Site icon Vistara News

IBPS PO 2022 : ಐಬಿಪಿಎಸ್‌ ಪಿಒ ನೇಮಕ; ಸಂದರ್ಶನಕ್ಕೆ ಕರೆಪತ್ರ ಪ್ರಕಟ

IBPS SO Recruitment 2022

ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) 11 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಪ್ರೊಬೆಷನರಿ ಆಫೀಸರ್‌/ಮ್ಯಾನೇಜ್‌ಮೆಂಟ್‌ ಟ್ರೇನಿ (IBPS PO 2022 ) ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಸಂದರ್ಶನದ ಕರೆಪತ್ರವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಸಂದರ್ಶನಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ರಿಜಿಸ್ಟೇಷನ್‌ ನಂಬರ್‌ ಮತ್ತು ಜನ್ಮದಿನಾಂಕದೊಂದಿಗೆ ಲಾಗಿನ್‌ ಆಗಿ ಕರೆಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಸಂದರ್ಶನದ ದಿನಾಂಕ, ಸಮಯ, ಸ್ಥಳ ಮತ್ತಿತರ ಮಾಹಿರಿಯನ್ನು ಈ ಕರೆಪತ್ರದಲ್ಲಿ ಒದಗಿಸಲಾಗಿರುತ್ತದೆ.

ಇದರ ಜತೆಗೆ ಐಬಿಪಿಎಸ್‌ ಕ್ಲರಿಕಲ್‌ ಕೇಡರ್, ಸ್ಪೆಷಲಿಸ್ಟ್‌ ಆಫೀಸರ್‌ನ ಹಾಗೂ ಗ್ರಾಮೀಣ ಬ್ಯಾಂಕ್‌ಗಳಲ್ಲಿನ ವಿವಿಧ ಹುದ್ದೆಗಳಿಗೆ ಸಂಬಂಧಿಸಿದಂತೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಸಂಭವನೀಯ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: https://www.ibps.in

ಇದನ್ನೂ ಓದಿ: LIC AAO Recruitment 2023 | ಎಲ್‌ಐಸಿಯಲ್ಲಿ 300 ಎಎಓ ನೇಮಕ; ಕನ್ನಡದಲ್ಲಿ ನಡೆಯಲ್ಲ ಪರೀಕ್ಷೆ!

Exit mobile version