ನವದೆಹಲಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ಸರ್ಕಾರಿ ಉದ್ಯೋಗಕ್ಕಿರುವ(Government job) ಬೇಡಿಕೆ ಕಡಿಮೆಯಾಗಿಲ್ಲ. ಅದಲ್ಲಿನ ಭದ್ರತೆ, ಇತರ ಸೌಲಭ್ಯಗಳ ಕಾರಣದಿಂದ ಇಂದಿಗೂ ಯುವ ಜನತೆ ಸರಕಾರಿ ಉದ್ಯೋಗದ ಕಡೆಗೆ ಗಮನ ಹರಿಸುತ್ತಿದೆ. ಅದಕ್ಕೆ ತಕ್ಕಂತೆ ಸದ್ಯ ವಿವಿಧ ಸರಕಾರಿ ಮೂಲಗಳು ಈ ವಾರ ಉದ್ಯೋಗ ಭರ್ತಿ ಮಾಡುವ ನಿಟ್ಟಿನಲ್ಲಿ ನೋಟಿಫಿಕೇಷನ್ ಹೊರಡಿಸಿದ್ದು ನೀವು ಅರ್ಜಿ ಸಲ್ಲಿಸಬಹುದಾಗಿದೆ. ಮಧ್ಯಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್ (MPPSC), ಐಡಿಬಿಐ(IDBI) ಬ್ಯಾಂಕ್ ಸೇರಿದಂತೆ ವಿವಿಧ ಕಡೆಗಳಲ್ಲಿ ಲಭ್ಯವಿರುವ ಉದ್ಯೋಗವಕಾಶಗಳ ಮಾಹಿತಿ ಇಲ್ಲಿದೆ.
MPPSCನಲ್ಲಿ 227 ಹುದ್ದೆ ಖಾಲಿ
ಪಿಸಿಎಸ್ (PCS)ಹುದ್ದೆಗಳನ್ನು ಭರ್ತಿ ಮಾಡಲು ಮಧ್ಯ ಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್-MPPSC ಈಗಾಗಲೇ ಕಾರ್ಯಾರಂಭಿಸಿದೆ. ಸೆಪ್ಟಂಬರ್ 22ರಂದು ನೋಟಿಫಿಕೇಷನ್ ಹೊರಡಿಸಿದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ MPPSCನ ಅಧಿಕೃತ ವೆಬ್ ಸೈಟ್ mppsc.mp.gov.in. ಭೇಟಿ ನೀಡಿ. ಸೂಚನೆ ಪ್ರಕಾರ ಡಿಸೆಂಬರ್ 12ರಂದು ಪರೀಕ್ಷೆ ನಡೆಯಲಿದೆ. ಸುಮಾರು 227 PCS ಹುದ್ದೆಗಳನ್ನು ಭರ್ತಿ ಮಾಡುವುದಾಗಿ MPPSC ತಿಳಿಸಿದೆ. ಮಧ್ಯ ಪ್ರದೇಶದವರು ಮತ್ತು ಇತರ ಯಾವುದೇ ರಾಜ್ಯದವರು ಅರ್ಜಿ ಸಲ್ಲಿಸಬಹುದು. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು.
UPPSCಯಲ್ಲಿದೆ 2,240 ಹುದ್ದೆಗಳು
ಉತ್ತರ ಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್ (UPPSC) ಸ್ಟಾಫ್ ನರ್ಸ್ ಹುದ್ದೆಗೆ ನೋಂದಣಿ ಮಾಡುವ ದಿನಾಂಕವನ್ನು ವಿಸ್ತರಿಸಿದೆ. ಅಭ್ಯರ್ಥಿಗಳು ಸೆಪ್ಟಂಬರ್ 29ರ ತನಕ ಪರೀಕ್ಷೆಗಾಗಿ ನೋಂದಣಿ ಮಾಡಬಹುದಾಗಿದೆ. ಒಟ್ಟು 2,240 ಸ್ಟಾಫ್ ನರ್ಸ್ ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದ್ದು ಅದರಲ್ಲಿ 2,069 ಮಹಿಳೆಯರು ಮತ್ತು 171 ಪುರುಷ ನರ್ಸ್‌ಗಳು ಸೇರಿದ್ದಾರೆ. ಅಭ್ಯರ್ಥಿಗಳು uppsc.up.nic.in. ಮೂಲಕ ನೋಂದಣಿ ಮಾಡಿಕೊಳ್ಳಬೇಕು.
BTSCಯಲ್ಲಿ ಖಾಲಿ ಇದೆ 1,279 ಟ್ರೇಡ್ ಇನ್‌ಸ್ಟ್ರಕ್ಟರ್ ಹುದ್ದೆ
ಬಿಹಾರ ಟೆಕ್ನಿಕಲ್ ಸರ್ವಿಸ್ ಕಮಿಷನ್(BTSC) ಖಾಲಿ ಇರುವ ಒಟ್ಟು 1,279 ಟ್ರೇಡ್ ಇನ್ಟ್ರಕ್ಟರ್ ಹುದ್ದೆಗಳ ಭರ್ತಿಗೆ ನೋಟಿಫಿಕೇಷನ್ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್ ಸೈಟ್ btsc.bih.nic.in. ಮೂಲಕ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಅಕ್ಟೋಬರ್ 18. ವಿವಿಧ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಬೋಧನೆ ಮಾಡಲು ಇವರನ್ನು ನೇಮಿಸಲಾಗುವುದು. ಅಭ್ಯರ್ಥಿಗಳು ಪದವಿ ಅಥವಾ ಡಿಪ್ಲೋಮಾ ಓದಿರಬೇಕು.
ಇದನ್ನೂ ಓದಿ: Border Roads Organisation : ಗಡಿ ರಸ್ತೆಗಳ ಕಾರ್ಮಿಕರು ಮೃತಪಟ್ಟರೆ ಸರ್ಕಾರಿ ಸೌಲಭ್ಯಗಳು, ಕೇಂದ್ರ ಸರ್ಕಾರದ ಯೋಜನೆ
IDBI ಬ್ಯಾಂಕ್‌ನಲ್ಲಿ 600 ಹುದ್ದೆಗಳು
IDBI ಬ್ಯಾಂಕ್ ಜ್ಯೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್(Grade 0) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 600 ಹುದ್ದೆಗಳಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ idbibank.in.ಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಸೆಪ್ಟಂಬರ್ 30 ಹೆಸರು ನೋಂದಾಯಿಸಲು ಕೊನೆಯ ದಿನ. ಪರೀಕ್ಷೆ ಅಕ್ಟೋಬರ್ 20ರಂದು ನಡೆಯುವ ಸಾಧ್ಯತೆ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 20 ವರ್ಷ ದಾಟಿರಬೇಕು ಮತ್ತು ಗರಿಷ್ಠ 25 ವರ್ಷದ ಒಳಗಿರಬೇಕು.