Site icon Vistara News

Assistant Professor Recruitment | ಅಂತಿಮ ಮೆರಿಟ್‌ ಪಟ್ಟಿ ಪ್ರಕಟಿಸಿದ ಕೆಇಎ

Assistant Professor

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ (KEA Assistant Professor Recruitment 2021) 1, 242 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವಿಷಯವಾರು ಅಂತಿಮ ಮೆರಿಟ್‌ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಪಟ್ಟಿಯಲ್ಲಿ ಅರ್ಜಿಯ ಸಂಖ್ಯೆ, ಅರ್ಹತೆ ಪಡೆದವರ ಹೆಸರು, ವಿಷಯಗಳಲ್ಲಿ ಪಡೆದ ಅಂಕ, ಐಚ್ಛಿಕ ವಿಷಯಗಳ ಅಂಕ, ಮೀಸಲಾತಿ ಕೆಟಗರಿ ಮತ್ತಿತರ ಮಾಹಿತಿ ಒದಗಿಸಲಾಗಿದೆ. ಇನ್ನು ದಾಖಲೆ ಪರಿಶೀಲನೆ ನಡೆಸಿ, ವೈದ್ಯಕೀಯ ಪರೀಕ್ಷೆ ನಡೆಸಿ ಈ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಒಟ್ಟಾರೆ ಒಂದು ವರ್ಷದ ಅವಧಿಯಲ್ಲಿ ಈ ನೇಮಕ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ.

ಮೆರಿಟ್‌ ಪಟ್ಟಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ| https://cetonline.karnataka.gov.in/kea/gfgc2021

ಕಳೆದ ಮಾರ್ಚ್‌ ೧೪, ೧೫ ಮತ್ತು ೧೬ ರಂದು ಈ ನೇಮಕಕ್ಕೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ನಂತರ ತಾತ್ಕಾಲಿಕ ಕೀ ಉತ್ತರ ಪ್ರಕಟಿಸಿ, ಆಕ್ಷೇಪಣೆ ಪಡೆದು, ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಕಳೆದ ತಿಂಗಳು ತಾತ್ಕಾಲಿಕ ಮೆರಿಟ್‌ ಪಟ್ಟಿ ಪ್ರಕಟಿಸಲಾಗಿತ್ತು. 2021 ರ ಸೆಪ್ಟೆಂಬರ್‌ ೩೦ ರಂದು ಈ ನೇಮಕಾತಿಯ ಅಧಿಸೂಚನೆ ಪ್ರಕಟಗೊಂಡಿತ್ತು.

ಮತ್ತೊಂದು ನೇಮಕಕ್ಕೆ ಸದ್ಯವೇ ಅಧಿಸೂಚನೆ
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಒಟ್ಟು 778 ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಈಗಾಗಲೇ ಅನುಮತಿ ನೀಡಿದ್ದು, ಸದ್ಯವೇ ಅಧಿಸೂಚನೆ ಪ್ರಕಟವಾಗಲಿದೆ.

ಈ ವಿಷಯವನ್ನು ಶಿಕ್ಷಣ ಸಚಿವರೇ ಸೆ.೧೦ರಂದು ಇತ್ತೀಚೆಗೆ ಟ್ವೀಟ್‌ ಮಾಡಿ ತಿಳಿಸಿದ್ದಾರೆ. ಕನ್ನಡ-100, ಇಂಗ್ಲಿಷ್-120, ಇತಿಹಾಸ-120, ಅರ್ಥಶಾಸ್ತ್ರ-180, ಭೂಗೋಳಶಾಸ್ತ್ರ-20, ವಾಣಿಜ್ಯಶಾಸ್ತ್ರ-80, ಸಮಾಜಶಾಸ್ತ್ರ-75 ಒಟ್ಟು 778 ಹುದ್ದೆಗಳಿಗೆ ನೇಮಕ ನಡೆಯಲಿದೆ.

ಇದನ್ನೂ ಓದಿ| KPSC Recruitment 2022 | ಅಸಿಸ್ಟೆಂಟ್‌ ಎಂಜಿನಿಯರ್‌ ಹುದ್ದೆಗಳಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ

Exit mobile version