Site icon Vistara News

Job News: ಆಪಲ್ ನಿಂದ ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ!

Hiring to Apple

ನವದೆಹಲಿ: ವಿಶ್ವದ ಅತಿದೊಡ್ಡ ಐಫೋನ್ (iphone) ತಯಾರಕ(Job News) ಆಪಲ್ ಕಂಪನಿ (apple compeny) ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ (india) 5,00,000 ಕ್ಕೂ ಹೆಚ್ಚು ಮಂದಿಗೆ ಉದ್ಯೋಗ (job) ನೀಡುವ ನಿರೀಕ್ಷೆಯಿದೆ. ಪ್ರಸ್ತುತ ಆಪಲ್‌ (Hiring to Apple) ಮಾರಾಟಗಾರರು ಮತ್ತು ಪೂರೈಕೆದಾರರಾಗಿ ಭಾರತದಲ್ಲಿ 1,50,000 ಮಂದಿಯನ್ನು ನೇಮಿಸಿಕೊಂಡಿದೆ.

ಕೋವಿಡ್ -19 (covid-19) ಸಾಂಕ್ರಾಮಿಕದ ಬಳಿಕ ಐಫೋನ್ ಮತ್ತು ಇತರ ಗ್ಯಾಜೆಟ್‌ಗಳ ಉತ್ಪಾದನೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರಿ ತೊಂದರೆಗಳನ್ನು ಎದುರಿಸಿದ ಬಳಿಕ ಆಪಲ್ ಈಗ ಚೀನಾದಿಂದ (china) ತನ್ನ ಉತ್ಪಾದನಾ ನೆಲೆಯನ್ನು ಬೇರೆಬೇರೆ ಕಡೆಗಳಲ್ಲಿ ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಆಪಲ್ ಭಾರತದಲ್ಲಿ ಅತಿ ದೊಡ್ಡ ಘಟಕವನ್ನು ಸ್ಥಾಪಿಸುವ ಗುರಿ ಹೊಂದಿದೆ.

ಭಾರತದಲ್ಲಿ ಶಾಶ್ವತ ಘಟಕ ಸ್ಥಾಪನೆಗೆ ಐಫೋನ್ ತಯಾರಕ ಕಂಪೆನಿ ಆಪಲ್ ಮುಂದಾಗಿದ್ದು, ಇದಕ್ಕಾಗಿ ವೇಗವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಇದಕ್ಕೆ ಪೂರಕವಾಗಿ ಭಾರತದಲ್ಲಿ ಹೆಚ್ಚಿನ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದೆ. ಕಂಪೆನಿಯು ತನ್ನ ಸಿಬ್ಬಂದಿಗೆ ವಸತಿ ಯೋಜನೆಗಳನ್ನು ಮಾಡುತ್ತಿದೆ ಮತ್ತು ಹೆಚ್ಚು ಹೆಚ್ಚು ನೇಮಕ ಮಾಡುವತ್ತ ಗಮನ ಹರಿಸುತ್ತಿದೆ.

ಇದನ್ನೂ ಓದಿ: Job News: ಕೆಪಿಎಸ್‌ಸಿಯ 1 ಹುದ್ದೆಗೆ ಸರಾಸರಿ 508 ಅರ್ಜಿ ಸಲ್ಲಿಕೆ; ಒಟ್ಟು 1.95 ಲಕ್ಷ ಅಭ್ಯರ್ಥಿಗಳಿಂದ ಅಪ್ಲಿಕೇಷನ್‌

5 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ

ಆಪಲ್‌ನ ಅತಿದೊಡ್ಡ ಉದ್ಯೋಗ ಉತ್ಪಾದಕವೆಂದರೆ ಟಾಟಾ ಎಲೆಕ್ಟ್ರಾನಿಕ್ಸ್. ಅದಕ್ಕಾಗಿ ಎರಡು ಸ್ಥಾವರಗಳನ್ನು ಸ್ಥಾಪಿಸುತ್ತಿದ್ದು, ಮುಂದಿನ ಮುಂದಿನ ಮೂರು ವರ್ಷಗಳಲ್ಲಿ ಆಪಲ್ ತನ್ನ ಮಾರಾಟಗಾರರ ಮೂಲಕ ಭಾರತದಲ್ಲಿ 5,00,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಸಾಧ್ಯತೆ ಇದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಆಪಲ್ ಭಾರತದಲ್ಲಿ ನೇಮಕಾತಿಯನ್ನು ವೇಗಗೊಳಿಸುತ್ತಿದೆ. ಅಂದಾಜಿನ ಪ್ರಕಾರ ಅದರ ಮಾರಾಟಗಾರರು ಮತ್ತು ಘಟಕಗಳ ಪೂರೈಕೆದಾರರ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಐದು ಲಕ್ಷ ಜನರಿಗೆ ಉದ್ಯೋಗ ನೀಡಲಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ಪಾದನೆ ಹೆಚ್ಚಿಸಲು ಕ್ರಮ

ಭಾರತದಲ್ಲಿ ಆಪಲ್ ತನ್ನ ಉತ್ಪಾದನೆಯನ್ನು ಸುಮಾರು 5 ಪಟ್ಟು ಹೆಚ್ಚಿಸಲು ಬಯಸುತ್ತಿದೆ. ಮುಂದಿನ 4- 5 ವರ್ಷಗಳ ಯೋಜನೆಗೆ 40 ಶತಕೋಟಿ ಡಾಲರ್‌ ಅಂದರೆ ಸುಮಾರು 3.32 ಲಕ್ಷ ಕೋಟಿ ವಿನಿಯೋಗಿಸಲು ಸಜ್ಜಾಗಿದೆ.
ಮೂಲಸೌಕರ್ಯ ಮತ್ತು ಉದ್ಯೋಗಿಗಳಿಗಾಗಿ ಹೆಚ್ಚು ಖರ್ಚು ಮಾಡಲು ಮುಂದಾಗಿರುವ ಆಪಲ್ ಪ್ರತಿಸ್ಪರ್ಧಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ.

ಅಗ್ರಸ್ಥಾನದಲ್ಲಿ ಸ್ಯಾಮ್‌ಸಂಗ್

ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್ ರಿಸರ್ಚ್ ಆಪಲ್ ಹೇಳುವಂತೆ ಮೊದಲ ಬಾರಿಗೆ 2023 ರಲ್ಲಿ ಭಾರತದ ಮಾರುಕಟ್ಟೆಯನ್ನು ಅತ್ಯಧಿಕ ಆದಾಯದೊಂದಿಗೆ ಮುನ್ನಡೆಸಿದೆ. ಆದರೂ ಸ್ಯಾಮ್‌ಸಂಗ್ ಮಾರಾಟದ ವಿಷಯದಲ್ಲಿ ಇನ್ನೂ ಅಗ್ರಸ್ಥಾನದಲ್ಲಿದೆ. ಆಪಲ್ 10 ಮಿಲಿಯನ್ ಯೂನಿಟ್ ಮಾರ್ಕ್ ಅನ್ನು ಸಾಧಿಸಿದೆ.

ಐಫೋನ್ ರಫ್ತು ಏರಿಕೆ

ಭಾರತದಿಂದ ಆಪಲ್‌ನ ಐಫೋನ್ ರಫ್ತು 2022- 23 ರಲ್ಲಿ 6.27 ಶತಕೋಟಿ ಡಾಲರ್ ನಿಂದ 2023- 24 ರಲ್ಲಿ 12.1 ಶತಕೋಟಿ ಡಾಲರ್ ಗೆ ಏರಿದೆ. ಇದು ಸುಮಾರು 100 ಪ್ರತಿಶತದಷ್ಟು ದೊಡ್ಡ ಜಿಗಿತವಾಗಿತ್ತು ಎಂದು ಟ್ರೇಡ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ ದಿ ಟ್ರೇಡ್ ವಿಷನ್ ಅಂಕಿಅಂಶಗಳು ತಿಳಿಸಿದೆ.

Exit mobile version