Site icon Vistara News

Job News: ಇಂಡಿಯನ್ ಓವರ್​​ಸೀಸ್ ಬ್ಯಾಂಕ್‌ನಲ್ಲಿದೆ 66 ಸ್ಪೆಷಲಿಸ್ಟ್​ ಆಫೀಸರ್ ಹುದ್ದೆ

indian bank

indian bank

ಬೆಂಗಳೂರು: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗ (Job News) ನಿರ್ವಹಿಸಬೇಕು ಎಂದುಕೊಂಡವರಿಗೆ ಇಲ್ಲಿದೆ ಗುಡ್‌ ನ್ಯೂಸ್‌. ಇಂಡಿಯನ್ ಓವರ್​​ಸೀಸ್ ಬ್ಯಾಂಕ್ (Indian Overseas Bank) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ (IOB Recruitment 2023). ಒಟ್ಟು 66 ಸ್ಪೆಷಲಿಸ್ಟ್​ ಆಫೀಸರ್(Specialist Officer-SO) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಮ್ಯಾನೇಜರ್‌, ಸೀನಿಯರ್‌ ಮ್ಯಾನೇಜರ್‌ ಮುಂತಾದ ಹುದ್ದೆಗಳಿಗೆ ಆಸಕ್ತರು ನವೆಂಬರ್‌ 19ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆ ತಿಳಿಸಿದೆ.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಮ್ಯಾನೇಜರ್‌-59, ಸೀನಿಯರ್‌ ಮ್ಯಾನೇಜರ್‌-5, ಚೀಫ್‌ ಮ್ಯಾನೇಜರ್‌-2 ಹುದ್ದೆಗಳಿವೆ. ಸಿಎಫ್‌ಎ, ಸಿಎಂಎ, ಸಿಎ, ಎಲ್‌ಎಲ್‌ಬಿ, ಪದವಿ, ಸಿಎಸ್‌ಇ/ ಐಟಿ/ ಇಸಿಇ/ ಇಇಇ/ ಸಿವಿಲ್​​ನಲ್ಲಿ ಬಿಇ ಅಥವಾ ಬಿ.ಟೆಕ್, ಎಂಬಿಎ, ಎಂ.ಟೆಕ್, ಪಿಜಿಡಿಬಿಎಂ, ಸ್ನಾತಕೋತ್ತರ ಪದವಿ ಪಡೆದವರು ಮ್ಯಾನೇಜರ್‌ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಸೀನಿಯರ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಲ್‌ಎಲ್‌ಬಿ, ಬಿಇ ಅಥವಾ ಬಿ.ಟೆಕ್‌ನಲ್ಲಿ ಎಸ್‌ಇ/ ಐಟಿ/ ಇಸಿಇ, ಪದವಿ ಓದಿರಬೇಕು. ಚೀಫ್​ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಸಿಎ ಅಥವಾ ಐಸಿಡಬ್ಲ್ಯುಎ, ಪದವಿ, ಎಂಬಿಎ, ಎಂಸಿಎ, ಸ್ನಾತಕೋತ್ತರ ಪದವಿ.

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 25 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ.

ಇದನ್ನೂ ಓದಿ: Job News: ಸಿಆರ್‌ಪಿಎಫ್ ಆಸ್ಪತ್ರೆಗಳಲ್ಲಿ ವೈದ್ಯರಾಗಬೇಕೇ? ವಾಕ್ ಇನ್ ಇಂಟರ್‌ವ್ಯೂ ಅಟೆಂಡ್ ಮಾಡಿ

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಜನರಲ್‌/ ಒಬಿಸಿ/ ಇಡಬ್ಲ್ಯುಸಿ ಅಭ್ಯರ್ಥಿಗಳು 850 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ/ ಎಸ್‌ಟಿ/ ಪಿಡಬ್ಲ್ಯುಡಿ ಅಭ್ಯರ್ಥಿಗಳ ಅರ್ಜಿ ಶುಲ್ಕ 175 ರೂ. ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಬೇಕು. ಲಿಖಿತ ಪರೀಕ್ಷೆ, ಸಂದರ್ಶನ, ಡಾಕ್ಯುಮೆಂಟ್‌ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅರ್ಜಿ ಸಲ್ಲಿಕೆ ವಿಧಾನ

Exit mobile version