ನವ ದೆಹಲಿ : ಕೇಂದ್ರ ಸರ್ಕಾರದ ಒಡೆತನಕ್ಕೆ ಸೇರಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡೆ (ಐಒಸಿಎಲ್)ನ ರಿಫೈನರಿ ವಿಭಾಗವು ಅಪ್ರೆಂಟೀಸ್ ನೇಮಕಕ್ಕೆ (IOCL Recruitment 2022 ) ಅರ್ಜಿ ಆಹ್ವಾನಿಸದೆ. ಒಟ್ಟು 1,535 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಉತ್ತರ ಭಾರತರದಲ್ಲಿರುವ ಒಂಬತ್ತು ರಫೈನರಿ ಘಟಗಳಿಗೆ ಈ ನೇಮಕ ನಡೆಯಲಿದೆ.
ಕೆಲ ಟ್ರೇಡ್‌ಗಳ ಅಪ್ರೆಂಟೀಸ್ ಅವಧಿಯು ಒಂದು ವರ್ಷಗಳಾಗಿದ್ದು, ಇನ್ನು ಕೆಲ ಟ್ರೇಡ್‌ಗಳ ಅವಧಿಯು ಒಂದು ವರ್ಷ ಮೂರು ತಿಂಗಳ ಅವಧಿಯದ್ದಾಗಿವೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅಕ್ಟೋಬರ್ 23 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅಭ್ಯರ್ಥಿಗಳು ಒಂಬತ್ತು ರಿಫೈನರಿಗಳಲ್ಲಿ ಯಾವುದಾದರೂ ಒಂದು ಘಟಕಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕಾತಿಯ ವೇಳಾಪಟ್ಟಿ
ವಿದ್ಯಾರ್ಹತೆ ಏನು?
ಟ್ರೇಡ್ ಅಪ್ರೆಂಟೀಸ್
ಕ್ರ.ಸಂ. | ಹುದ್ದೆಯ ಹೆಸರು | ಒಟ್ಟು ಹುದ್ದೆ | ವಿದ್ಯಾರ್ಹತೆ |
1 | ಅಟೆಂಟ್ ಆಪರೇಟರ್ (ಕೆಮಿಕಲ್ ಪ್ಲಾಂಟ್) | 396 | ಬಿಎಸ್ಸಿ(ಪಿಜಿಕ್ಸ್, ಮ್ಯಾಥ್‌ಮೆಟಿಕ್ಸ್, ಕೆಮಿಸ್ಟ್ರಿ/ ಇಂಡಸ್ಟ್ರಿಯಲ್ ಕೆಮಿಸ್ಟ್ರಿ) |
2 | ಫಿಟ್ಟರ್ | 161 | ಎಸ್‌ಎಸ್‌ಎಲ್‌ಸಿ, ಐಟಿಐ (ಫಿಟ್ಟರ್) |
3 | ಬಾಯ್ಲರ್ | 54 | ಬಿಎಸ್ಸಿ(ಪಿಜಿಕ್ಸ್, ಮ್ಯಾಥ್‌ಮೆಟಿಕ್ಸ್, ಕೆಮಿಸ್ಟ್ರಿ/ ಇಂಡಸ್ಟ್ರಿಯಲ್ ಕೆಮಿಸ್ಟ್ರಿ) |
4 | ಸೆಕ್ರೇಟರಿಯಲ್ಅಸಿಸ್ಟೆಂಟ್ | 39 | ಬಿಎ/ಬಿಎಸ್ಸಿ/ಬಿಕಾಂ |
5 | ಅಕೌಂಟೆಂಟ್ | 45 | ಬಿಕಾಂ |
6 | ಡಾಟಾ ಎಂಟ್ರಿ ಆಪರೇಟರ್ | 73 | ಎಸ್‌ಎಸ್‌ಎಲ್‌ಸಿ |
ಟೆಕ್ನಿಕಲ್ ಅಪ್ರೆಂಟೀಸ್
7 | ಕೆಮಿಕಲ್ | 332 | ಡಿಪ್ಲೊಮಾ (ಕೆಮಿಕಲ್ ಎಂಜಿನಿಯರಿಂಗ್ / ರಿಪೈನರಿ& ಪೆಟ್ರೊ ಕೆಮಿಕಲ್ ಎಂಜಿನಿಯರಿಂಗ್) |
8 | ಮೆಕ್ಯಾನಿಕಲ್ | 163 | ಡಿಪ್ಲೊಮಾ (ಮೆಕಾನಿಕಲ್ ಎಂಜಿನಿಯರಿಂಗ್) |
9 | ಎಲೆಕ್ಟ್ರಿಕಲ್ | 198 | ಡಿಪ್ಲೊಮಾ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್) |
10 | ಇನ್‌ಸ್ಟ್ರುಮೆಂಟೇಷನ್ | 74 | ಡಿಪ್ಲೊಮಾ (ಇನ್‌ಸ್ಟ್ರುಮೆಂಟೇಷನ್/ ಇನ್‌ಸ್ಟ್ರುಮೆಂಟೇಷನ್ & ಎಲೆಕ್ಟ್ರಾನಿಕ್ಸ್) |
ವಯೋಮಿತಿ ಎಷ್ಟು?
ಅಭ್ಯರ್ಥಿಗೆ ಕನಿಷ್ಠ 18 ವರ್ಷಗಳಾಗಿರಬೇಕು. ಗರಿಷ್ಠ 24 ವರ್ಷ ದೊಳಗಿರಬೇಕು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿರುತ್ತದೆ.
ಎರಡು ಗಂಟೆಗಳ ಕಾಲ ನಡೆಸಲಾಗುವ ಲಿಖಿತ ಪರೀಕ್ಷೆಯಲ್ಲಿ (ಅಬ್ಜೆಕ್ಟೀವ್ ಮಾದರಿಯಲ್ಲಿ ನಡೆಯಲಿದೆ) ಪಡೆದ ಅಂಕಗಳ ಆಧಾರದಲ್ಲಿ ನೇಮಕ ನಡೆಯಲಿದೆ. ಆಯ್ಕೆಯಾದವರಿಗೆ ಅಪ್ರೆಂಟೀಸ್ ಕಾಯ್ದೆ ಪ್ರಕಾರ ಸ್ಟೈಫಂಡ್ ನೀಡಲಾಗುತ್ತದೆ. ಇತರ ಭತ್ಯೆಗಳೂ ಇರುತ್ತವೆ.
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ವೆಬ್ ವಿಳಾಸ: https://www.iocrefrecruit.in/iocrefrecruit/main_special_oct21.aspx
ಇದನ್ನೂ ಓದಿ | SBI PO Recruitment 2022 | 1,673 ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ