ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organization) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಅರ್ಜಿ ಆಹ್ವಾನಿಸಿದೆ. ಲೈಬ್ರರಿ ಅಸಿಸ್ಟಂಟ್, ಟೆಕ್ನಿಶಿಯನ್ ಬಿ/ ಡ್ರಾಫ್ಟ್‌ಮ್ಯಾನ್ ಬಿ, ಫೈರ್‌ಮ್ಯಾನ್ ಎ, ಕುಕ್, ಡ್ರೈವರ್ ಸೇರಿ ಸುಮಾರು 224 ಹುದ್ದೆಗಳು ಖಾಲಿ ಇವೆ (ISRO URSC Recruitment 2024). ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 16 (Job Alert).
ಹುದ್ದೆಗಳ ವಿವರ
ಸೈಂಟಿಸ್ಟ್ / ಎಂಜಿನಿಯರ್-5 ಹುದ್ದೆ – ವಿದ್ಯಾರ್ಹತೆ: ಎಂ.ಇ / ಎಂ.ಟೆಕ್ / ಎಂ.ಎಸ್‌ಸಿ
ಟೆಕ್ನಿಕಲ್ ಅಸಿಸ್ಟಂಟ್-55 ಹುದ್ದೆ – ವಿದ್ಯಾರ್ಹತೆ: ಪ್ರಥಮ ದರ್ಜೆಯೊಂದಿಗೆ ಡಿಪ್ಲೋಮಾ ತೇರ್ಗಡೆ
ಸೈಂಟಿಫಿಕ್ ಅಸಿಸ್ಟಂಟ್-6 ಹುದ್ದೆ – ವಿದ್ಯಾರ್ಹತೆ: ಪ್ರಥಮ ದರ್ಜೆಯೊಂದಿಗೆ ಬಿ.ಎಸ್‌ಸಿಯಲ್ಲಿ ತೇರ್ಗಡೆ
ಲೈಬ್ರರಿ ಅಸಿಸ್ಟಂಟ್-1 ಹುದ್ದೆ – ವಿದ್ಯಾರ್ಹತೆ: ಲೈಬ್ರರಿ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ
ಟೆಕ್ನಿಶಿಯನ್ ಬಿ / ಡ್ರಾಫ್ಟ್ಸ್‌ಮ್ಯಾನ್ ಬಿ-142 ಹುದ್ದೆ – ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ
ಫೈರ್ ಮ್ಯಾನ್ ಎ – 3 ಹುದ್ದೆ – ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ / ಎಸ್‌ಎಸ್‌ಸಿ
ಕುಕ್-4 ಹುದ್ದೆ – ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ / ಎಸ್‌ಎಸ್‌ಸಿ
ಲಘು ಮೋಟಾರ್ ವಾಹನದ ಡ್ರೈವರ್ (LMV Driver)-6 ಹುದ್ದೆ – ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ / ಎಸ್‌ಎಸ್‌ಸಿ
ಭಾರೀ ಮೋಟಾರ್ ವಾಹನದ ಡ್ರೈವರ್ (HMV Driver)-2 ಹುದ್ದೆ – ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ / ಎಸ್‌ಎಸ್‌ಸಿ
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ / ಸ್ಕಿಲ್ ಟೆಸ್ಟ್, ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: Job Alert: ಎನ್‌ಸಿಇಆರ್‌ಟಿಯ 170 ಹುದ್ದೆಗಳಿಗೆ ನೇರ ಸಂದರ್ಶನ; ಪದವಿ ಹೊಂದಿದವರಿಗೆ ಅವಕಾಶ