ಬೆಂಗಳೂರು: ಪ್ರತಿಷ್ಠಿತ ಸಾರ್ವಜನಿಕ ಉದ್ಯಮ, “ಗ್ಲೋಬಲ್ 500ʼʼ ಖ್ಯಾತಿಯ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (IOCL) ಕರ್ನಾಟಕ, ಕೇರಳ, ತೆಲಂಗಾಣ, ತಮಿಳುನಾಡು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿನ ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸಲು 1,760 ಅಪ್ರೆಂಟಿಸ್‌ಗಳ ನೇಮಕಕ್ಕೆ (IOCL Recruitment) ಅರ್ಜಿ ಆಹ್ವಾನಿಸಿದೆ.
ಟ್ರೇಡ್/ಟೆಕ್ನಿಕಲ್ ಮತ್ತು ಗ್ರಾಜ್ಯುಯೇಟ್ ಅಪ್ರೆಂಟಿಸ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಕರ್ನಾಟಕದಲ್ಲಿ 21 ಟ್ರೇಡ್ ಮತ್ತು 22 ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿವೆ ಎಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದ್ದು, ಈ ಹುದ್ದೆಗಳನ್ನು ಮೀಸಲಾತಿಯನ್ವಯ ಹಂಚಿಕೆ ಮಾಡಲಾಗಿರುತ್ತದೆ. ಅಪ್ರೆಂಟಿಸ್ ಅವಧಿ 12 ತಿಂಗಳಾಗಿರುತ್ತದೆ.
ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಕಂಪನಿಯ ವೆಬ್‌ಸೈಟ್‌ನಲ್ಲಿ ಇದಕ್ಕೆ ಲಿಂಕ್ ಒದಗಿಸಲಾಗಿದೆ (https://www.ioclmd.in/). ಅರ್ಜಿ ಶುಲ್ಕ ಇರುವುದಿಲ್ಲ. ಆನ್‌ಲೈನ್ ಹೊರತು ಪಡಿಸಿ, ಬೇರೆ ರೀತಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಶೀಲಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಇತ್ತ ಗಮನಿಸಿ
ಅರ್ಜಿ ಸಲ್ಲಿಕೆ ಆರಂಭ: 14-12-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-01-2023 (ಸಂಜೆ 5:00 ಗಂಟೆಯವರೆಗೆ)
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: http://www.iocl.com/ apprenticeships.
ಸಹಾಯವಾಣಿ ಸಂಖ್ಯೆ: 9289901556
ವಿದ್ಯಾರ್ಹತೆ ಏನು?
ರಾಜ್ಯದಲ್ಲಿನ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಐಟಿಐ ಮಾಡಿದವರು (ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕಾನಿಕ್, ಇನ್‌ಸ್ಟ್ರುಮೆಂಟ್ ಮೆಕಾನಿಕ್, ಮೆಷಿನಿಸ್ಟ್ ) ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ ಮೆಕಾನಿಕಲ್, ಎಲೆಕ್ಟ್ರಿಕಲ್, ಇನ್‌ಸ್ಟ್ರುಮೆಂಟೇಷನ್, ಎಲೆಕ್ಟ್ರಿಕಲ್ &ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ವಯೋಮಿತಿ ಎಷ್ಟು?
ಅಭ್ಯರ್ಥಿಗಳು 18 ರಿಂದ 24 ವರ್ಷದೊಳಗಿನವರಾಗಿರಬೇಕು. ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು, ಒಬಿಸಿ ಅಭ್ಯರ್ಥಿಗಳಿಗೆ ಮೂರು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಿನಾಯಿತಿ ನೀಡಲಾಗಿರುತ್ತದೆ.
ನೇಮಕ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಎಂಸಿಕ್ಯೂ ಮಾದರಿಯಲ್ಲಿ ಈ ಪರೀಕ್ಷೆ ನಡೆಯಲಿದ್ದು, ಇದರಲ್ಲಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಅಪ್ರೆಂಟಿಸ್‌ಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಪರೀಕ್ಷೆಯ ದಿನಾಂಕವನ್ನು ಈಗ ಪ್ರಕಟಿಸಲಾಗಿಲ್ಲ. ಮುಂದೆ ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ಈ ಕುರಿತು ಮಾಹಿತಿ ನೀಡಲಾಗುತ್ತದೆ.
ಇದನ್ನೂ ಓದಿ| KPSC Recruitment 2022 | ಕೆಪಿಎಸ್‌ಸಿಯಿಂದ ವಿವಿಧ 23 ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ