ಬೆಂಗಳೂರು: ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ (Indian Rare Earths Limited-IREL Recruitment 2023) ಖಾಲಿ ಇರುವ ವಿವಿಧ ಹುದ್ದೆಗಳ (Job News) ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಐಆರ್‌ಇಎಲ್ ಮಹಾರಾಷ್ಟ್ರದ ಮುಂಬೈ ಮೂಲದ ಭಾರತೀಯ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದು, ಇದು ಅಪರೂಪದ ಮಣ್ಣಿನ ಲೋಹಗಳ ಗಣಿಗಾರಿಕೆ ಮತ್ತು ಸಂಸ್ಕರಣೆಯಲ್ಲಿ ಪರಿಣತಿಯನ್ನು ಹೊಂದಿದೆ. ಸೂಪರ್‌ವೈಸರಿ ಟ್ರೈನಿ, ಜ್ಯೂನಿಯರ್ ಸೂಪರ್‌ವೈಸರ್ (Supervisory Trainee, Junior Supervisor) ಸೇರಿ 88 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ನವೆಂಬರ್ 14. ಭಾರತದ ಎಲ್ಲಿ ಬೇಕಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಜ್ಯೂನಿಯರ್ ರಾಜ್‌ಭಾಷಾ ಅಧಿಕಾರಿ-4 ಹುದ್ದೆ-ವಿದ್ಯಾರ್ಹತೆ-ಪದವಿ/ಸ್ನಾತಕೋತ್ತರ ಪದವಿ
ಜ್ಯೂನಿಯರ್ ಸೂಪರ್ ವೈಸರ್-8 ಹುದ್ದೆ-ವಿದ್ಯಾರ್ಹತೆ-ಡಿಪ್ಲೋಮಾ/ಪದವಿ
ಮೈನಿಂಗ್ ಮೇಟ್-8 ಹುದ್ದೆ-ವಿದ್ಯಾರ್ಹತೆ-ದ್ವಿತೀಯ ಪಿಯುಸಿ
ಮೈನಿಂಗ್ ಸರ್ವೇಯರ್-1 ಹುದ್ದೆ-ವಿದ್ಯಾರ್ಹತೆ-ಡಿಪ್ಲೋಮಾ
ಮೈನಿಂಗ್ ಫಾರ್‌ಮ್ಯಾನ್-4 ಹುದ್ದೆ-ವಿದ್ಯಾರ್ಹತೆ-ಡಿಪ್ಲೋಮಾ
ಸೂಪರ್ ವೈಸರ್-7 ಹುದ್ದೆ-ವಿದ್ಯಾರ್ಹತೆ-ಪದವಿ/ ಸ್ನಾತಕೋತ್ತರ ಪದವಿ
ಗ್ರ್ಯಾಜುವೇಟ್ ಟ್ರೈನಿ-7 ಹುದ್ದೆ-ವಿದ್ಯಾರ್ಹತೆ-ಪದವಿ
ಡಿಪ್ಲೋಮಾ ಟ್ರೈನಿ-37 ಹುದ್ದೆ-ವಿದ್ಯಾರ್ಹತೆ-ಡಿಪ್ಲೋಮಾ
ಟ್ರೈನಿ-8 ಹುದ್ದೆ-ವಿದ್ಯಾರ್ಹತೆ-ಪದವಿ
ಟ್ರೈನಿ ಕೆಮಿಸ್ಟ್-4 ಹುದ್ದೆ-ವಿದ್ಯಾರ್ಹತೆ-ಡಿಪ್ಲೋಮಾ
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಮಹಿಳೆಯರು/ ಎಸ್‌ಸಿ/ ಎಸ್‌ಟಿ/ ಪಿಡಬ್ಲ್ಯುಬಿಡಿ/ ಇಎಸ್‌ಎಂ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಜನರಲ್/ ಇಡಬ್ಲ್ಯುಎಸ್/ ಒಬಿಸಿ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಟ್ರೇಡ್ ಟೆಸ್ಟ್, ಕಂಪ್ಯೂಟರ್ ಪ್ರಾವೀಣ್ಯತೆ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 25,000-72,000 ರೂ. ತಿಂಗಳ ವೇತನ ದೊರೆಯಲಿದೆ ಎಂದು ಅಧಿಸೂಚನೆ ತಿಳಿಸಿದೆ.
ಅರ್ಜಿ ಸಲ್ಲಿಸುವ ವಿಧಾನ
- IREL recruitment notification 2023 ಅನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಸಂವಹನಕ್ಕೆ ಅಗತ್ಯವಾದ, ಸರಿಯಾದ ಫೋನ್ ನಂಬರ್, ಇ-ಮೇಲ್ ಐಡಿ ನಮೂದಿಸಿ. ಐಡಿ ಪ್ರೂಫ್, ವಯಸ್ಸಿನ ದಾಖಲಾತಿ, ಶೈಕ್ಷಣಿಕ ಅರ್ಹತೆಯ ದಾಖಲಾತಿ, ರೆಸ್ಯೂಮ್ ಇತ್ಯಾದಿ ರೆಡಿ ಮಾಡಿಟ್ಟುಕೊಳ್ಳಿ.
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ಅಗತ್ಯವಾದ ಎಲ್ಲ ಮಾಹಿತಿಗಳನ್ನು ತುಂಬಿ. ಡಾಕ್ಯುಮೆಂಟ್ನ ಸ್ಕ್ಯಾನ್ ಪ್ರತಿ, ನಿಮ್ಮ ಫೋಟೊ (ಅಗತ್ಯವಿದ್ದರೆ ಮಾತ್ರ) ಅಪ್ಲೋಡ್ ಮಾಡಿ
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ
- ಎಲ್ಲ ಮಾಹಿತಿ ಸರಿಯಾಗಿದೆ ಎನ್ನುವುದನ್ನು ಖಚಿತಪಡಿಸಿದ ಬಳಿಕ IREL Recruitment 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು Submit ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ನಂಬರ್ ಅಥವಾ ರಿಕ್ವೆಸ್ಟ್ ನಂಬರ್ ತೆಗೆದಿಡಲು ಮರೆಯಬೇಡಿ.
ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್ ವಿಳಾಸ https://irel.co.in/ಗೆ ಭೇಟಿ ನೀಡಿ. ಯಾವುದೇ ದೂರು, ಸಂಶಯಗಳಿದ್ದರೆ ಇಮೇಲ್ ಐಡಿ hrmrect-ho@irel.co.in ಅನ್ನು ಸಂಪರ್ಕಿಸಿ.
ಇದನ್ನೂ ಓದಿ: DRDO RAC Recruitment 2023: ನೀವೂ ಸೈಂಟಿಸ್ಟ್ ಆಗಬೇಕೇ? ಇಂದೇ 51 ಹುದ್ದೆಗೆ ಅರ್ಜಿ ಸಲ್ಲಿಸಿ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ