Site icon Vistara News

Malleshwaram Job Fair: ಫೆ.11ರಂದು ʼನಮ್ಮ ಮಲ್ಲೇಶ್ವರ ಉದ್ಯೋಗ ಮೇಳʼ

#image_title

ಬೆಂಗಳೂರು: ‘ಸರ್ವರಿಗೂ ಉದ್ಯೋಗ’ ನೀತಿಯಡಿ ಕೌಶಲಾಭಿವೃದ್ಧಿ ಇಲಾಖೆಯ ವತಿಯಿಂದ ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಪ್ರಥಮ ದರ್ಜೆ ಮತ್ತು ಪದವಿಪೂರ್ವ ಕಾಲೇಜು ಆವರಣದಲ್ಲಿ ಫೆ.11ರಂದು ಶನಿವಾರ ʼನಮ್ಮ ಮಲ್ಲೇಶ್ವರ ಉದ್ಯೋಗ ಮೇಳʼ (Malleshwaram Job Fair) ಏರ್ಪಡಿಸಲಾಗಿದೆ. ಕೌಶಲಾಭಿವೃದ್ಧಿ ಸಚಿವ ಮತ್ತು ಕ್ಷೇತ್ರದ ಶಾಸಕರೂ ಆಗಿರುವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮೇಳಕ್ಕೆ ಚಾಲನೆ ನೀಡಲಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಇಲಾಖೆಯು, ಮೇಳದಲ್ಲಿ ಜೆ.ಪಿ.ಮೋರ್ಗನ್, ಐಸಿಐಸಿಐ, ಕಾನ್ಸಂಟ್ರಿಕ್ಸ್, ಎಸ್ ಬಿ ಐ ಲೈಫ್, ಪೇಟಿಎಂ, ಎಲ್ಐಸಿ ಮುಂತಾದ 125ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ. ಒಟ್ಟು 28 ಸಾವಿರ ಉದ್ಯೋಗಾವಕಾಶಗಳಿದ್ದು, ಯುವಜನರಿಗೆ ಇದು ಉತ್ತಮ ವೇದಿಕೆಯಾಗಿದೆ ಎಂದಿದೆ.

ಇದನ್ನೂ ಓದಿ | puc exam 2023 : ಮರುಮೌಲ್ಯಮಾಪನದ ವೇಳೆ ಒಂದು ಅಂಕ ಹೆಚ್ಚು ಬಂದರೂ ಪರಿಗಣನೆ, ಶಿಕ್ಷಣ ಇಲಾಖೆ ಆದೇಶ

ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್ ಮತ್ತು ಯಾವುದೇ ಪದವಿ ಪಡೆದಿರುವವರು ಮೇಳದಲ್ಲಿ ಭಾಗವಹಿಸಬಹುದು. ಮೇಳವು ಬೆಳಗ್ಗೆ 9 ಗಂಟೆಯಿಂದ ಸಂಜೆ 5ರವರಗೆ ನಡೆಯಲಿದೆ. ಈಗಾಗಲೇ ಇಲಾಖೆಯ ಸ್ಕಿಲ್ ಕನೆಕ್ಟ್ ಪೋರ್ಟಲ್‌ನಲ್ಲಿ 2,500 ಆಸಕ್ತರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದೆ.

Exit mobile version