ಬೆಂಗಳೂರು: ಭಾರತ ಸರ್ಕಾರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ʼರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ʼ (NABARD) ಅಸಿಸ್ಟೆಂಟ್ ಮ್ಯಾನೇಜರ್ (ಗ್ರೇಡ್ ಎ) ಹುದ್ದೆಗಳ ನೇಮಕಕ್ಕೆ (Job News) ಇಂದಿನಿಂದ (ಜು.೧೮) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದೆ. ಒಟ್ಟು ೧೭೦ ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಆಗಸ್ಟ್ 07 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
೧೭೦ ಹುದ್ದೆಗಳ ಪೈಕಿ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಬ್ಯಾಂಕಿಂಗ್ ಸೇವಾ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಸಂಖ್ಯೆಯೇ ೧೬೧. ಇದರೊಂದಿಗೆ ರಾಜಾಭಾಷ ಸೇವೆಗೆ ಸಂಬಂಧಿಸಿದ ೭ ಮತ್ತು ಸೆಕ್ಯುರಿಟಿ ಸೇವೆಗೆ ಸಂಬಂಧಿಸಿದ ೨ ಹುದ್ದೆಗಳಿಗೆ ನೇಮಕ ನಡೆಯಲಿದೆ. ಈ ನೇಮಕಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ ೭ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತದೆ.
ವಿದ್ಯಾರ್ಹತೆ ಏನು?
ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಬ್ಯಾಂಕಿಂಗ್ ಸೇವಾ ವಿಭಾಗದ ೧೬೧ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಲ್ಲಿ ಜನರಲ್ ವಿಭಾಗದಲ್ಲಿ ೮೦ ಹುದ್ದೆಗಳಿಗೆ ನೇಮಕ ನಡೆಯಲಿದೆ. ಈ ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆದರೆ ಪದವಿಯಲ್ಲಿ ಶೇ. ೬೦ರಷ್ಟು (ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಶೇ. ೫೫) ಅಂಕ ಪಡೆದಿರಬೇಕಾದದು ಕಡ್ಡಾಯ. ಸ್ನಾತಕೋತ್ತರ ಪದವಿ (MBA/PGDM) ಪಡೆದವರು ಅರ್ಜಿಸಲ್ಲಿಸ ಬಹುದಾಗಿದ್ದು, ಶೇ.೫೫ ರಷ್ಟು (ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಶೇ. ೫೦) ಅಂಕ ಪಡೆದಿರಬೇಕು. ಸಿಎ, ಐಸಿಡಬ್ಲ್ಯುಎ ಮಾಡಿದವರೂ ಅರ್ಜಿ ಸಲ್ಲಿಸಬಹುದು.
ಉಳಿದ ಹುದ್ದೆಗಳನ್ನು ಕೃಷಿ ಎಂಜಿನಿಯರಿಂಗ್, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ತೋಟಗಾರಿಕೆ, ಭೂ ಅಭಿವೃದ್ಧಿ ಅಥವಾ ಮಣ್ಣಿನ ವಿಜ್ಞಾನ, ಜಲಸಂಪನ್ಮೂಲ, ಸಿವಿಲ್ ಎಂಜಿನಿಯರಿಂಗ್, ಎನ್ವಿರೋಮೆಂಟಲ್ ಎಂಜಿನಿಯರಿಂಗ್/ ಸೈನ್ಸ್/ ಫೈನಾನ್ಸ್ (೩೦ ಹುದ್ದೆ), ಅಗ್ರಿ ಮಾರ್ಕೆಟಿಂಗ್/ಅಗ್ರಿ ಬಿಸ್ನೆಎಸ್ ಮಾನೇಜ್‌ಮೆಂಟ್/ ಡೆವಲಪ್‌ಮೆಂಟ್ ಮ್ಯಾನೇಜ್‌ಮೆಂಟ್, ಕಂಪೂಟರ್/ಇನ್‌ಫಾರ್ಮೆಷನ್ ಟೆಕ್ನಾಲಜಿ (೨೫ ಹುದ್ದೆ) ಈ ಯಾವುದಾದರೂ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಇವರು ಕೂಡ ಪದವಿಯಲ್ಲಿ ಶೇ. ೬೦ರಷ್ಟು (ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಶೇ. ೫೫) ಅಂಕ ಪಡೆದಿರಬೇಕಾದದು ಕಡ್ಡಾಯ.
ವಯೋಮಿತಿ ಎಷ್ಟು?
೨೧ ರಿಂದ ೩೦ ವರ್ಷದೊಳಗಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷ ವಿನಾಯಿತಿ ನೀಡಲಾಗಿರುತ್ತದೆ.
ನೇಮಕ ಹೇಗೆ?
ಎರಡು ಹಂತದ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲಿಗೆ ೨೦೦ ಅಂಕಗಳಿಗೆ ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್) ನಡೆಯಲಿದ್ದು, ಇದರಲ್ಲಿ ಅರ್ಹತೆ ಪಡೆದವರಿಗೆ ಮುಖ್ಯ ಪರೀಕ್ಷೆ (ಮೇನ್) ನಡೆಸಲಾಗುತ್ತದೆ. ಈ ಪರೀಕ್ಷೆಯೂ ೨೦೦ ಅಂಕಗಳಿಗೆ ನಡೆಯಲಿದೆ. ಇದರಲ್ಲಿ ಹೆಚ್ಚು ಅಂಕ ಪಡೆದವರಿಗೆ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಸಂದರ್ಶನಕ್ಕೆ ೫೦ ಅಂಕ ನಿಗದಿಯಾಗಿರುತ್ತದೆ. ರಾಜ್ಯದ ಒಂಬತ್ತು ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆಯ ಕೇಂದ್ರಗಳಿರಲಿವೆ. ಮುಖ್ಯ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುತ್ತದೆ.
ರಾಜ್ಯದಲ್ಲಿನ ಪೂರ್ವಭಾವಿ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಬೆಳಗಾವಿ, ಹುಬ್ಬಳಿ-ಧಾರವಾಡ, ಹಾಸನ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ.
ಮುಖ್ಯಪರೀಕ್ಷೆ ನಡೆಯುವ ಕೇಂದ್ರ: ಬೆಂಗಳೂರು
ಅಜ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಶುಲ್ಕ ಎಷ್ಟು?
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಇಂಟಿಮೇಷನ್ ಚಾರ್ಜ್ ೧೫೦ ರೂ. ಪಾವತಿಸಬೇಕಿರುತ್ತದೆ. ಮತ್ತೆಲ್ಲಾ ಅಭ್ಯರ್ಥಿಗಳು ೬೫೦ ರೂ. ಅಪ್ಲಿಕೇಷನ್ ಶುಲ್ಕ ಮತ್ತು ೧೫೦ ರೂ. ಇಂಟಿಮೇಷನ್ ಶುಲ್ಕ ಸೇರಿದಂತೆ ಒಟ್ಟು ೮೦೦ರೂ. ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಗೆ ಅವಕಾಶ ನೀಡಲಾಗಿರುತ್ತದೆ.
ಈ ನೇಮಕಾತಿಯ ಅಧಿಸೂಚನೆಗೆ ಇಲ್ಲಿ ಕ್ಲಿಕ್ ಮಾಡಿ
ವೇತನ ಎಷ್ಟು?
ಅಸಿಸ್ಟೆಂಟ್ ಮ್ಯಾನೇಜರ್ ವೇತನ ಶ್ರೇಣಿ ಇಂತಿದೆ; ರೂ. 28150-1550(4)-34350-1750(7)–46600–EB-1750(4)-53600- 2000(1)-55600 ಇದರ ಜತೆಗೆ ಇತರ ಭತ್ಯೆಗಳು ಸೇರಿ ಅಂದಾಜು ಮಾಸಿಕ ೭೦,೦೦೦ ವೇತನ ನೀಡಲಾಗುತ್ತದೆ.
ಇದನ್ನೂ ಓದಿ| Job News | ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ನಬಾರ್ಡ್