Site icon Vistara News

Job Alert: ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯದಲ್ಲಿ 487 ಹುದ್ದೆಗಳಿವೆ!

lab assistant

lab assistant

ನವದೆಹಲಿ: ಡೈರೆಕ್ಟರೇಟ್‌ ಜನರಲ್‌ ಆಫ್‌ ಹೆಲ್ತ್‌ ಸರ್ವೀಸಸ್‌ (Directorate General Of Health Services-DGHS Recruitment 2023) ಖಾಲಿರುವ 487 ಗ್ರೂಪ್‌ ಬಿ ಮತ್ತು ಗ್ರೂಪ್‌ ಸಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ನವೆಂಬರ್‌ 30ರ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು (Job Alert). ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಡಿಪ್ಲೋಮಾ ಓದಿದವರು ಅರ್ಜಿ ಸಲ್ಲಿಸಲು ಅರ್ಹರು. ಉದ್ಯೋಗ ಸ್ಥಳ: ಭಾರತಾದ್ಯಂತ.

ಹುದ್ದೆಗಳ ವಿವರ

ರಿಸರ್ಚ್‌ ಅಸಿಸ್ಟೆಂಟ್‌-3, ಟೆಕ್ನಿಶಿಯನ್‌-5, ಲ್ಯಾಬ್‌ ಅಟೆಂಡೆಂಟ್‌-75, ರಿಸರ್ಚ್‌ ಅಟೆಂಡೆಂಟ್‌-1, ಲ್ಯಾಬ್‌ ಅಸಿಸ್ಟೆಂಟ್‌ ಗ್ರೇಡ್‌ II-3, ಇನ್‌ಸೆಕ್ಟ್‌ ಕಲೆಕ್ಟರ್‌-1, ಟೆಕ್ನಿಶಿಯನ್‌-1, ಲ್ಯಾಬ್‌ ಟೆಕ್ನಿಶಿಯನ್‌-5, ಹೆಲ್ತ್‌ ಇನ್ಸ್‌ಪೆಕ್ಟರ್‌-70, ಫೀಲ್ಡ್‌ ವರ್ಕರ್‌-140, ಲೈಬ್ರರಿ & ಇನ್ಫರ್ಮೇಶನ್‌ ಅಸಿಸ್ಟೆಂಟ್‌-1, ಲೈಬ್ರರಿ ಕ್ಲರ್ಕ್‌-6, ಫಿಸಿಯೋಥೆರಪಿಸ್ಟ್‌-4, ಮೆಡಿಕಲ್‌ ಸೋಶಿಯಲ್‌ ವೆಲ್‌ಫೇರ್‌ ಆಫೀಸರ್‌-1, ಎಕ್ಸ್‌-ರೇ ಟೆಕ್ನಿಶಿಯನ್‌-1, ಮೆಡಿಕಲ್‌ ಲ್ಯಾಬ್‌ ಟೆಕ್ನಾಲಾಜಿಸ್ಟ್‌-1, ಇನ್ಟ್ರಕ್ಟರ್‌ ಫಿಟ್ಟರ್‌ ಟ್ರೇಡ್‌-1, ಜ್ಯೂನಿಯರ್‌ ಮೆಡಿಕಲ್‌ ಲ್ಯಾಬ್‌ ಟೆಕ್ನಾಲಾಜಿಸ್ಟ್‌-2, ಪ್ರೆಸ್ಸಿಂಗ್‌ ಮ್ಯಾನ್‌-1, ಟೆಕ್ನಿಕಲ್‌ ಅಸಿಸ್ಟೆಂಟ್‌(ಸರ್ಜಿಕಲ್‌)-1, ಅನಿಮಲ್‌ ಅಟೆಂಡೆಂಟ್‌-3, ಲ್ಯಾಬ್‌ ಅಟೆಂಡೆಂಟ್‌-3, ನರ್ಸಿಂಗ್‌ ಆಫೀಸರ್‌-13, ಪ್ಯಾರಾ ಮೆಡಿಕಲ್‌ ವರ್ಕರ್‌-5, ಕುಕ್‌-ಕಿಚನ್‌ ಅಸಿಸ್ಟೆಂಟ್‌-3, ಎಚ್‌ಎಂಟಿಎಸ್‌ ಜನರಲ್‌(ವಾರ್ಡ್‌ ಬಾಯ್‌)-21, ಎಚ್‌ಎಂಟಿಎಸ್‌ ಡಯಟ್ರಿ (ಕಿಚನ್‌ ಸ್ಟಾಫ್‌)-10, ಎಚ್‌ಎಂಟಿಎಸ್‌ ಸ್ಯಾನಿಟೇಶನ್‌ (ಸಫಾಯಿ ಕರ್ಮಚಾರಿ)-29, ವಾರ್ಡ್‌ ಮಾಸ್ಟರ್‌-3, ಅಕೌಂಟೆಂಟ್‌-2 ಹುದ್ದೆಗಳು ಸೇರಿ 487 ಉದ್ಯೋಗಾವಕಾಶಗಳಿವೆ.

ವಿದ್ಯಾರ್ಹತೆ ಮತ್ತು ವಯೋಮಿತಿ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿಯಿಂದ ಹಿಡಿದು ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ ಮತ್ತು ಕನಿಷ್ಠ ವಯಸ್ಸು 40 ವರ್ಷ. ಎಸ್ಸಿ/ ಎಸ್‌ಟಿ/ ಪಿಎಚ್‌/ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಜನರಲ್‌/ ಒಬಿಸಿ/ ಇಡಬ್ಲ್ಯುಎಸ್‌ ಅಭ್ಯರ್ಥಿಗಳು 600 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿಸುವುದು ಕಡ್ಡಾಯ. ಇದಕ್ಕಾಗಿ ಭೀಮ್‌ ಯುಪಿಐ, ನೆಟ್‌ ಬ್ಯಾಂಕಿಂಗ್‌, ಕ್ರೆಡಿಟ್‌/ ಡೆಬಿಟ್‌ ಕಾರ್ಡ್‌ ಬಳಸಬಹುದು.

DGHS Recruitment 2023 ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ ಮತ್ತು ಸಂದರ್ಶನ (ಗ್ರೂಪ್‌ ಸಿಗೆ ಮಾತ್ರ) ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಡಿಸೆಂಬರ್‌ ಎರಡನೇ ವಾರ ಪರೀಕ್ಷೆ ನಡೆಯಲಿದ್ದು ಮೂರನೇ ವಾರ ರ‍್ಯಾಂಕ್‌ ಲಿಸ್ಟ್‌ ಹೊರ ಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ: Job Alert: ಎಸ್‌ಐಡಿಬಿಐಯ 50 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶ

ಅರ್ಜಿ ಸಲ್ಲಿಸುವ ವಿಧಾನ

ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್‌ ನಂಬರ್‌: 8009653655, ಇಮೇಲ್‌: hlldghs.helpdesk@gmail.com

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version