ್ಜಿ ಸಲ್ಲಿಸಲು ಜನವರಿ 30 ಕೊನೆಯ ದಿನವಾಗಿರುತ್ತದೆ. ಫೆಬ್ರವರಿ 03 ರಂದು ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುತ್ತದೆ. ಫೆಬ್ರವರಿ 16 ರಂದು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ.

ಇದನ್ನೂ ಓದಿ : LIC AAO Recruitment 2023 | ಎಲ್‌ಐಸಿಯಲ್ಲಿ 300 ಎಎಓ ನೇಮಕ; ಕನ್ನಡದಲ್ಲಿ ನಡೆಯಲ್ಲ ಪರೀಕ್ಷೆ!

Exit mobile version