ಬೆಂಗಳೂರು: ಸರ್ಕಾರಿ ಉದ್ಯೋಗ (Job Alert) ಆಕಾಂಕ್ಷಿಗಳಿಗೆ ಒಂದು ಗುಡ್ ನ್ಯೂಸ್. ಧಾರವಾಡದ (Dharwad) ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ (University of Agriculture Sciences) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಬೆಳಗಾವಿ (belagavi), ಧಾರವಾಡ, ಹಾವೇರಿಯಲ್ಲಿ (haveri) ಕೆಲಸ ಮಾಡಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು.
ಹುದ್ದೆಯ ವಿವರ ಹೀಗಿದೆ:
ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಒಟ್ಟು 6 ಪ್ರಾಜೆಕ್ಟ್ ಅಸಿಸ್ಟೆಂಟ್, ಸೀನಿಯರ್ ರಿಸರ್ಚ್ ಫೆಲೋ (SRF) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದರಲ್ಲಿ ಸೀನಿಯರ್ ರಿಸರ್ಚ್ ಫೆಲೋ(SRF)-3, ಪ್ರಾಜೆಕ್ಟ್ ಅಸಿಸ್ಟೆಂಟ್- ಹೈಡ್ರಾಲಜಿ (ಫೀಲ್ಡ್)-1, ಪ್ರಾಜೆಕ್ಟ್ ಅಸಿಸ್ಟೆಂಟ್ (RS & GIS)- 2 ಹುದ್ದೆಗಳಿವೆ.
ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳಿಗೆ ಬೆಳಗಾವಿ, ಧಾರವಾಡ, ಹಾವೇರಿಯಲ್ಲಿ ಪೋಸ್ಟಿಂಗ್ ಮಾಡಲಾಗುತ್ತದೆ. ಸೀನಿಯರ್ ರಿಸರ್ಚ್ ಫೆಲೋ (SRF) ಅಭ್ಯರ್ಥಿಗಳಿಗೆ ಮಾಸಿಕ 31,000 ರೂ., ಪ್ರಾಜೆಕ್ಟ್ ಅಸಿಸ್ಟೆಂಟ್- ಹೈಡ್ರಾಲಜಿ (ಫೀಲ್ಡ್) ಅಭ್ಯರ್ಥಿಗಳಿಗೆ ಮಾಸಿಕ 29,000 ರೂ., ಪ್ರಾಜೆಕ್ಟ್ ಅಸಿಸ್ಟೆಂಟ್ (RS & GIS)ಗಳಿಗೆ ಮಾಸಿಕ 21,000- 25,000 ರೂ. ವೇತನ ನೀಡಲಾಗುತ್ತದೆ.
ಶೈಕ್ಷಣಿಕ, ವಯೋಮಿತಿ ಅರ್ಹತೆ ಏನು?
ಸೀನಿಯರ್ ರಿಸರ್ಚ್ ಫೆಲೋ(SRF) ಗೆ ಅರ್ಜಿ ಸಲ್ಲಿರುವ ಅಭ್ಯರ್ಥಿಗಳು ಎಂ.ಎಸ್ಸಿ, ಪಿಎಚ್.ಡಿ ಪದವಿ ಪೂರ್ಣಗೊಳಿಸಿರಬೇಕು. ಪ್ರಾಜೆಕ್ಟ್ ಅಸಿಸ್ಟೆಂಟ್- ಹೈಡ್ರಾಲಜಿ (ಫೀಲ್ಡ್) ವಿಭಾಗಕ್ಕೆ ಅರ್ಜಿ ಸಲ್ಲಿಸುವವರು ಬಿ.ಎಸ್ಸಿ, ಬಿ.ಟೆಕ್ ಹಾಗೂ ಪ್ರಾಜೆಕ್ಟ್ ಅಸಿಸ್ಟೆಂಟ್ (RS & GIS) ಹುದ್ದೆಗೆ ಅರ್ಜಿ ಸಲ್ಲಿಸುವವರು ಪದವಿ, ಬಿ.ಎಸ್ಸಿ, ಬಿಇ/ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು.
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಮೀಸಲಾತಿ ಅನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಇದನ್ನೂ ಓದಿ: Job Alert: ಬ್ಯಾಂಕ್ ಆಫ್ ಬರೋಡಾದ 627 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ಇಲ್ಲಿದೆ ಹೊಸ ಟೈಮ್ ಟೇಬಲ್
ಆಯ್ಕೆ ಪ್ರಕ್ರಿಯೆ ಹೀಗಿರುತ್ತದೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ ಮತ್ತು ಸಂದರ್ಶನದ ಬಳಿಕ ಅರ್ಹರಾದವರನ್ನು ಆಯ್ಕೆ ಮಾಡಲಾಗುತ್ತದೆ.
ಲಿಖಿತ ಪರೀಕ್ಷೆ ಮತ್ತು ಕೌಶಲ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಧಾರವಾಡದ ಕೃಷಿ ನಗರ ಚೇಂಬರ್ ಆಫ್ ಅಸೋಸಿಯೇಟ್ ಡೈರೆಕ್ಟರ್ ಆಫ್ ರಿಸರ್ಚ್ (HQ) ನಲ್ಲಿ ಜುಲೈ 10ರಂದು ಸಂದರ್ಶನ ನಡೆಸಲಾಗುತ್ತದೆ.