Site icon Vistara News

Job Alert: ಎಸ್ಸೆಸ್ಸೆಲ್ಲಿ ತೇರ್ಗಡೆಯಾದವರಿಗೆ ಗುಡ್‌ನ್ಯೂಸ್‌; ಅಂಚೆ ಇಲಾಖೆಯ 1,899 ಹುದ್ದೆಗಳಿಗೆ ಅಪ್ಲೈ ಮಾಡಿ

post office new

post office new

ಬೆಂಗಳೂರು: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ (India Post Recruitment 2023). ಸ್ಪೋರ್ಟ್ಸ್‌ ಕೋಟಾದಡಿ 1,899 ಹುದ್ದೆಗಳಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ವಿವಿಧ ಕ್ರೀಡೆಗಳಲ್ಲಿ ಸಾದನೆ ಮಾಡಿದ ಪ್ರತಿಭಾವಂತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ನವೆಂಬರ್‌ 10ರಿಂದ ಅರ್ಜಿ ಸಲ್ಲಿಸಬಹುದು. 10ನೇ ತರಗತಿ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಲು ಅರ್ಹರು (Job Alert). ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಡಿಸೆಂಬರ್‌ 9.

ಹುದ್ದೆಗಳ ವಿವರ

ಪೋಸ್ಟಲ್‌ ಅಸಿಸ್ಟೆಂಟ್‌-598 ಹುದ್ದೆ-ವಿದ್ಯಾರ್ಹತೆ-ಪದವಿ
ಸೋರ್ಟಿಂಗ್‌ ಅಸಿಸ್ಟೆಂಟ್‌-143 ಹುದ್ದೆ-ವಿದ್ಯಾರ್ಹತೆ-ಪದವಿ
ಪೋಸ್ಟ್‌ ಮ್ಯಾನ್‌-585 ಹುದ್ದೆ-ವಿದ್ಯಾರ್ಹತೆ-ದ್ವಿತೀಯ ಪಿಯುಸಿ
ಮೇಲ್‌ ಗಾರ್ಡ್‌-3 ಹುದ್ದೆ-ವಿದ್ಯಾರ್ಹತೆ-ದ್ವಿತೀಯ ಪಿಯುಸಿ
ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌-570 ಹುದ್ದೆ-ವಿದ್ಯಾರ್ಹತೆ-ಎಸ್ಸೆಸ್ಸೆಲ್ಸಿ

ವಯೋಮಿತಿ ಮತ್ತು ಅರ್ಜಿ ಶುಲ್ಕ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ. ಮೀಸಲಾತಿಗೆ ಅನುಗುಣವಾಗಿ ರಿಯಾಯಿತಿ ಲಭ್ಯ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಜನರಲ್‌/ ಒಬಿಸಿ/ ಇಡಬ್ಲ್ಯುಎಸ್‌ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಇದನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಮೆರಿಟ್‌ ಲಿಸ್ಟ್‌ ಮತ್ತು ಡಾಕ್ಯುಮೆಂಟ್‌ ಪರಿಶೀಲನೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಇದನ್ನೂ ಓದಿ: Job Alert: ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಹುದ್ದೆಗಳಿಗೆ ನ.6ರಿಂದ ಅರ್ಜಿ ಸಲ್ಲಿಸಿ

ವೇತನ ಶ್ರೇಣಿ

ಪೋಸ್ಟಲ್‌ ಅಸಿಸ್ಟೆಂಟ್‌, ಸೋರ್ಟಿಂಗ್‌ ಅಸಿಸ್ಟೆಂಟ್‌-25,500 – 81,100 ರೂ., ಪೋಸ್ಟ್‌ ಮ್ಯಾನ್‌, ಮೇಲ್‌ ಗಾರ್ಡ್‌-21,700–69,100 ರೂ., ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌-18,000 – 56,900 ರೂ. ಮಾಸಿಕ ವೇತನವಿದೆ ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ಸಲ್ಲಿಕೆ ವಿಧಾನ

ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ indiapost.gov.inಗೆ ಭೇಟಿ ನೀಡಿ. India Post Recruitment 2023 ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Exit mobile version